ರಾಜ್ಯದ ಪ್ರಥಮ ಅಧಿವೇಶನ: ಸಂತೋಷಕರ

ಲೋಕದರ್ಶನ ವರದಿ

ಕೊಪ್ಪಳ 04: ಪ್ರಪ್ರಥಮ ಬಾರಿಗೆ ರಾಜ್ಯದ ಕರ್ನಾಟಕ  ರಾಜ್ಯ ಶಾಮಿಯಾನ ಡೆಕೋರೇಶನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಲ್ ಇಂಡಿಯಾ ಟೆಂಟ್ ಆಂಡ್ ಡೆಕೋರೇಟರ್ಸ್ ವೆಲ್ ಫೇರ್ ಅಸೋಸಿಯೆಷನ್ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯದ ಪ್ರಥಮ ಅಧಿವೇಶನ ಕೊಪ್ಪಳದಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ ಎಂದು ರಾಜ್ಯಾಧ್ಯಕ್ಷ ಮಹೆಬೂಬ್ ಮುಲ್ಲಾ ಸಿದ್ದಾಪುರ ಅವರು ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿತ್ತಾ ಶಾಮಿಯಾನ ಡೆಕೋರೇಶನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿಸಂಘ ಕೇವಲ ಉತ್ತರ ಕರ್ನಾಟಕಕ್ಕೆ ಸಿಮಿತ ಇತ್ತು ಆದರೆ ಈಗ ಆಖಂಡ ಕನರ್ಾಟಕ ರಾಜ್ಯ ಕರ್ನಾಟಕ  ರಾಜ್ಯ ಶಾಮಿಯಾನ ಡೆಕೋರೇಶನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿಸಂಘ  ಆಗಿ ಪರಿವರ್ತನೆಯಾಗಿದೆ, ಇಡಿ ರಾಜ್ಯದ ನಮ್ಮ ಸಂಘದವತಿಯಿಂದ ಇದೆ ಮೊದಲ ಬಾರಿಗೆ ಕೊಪ್ಪಳದಲ್ಲಿ ಮಹಾ ಅಧಿವೇಶನ ಹಮ್ಮಿಕೊಂಡಿದ್ದೇವೆ ಎಂದರು, ನಾವು ಹಾಕುವ ಡೆಕೋರೇಶನ್ಗೆ ಸಕರ್ಾರ ಸವರ್ಿಸ್ ಟ್ಯಾಕ್ಸ್ ಹಾಕುತ್ತಿದೆ, ಹೆಚ್ಚಿನ ಟ್ಯಾಕ್ಸ್ ಹಾಕುತಿತ್ತು, ನಾವು ಹೋರಾಟಮಾಡಿ ಸುಂಕದ ಪ್ರಮಾಣ ಕಡಿಮೆ ಮಾಡಿಸಿದ್ದೇವೆ, ಸಕರ್ಾರ ನಮಗೆ ಗೌರಿ ಗಣೇಶನ ಹಬ್ಬ ಸಮಯದಲ್ಲಿ ನಮಗೆ ಸಿಜನ್ ಇದ್ದಾಗ ನಿಷೇಧ ಹೆರುತ್ತದೆ, ಅದಕ್ಕೆ ಆನೇಕ ಕಾರಣಗಳು ನೀಡುತ್ತದೆ ಆದರೆ ಅದೆ ಸಕರ್ಾರಿ ಸಮಾರಂಭಗಳು ಇದ್ದಾಗ ಅದೆ ಡಿಜೆ ಉಪಯೋಗಿಸುತ್ತಾರೆ ಎಂದು ದೂರಿದರು. ನಮ್ಮ ಸಂಘ ಉತ್ತರ ಕನರ್ಾಟಕಕ್ಕೆ ಸಿಮಿತ ಇದ್ದಾಗ ನಾವು ಅನೇಕ ಬಡ ವಿದ್ಯಾರ್ಥಿ ಗಳಿಗೆ ನೋಟ್ ಬುಕ್ ಹಂಚುವ ಕೆಲಸ ಮಾಡಿದ್ದೇವೆ, ಹಾಗೂ ತುಂಗಭದ್ರ ಜಲಶಾಯದ ಹೋಳುತ್ತೆವುದಕ್ಕೂ ಧನ ಸಹಾಯ ಮಾಡಿದೆ ಇನ್ನು ಅನೇಕ ಸಮಾಜ ಮುಖಿ ಕೆಲಸಗಳು ಮಾಡಿದೆ ಎಂದು ಹೇಳೀದರು. ನಮ್ಮ ಈ ಅಧಿವೇಶನದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರುತ್ತವೆ, ಅದರಲ್ಲಿ ಹೋಸ ಹೊಸ ತರಹದ ಡೆಕೋರೇಟ್ ಸಾಮಾನುಗಳು ಸಿಗುತ್ತವೆ, ಕಾರಣ ನಮ್ಮ ಭಾಗದ ಸಂಘದ ಸದಸ್ಯರಿಗೆ ಡೆಕೋರೇಟ್ ಸಾಮಾನುಗಳು ಸುಲಭದಲ್ಲಿ ದೊರೆಯುವಂತಾಗಲಿ ಎಂಬ ಕಾರಣಕ್ಕಾಗಿ ಈ ಅವಕಾಶ ಕಲ್ಪಿಸಿ ಕೊಟ್ಟದ್ದೇವೆ ಎಂದರು. ಈ ಅಧಿವೇಶನ ಮೂರು ದಿನಗಳ ಕಾಲ ಅಂದರೆ ಜುಲೈ 4 ರಿಂದ 6ರ ವರೆಗೆ ನಡೆಯುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಹೋನ್ನಪ್ಪ ಬಳ್ಳಾರಿ, ಮಂಜುನಾಥ ಕೊರಿ, ಶ್ರೀನಾಥ, ದಾವೂದ್ ಕಣಸಾವಿ,  ಇನ್ನು ಅನೇಕರು ಉಪಸ್ಥಿತರಿದ್ದರು.