ರಾಜ್ಯ ಸರಕಾರ ಇಟಗಿ ಉತ್ಸವ ಆಚರಿಸಲಿ: ಮಹಾದೇವ ದೇವರು

ಲೋಕದರ್ಶನ ವರದಿ

ಕುಕನೂರು 03: ರಾಜ್ಯ ಸಕರ್ಾರ 'ಇಟಗಿ ಉತ್ಸವ' ಆಚರಿಸದೇ, ಖಾಸಗಿಯಾಗಿ 15 ವರ್ಷಗಳ ಕಾಲ ನಿರಂತರ ಜಿಲ್ಲಾ ನಾಗರಿಕ ವೇದಿಕೆ ಮಾಡುತ್ತಾ ಬಂದಿದೆ. ಈ ಕಾರ್ಯ ನೀಜಕ್ಕೂ  ಶ್ಲಾಘನೀಯ ಎಂದು ಅನ್ನದಾನೇಶ್ವರ ಮಠದ ಮಹದೇವ ದೇವರು ಹೇಳಿದರು.

ತಾಲ್ಲೂಕಿನ  ಇಟಗಿ ಗ್ರಾಮದದಲ್ಲಿ ನಡೆದ 15ನೇ ಇಟಗಿ ಉತ್ಸವ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. 

ಇಟಗಿಯ ಮಹಾದೇವ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹಾದೇವ ದಂಡನಾಯಕ ಮಹತ್ತರ ಯುದ್ಧ ಜಯಿಸಿದ ಪ್ರತೀಕವಾಗಿ ನಿಮರ್ಿಸಿದ್ದಾನೆ ಎಂದರು.

ದೇಶದಲ್ಲೇ ಅತ್ಯದ್ಭುತ ಎನ್ನಲಾಗುವ ವಾಸ್ತುಶಿಲ್ಪ ಹೊಂದಿರುವುದರಿಂದ 'ದೇವಾಲಯಗಳ ಚಕ್ರವತರ್ಿ ಎಂದೂ ಈ ದೇವಸ್ಥಾನವನ್ನು ಕರೆಯುವುದುಂಟು. 900 ವರ್ಷದ ಇತಿಹಾಸವಿರುವ ಈ ದೇವಾಲಯದಲ್ಲಿ ಬಾದಾಮಿ ಚಾಲುಕ್ಯರ ಒರಟು ಮತ್ತು ಹೊಯ್ಸಳರ ಸೂಕ್ಷ್ಮ ಕೆತ್ತನೆಗಳು ಮೇಳೈಸಿವೆ ಎಂದೇ ಹೇಳಲಾಗುತ್ತದೆ. ಗರ್ಭಗುಡಿ, ಸುಕನಾಸಿ,  ನವರಂಗ ಮಂಟಪಗಳನ್ನು ಒಳಗೊಂಡಿರುವ ಈ ದೇವಾಲಯ ಪರಿಪೂರ್ಣ ದೇವಾಲಯ ಎಂದೇ ಬಿಂಬಿತವಾಗಿದೆ. ಈ ದೇವಾಲಯದ ಕುರಿತು ಗುಣಗಾನ ಮಾಡಿರುವ ಕಸೀನ್ಸ್ ಅವರು 'ಕನರ್ಾಟದಲ್ಲಿಯೇ ಇದೊಂದು ವಿಶಿಷ್ಟ ದೇವಾಲಯ' ಎಂದಿದ್ದಾರೆ.

ಅಂತರಾಷ್ಟ್ರೀಯ ಕಲಾವೀದ ಬಸವರಾಜ ಗವಿಮಠ ಮಾತನಾಡಿ, ಈ ಇಟಗಿ ಉತ್ಸವ ಮೂರು ದೀನಗಳ ಕಾಲ ನೆಡೆಯತಿದ್ದು, ಇಲ್ಲಿ ಜನಪದ ಜಾತ್ರೆ, ಸಾಂಸ್ಕೃತಿಕ ಪ್ರತಿಭೆಗಳ ಅನಾವರಣ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಜರಗಲಿವೆ, ಎಂದರು. 

ಗಂಗಾವತಿಯ ಪ್ರತಿಭಾ ಕಲಾ ಕೇಂದ್ರ ಕಲಾ ತಂಡದಿಂದ ಭರತ ನಾಟ್ಯ ನೆರವೇರಿತು. ಸಂಗೀತ ಶಿಕ್ಷಕಿ ದೀಪಾ ಶ್ಯಾನದರೋಜಿ, ಕಲಾವೀದರಾದ ನಂದೀನಿ, ಸಂಚಿತಾ, ಸುಮಾ, ದೃತಿ, ಚಂದನಾ, ನಮ್ರತಾ, ವರಣೀಕಾ ನೃತ್ಯ ಪ್ರದಶರ್ಿಸಿದರು. ಬೆಂಗಳೂರಿನ ರಾಷ್ಟ್ರೀಯ ಮಕ್ಕಳ ಪ್ರತೀಭಾ  ಕಲಾ ಕೇಂದ್ರ ತಂಡದಿಂದ ಭರತ ನಾಟ್ಯ ನೆರವೇರಿತು. ನಾಗರಿಕ ವೇದಿಕೆಯಲ್ಲಿ ರಾಜ್ಯಧ್ಯಕ್ಷ ಮಹೇಶ ಬಾಬು ಸುವರ್ೆ,  ಬಿ.ಎಂ ಹಳ್ಳಿ, ಶರಣಪ್ಪ ದಾನಕೈ, ಬಸವರಾಜ ಬೂದಿನಾಳ, ಎನ್.ಸಿ ಫಣಿ, ಕಾವ್ಯ ಬಸಪ್ಪ, ಪುಸ್ಪಾ ಮುದ್ದಾಬಳ್ಳಿ, ಶೇಖರಗೌಡ ಬಿನ್ನಾಳ ಇದ್ದರು.