ಆಸರೆ ಸಂಸ್ಥೆಗೆ ರಾಜ್ಯ ಉತ್ತಮ ಸೇವಾ ಸಂಸ್ಥೆ ಪ್ರಶಸ್ತಿ

ಲೋಕದರ್ಶನ ವರದಿ

ಶಿರಹಟ್ಟಿ : ಇತ್ತೀಚೆಗೆ ಸಮಾಜದಲ್ಲಿನ ಬದಲಾವಣೆಗಳಲ್ಲಿ ಮುಖ್ಯ ಪಾತ್ರ ವಹಿಸಿ ಸೇವೆ ಸಲ್ಲಿಸುತ್ತಿರುವ ಸಂಘ ಸೇವಾ ಸಂಸ್ಥೆಗಳನ್ನು ಗುರುತಿಸಿ ಅವುಗಳ ಬಲವರ್ದನೆ ಶಕ್ತಿ ತುಂಬಲು ಬೆಂಗಳೂರು ಮೂಲದ ರೀಚ್ ಫಾರ್ ಕಾಜ್ ಸಂಸ್ಥೆಯು "ಸೋಸಿಯಲ್ ಇಂಪ್ಯಾಕ್ಟ್ ಅವಾರ್ಡ 2019 ಫಾರ್ ಬೆಸ್ಟ್ ಸೋಸಿಯಲ್ ವರ್ಕ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಈ ಪ್ರಶಸ್ತಿ ಪಡೆದು ಕೆಲವೇ ದಿನಗಳಲ್ಲಿ ಮತ್ತೊಂದು ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಲಕ್ಷ್ಮೇಶ್ವರದಲ್ಲಿ ಜರುಗಿದ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆಯು ರಾಜ್ಯದೆಲ್ಲೆಡೆ ಉತ್ತಮ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸೇವೆಗಳನ್ನು ಪರಿಗಣಿಸಿ "ರಾಜ್ಯ ಉತ್ತಮ ಸೇವಾ ಸಂಸ್ಥೆ ಪ್ರಶಸ್ತಿ-2019" ನ್ನು ನೀಡಿ ಗೌರವಿಸಿದೆ. ಈ ಪ್ರಶಸ್ತಿಗಳನ್ವಯ ರಾಜ್ಯದೆಲ್ಲೆಡೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಮಹನೀಯರಿಗೆ ರಾಜ್ಯ ರತ್ನ ಪ್ರಶಸ್ತಿ ಹಾಗೂ ರಾಜ್ಯ ಉತ್ತಮ ಸೇವಾ ಸಂಸ್ಥೆ ಪ್ರಶಸ್ತಿ-2019ಯನ್ನು ಗುಡಗೇರಿ ಪೋಲೀಸ್ ಠಾಣೆ, ಶಿರಹಟ್ಟಿಯ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ, ರಾಣೆಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆ ಹಾಗೂ ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗ ಸೇರಿ ಮುಡಿಗೇರಿಸಿಕೊಂಡವು. 

ಹಿರಿಯ ಸಾಹಿತಿ ಬಿ ಶ್ರೀನಿವಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಉದ್ಘಾಟನೆಯನ್ನು ಸಾಹಿತಿ ಹಾಗೂ ಪತ್ರಕರ್ತ ರಮಜಾನ್ ದಗರ್ಾ, ಮಾಜಿ ಲೋಕಸಭಾ ಸದಸ್ಯ ಐಜಿ ಸನದಿ, ಬಿಸಿಎನ್ ವಿದ್ಯಾ ಸಂಸ್ಥೆಯ ಬಸವರಾಜ ನೆಲವಿಗಿ, ಕನ್ನಡ ಪ್ರಭ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ದಲಿತ ಹೋರಾಟಗಾರ ನಾಗರಾಜ ಬಳ್ಳೆಕೆರೆ, ಕೆವಿಎಸ್ಆರ್ ಕಾಲೇಜಿನ ಉಪನ್ಯಾಸಕ ಸತೀಶ್ ಪಾಶೆ, ಗೋನಾಳ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮವ್ವ ದೊಡ್ಡಮನಿ, ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸಂಸ್ಥೆಯ ಕಾರ್ಯದಶರ್ಿ ಸುನಂದಾ ಶಿರಹಟ್ಟಿ, ಅಧ್ಯಕ್ಷ ಕರಿಯಪ್ಪ ಶಿರಹಟ್ಟಿ ಹಾಗೂ ಇನ್ನೂ ಅನೇಕ ಪ್ರಶಸ್ತಿ ಪುರಸ್ಕೃತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.