ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಶಿಗ್ಗಾವಿ : ಸಮಾಜದಲ್ಲಿರುವ ಅಂಕು, ಡೊಂಕುಗಳನ್ನು ಕಲಾವಿದರು ತಮ್ಮ ಕಲೆಯ ಮೂಲಕ ತಿದ್ದಲೂ ಶ್ರಮಿಸುತ್ತಿದ್ದಾರೆ ಎಂದು ಡಾ. ಸುಖಿನ್ ಅರಳೆಲೆಮಠ ಹೇಳಿದರು.

     ತಾಲೂಕಿನ ಬಂಕಾಪೂರ ಪಟ್ಟಣದ ಅರಳೆಲೆಮಠದ ಆವರಣದಲ್ಲಿ ಅರಳೆಲೆಮಠದ ಲಿಂ. ರುದ್ರಮುನಿ ಶಿವಾಚಾರ್ಯರ ಮಹಾದ್ವಾರ ನಿರ್ಮಾಣ  ಸಹಾಯಾರ್ಥ ರಸಮಂಜರಿ ಕಾರ್ಯಕ್ರಮ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನುದ್ಧೇಸಿಸಿ ಮಾತನಾಡಿದ ಅವರು ಕಲಾವಿದರ ಕಲೆಗೆ ಬೇಲೆ ಕಟ್ಟಲು ಸಾಧ್ಯವಿಲ್ಲ. ಅಂತಹ ಕಲಾವಿದರನ್ನು ಸರಕಾರ ಗುರುತಿಸಿ ಆರ್ಥಿಕವಾಗಿ  ಪ್ರೋತ್ಸಾಹಿಸುವ ಅವಶ್ಯಕತೆಯಿದೆ. ಉ.ಕ.ಕನ್ನಡ ಕಲಾವಿದರ ಸಂಘ ಉ.ಕ.ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ಅವರ ಕಲೆಯನ್ನು ಅನಾವರಣಗೊಳಿಸುವ ಮೂಲಕ ಸಮಾಜಕ್ಕೆ ಪರಿಚಯಿಸುವ ಕಾರ್ಯ ಅತ್ಯಂತ ಶ್ಲ್ಯಾಘನಿಯ ಕಾರ್ಯವಾಗಿದೆ. ಕನ್ನಡಿಗರಿಗೆ ಕನ್ನಡವೇ ತಮ್ಮ ನಿತ್ಯ ಜೀವನದ ಊಸಿರಾಗಲಿ. ಕನ್ನಡ ಭಾಷೆಯನ್ನು ಪೂಜಿಸಿ ಇತರ ಭಾಷೆಯನ್ನು ಪ್ರೀತಿಸಿ ಎಂದು ಹೇಳಿದರು.

     ಡಾ.ಶಿವಕುಮಾರ ಮೂಲಿಮಠ ಮಾತನಾಡಿ ಕನ್ನಡ ಭಾಷೆಗೆ ಅದರದೇಯಾದ ಸ್ಥಾನಮಾನವಿದ್ದು, ಎಂಟು ಜ್ಞಾನ ಪೀಠ ಪ್ರಶಸ್ತಿಯನ್ನು ತನ್ನದಾಘಿಸಿಕೊಂಡ ಏಕೈಕ್ ಭಾಷೆ ಕನ್ನಡ ಭಾಷೆಯಾಗಿದೆ.

         ಕರ್ನಾಟಕದಲ್ಲಿ  ಕನ್ನಡ ಬಾಷೆಯನ್ನು ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಕನ್ನಡ ಭಾಷೆ ಕರ್ನಾಟಕದಲ್ಲಿ ಪ್ರಜ್ವಲಿಸಲಿಸಲು  ಸಾಧ್ಯವಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂಬ ಖ್ಯಾತ ನಾಮ ಪಡೆದ ಹಾವೇರಿಯಲ್ಲಿ ಉ.ಕ.ಕನ್ನಡ ಕಲಾವಿದರ ಸಂಘ ಸ್ಥಾಪನೆಗೊಂಡು ಉ.ಕ.ಕನ್ನಡ ಕಲಾವಿದರ ಬೆಳವಣಿಗೆಗೆ ಶ್ರಮಿಸುತ್ತಲಿದೆ  ಎಂದು ಹೇಳಿದರು.

     ಕಾರ್ಯಕ್ರಮದ ಭಾಗವಹಿಸಿದ ಅರಳೆಲೆಮಠದ ರೇವಣಸಿದ್ಧೇಶ್ವರ ಶ್ರೀಗಳ ಆಶೀರ್ವಚನ ನೀಡಿ ಉ.ಕ. ಕನ್ನಡ ಕಲಾವಿದರ ಸಂಘಕ್ಕೆ, ಶ್ರೀಮಠಕ್ಕೆ ಅವಿನಾವುಭಾವ ಗುರು, ಶಿಷ್ಯರ ಸಂಬಂಧವಿದ್ದು, ಪ್ರತಿವರ್ಷ ಲಿಂ.ರುದ್ರಮುನಿಶ್ವರರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಉಚಿತವಾಗಿ ತಮ್ಮ ಸಂಗೀತ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ.

        ಈಗ ಲಿಂ.ರುದ್ರಮುನಿಶ್ವರರ ಹಾಗೂ ಹಳ್ಳಿಕೇರಿ ಬಸವೇಶ್ವರರ ದ್ವಾರ ಬಾಗಿಲ ನಿರ್ಮಾಣದ  ಸಹಾಯಾರ್ಥ ರಸಮಂಜರಿ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಮಾಜಕ್ಕಾಗಿ ತಮ್ಮನ್ನು ತಾವು ತೋಡಗಿಸಿಕೊಂಡಿರುವ ಕಾರ್ಯ ಅತ್ಯಂತ ಪೂಜ್ಯನೀಯ ಕಾರ್ಯವಾಗಿದೆ ಎಂದು ಹೇಳಿದರು.

     ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

       ಉತ್ತರ ಕರ್ನಾಟಕ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕುರಗೋಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕರಾದ ಶಶಿಧರ ಯಲಿಗಾರ, ರಾಮಣ್ಣ ರಾಣೋಜಿ, ಸೋಮಶೇಖರ ಗೌರಿಮಠ, ಮಲ್ಲೇಶಪ್ಪ ಬಡ್ಡಿ, ಶಂಬಣ್ಣ ವಳಗೇರಿ, ಬಂಕಣ್ಣ ಕುರಗೋಡಿ, ಮಂಜುನಾಥ ಕೂಲಿ, ಕೃಷ್ಣಪ್ಪ ವೆಣರ್ೇಕರ, ರಾಮಚಂದ್ರ ಪುಕಾಳೆ, ಬಸಪ್ಪ ಸೊಪ್ಪಿನ, ಬಸವರಾಜ ನಾರಾಯಣಪುರ, ಹೊನ್ನಪ್ಪ ಹೂಗಾರ, ಮಂಜುನಾಥ ತಳವಾರ, ಕೋಟೆಪ್ಪ ಸಕ್ರಿ, ಕಲ್ಲಪ್ಪ ಹರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಸಂತಕುಮಾರ ಕಡತಿ ನಿರೂಪಿಸಿದರು.