ಥೈರೋಕೇರ್ ರಕ್ತ ಪರೀಕ್ಷಾ ಕೇಂದ್ರ ಪ್ರಾರಂಭ

ಲೋಕದರ್ಶನ ವರದಿ

ಕೊಪ್ಪಳ 22: ನಗರದ ಡಾ.ಸಿಂಪಿಲಿಂಗಣ್ಣ ರಸ್ತೆ ಟ್ರಿನಿಟಿ ಶಾಲೆ ಎದುರುಗಡೆ ಹಕ್ಕಂಡಿ ಕಾಂಪ್ಲೆಕ್ಸ್ನ ಸಂಕೀರ್ಣದಲ್ಲಿ ಥೈರೋಕೇರ್ ವಿಶ್ವದರ್ಜೆಯ ರಕ್ತ ಪರೀಕ್ಷಾ ಕೇಂದ್ರ ಕೊಪ್ಪಳದಲ್ಲಿ ನೂತನವಾಗಿ ಪ್ರಾರಂಭಗೊಂಡಿತು. ಈ ಕೇಂದ್ರದಲ್ಲಿ ರಕ್ತ ಸಂಗ್ರಹಣೆ ಮಾಡಿ ಮುಂಬೈನ ಕೇಂದ್ರ ಕಛೇರಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ತ್ವರೀತವಾಗಿ 24ಗಂಟೆಯೊಳಗಾಗಿ ರಕ್ತ ಪರೀಕ್ಷೆಯ ವರದಿ ನೀಡಲಾಗುತ್ತದೆ.

ನೂತನ ಕೇಂದ್ರದ ಉದ್ಘಾಟನೆ ಬುಧವಾರ ಸಂಜೆ ಜರುಗಿತು. ಇಲ್ಲಿ ಎಲ್ಲಾ ತರಹದ ರಕ್ತ ಪರೀಕ್ಷೆ ಮಾಡಲಾಗುತ್ತಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಇದಕ್ಕೆ ಉತ್ತಮ ಮನ್ನಣೆ ದೊರೆತಿದೆ.  ಈ ಲ್ಯಾಬ್ ವಿಶ್ವ ದಜರ್ೆಯ ಸ್ಥಾನಮಾನ ಹೊಂದಿದ್ದು, ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ತಪಾಸಣೆ ಮಾಡಿ ವರದಿ (ರಿಪೋಟರ್್) ನೀಡಲಾಗುತ್ತಿದೆ. ವಿಶೇಷವಾಗಿ ಮಧುಮೇಹ (ಸಕ್ಕರೆ ಕಾಯಿಲೆ), ಥೈರಾಯಿಡ್ ಕಾಯಿಲೆ ಸೇರಿದಂತೆ ಹೃದಯ ಸಂಬಂಧಿ ಎಲ್ಲಾ ಕಾಯಿಲೆಗಳಿಗೆ ನಿರಂತರವಾಗಿ ಚಿಕಿತ್ಸೆಗಾಗಿ ಉತ್ತಮ ಗುಣಮಟ್ಟದ ವರದಿ ಇಲ್ಲಿ ಸಿದ್ಧಪಡಿಸಿ ಸಂಬಂಧಿಸಿದ ವೈದ್ಯರಿಗೆ ನೀಡಲಾಗುವುದು ಎಂದು ಲ್ಯಾಬ್ ಟೆಕ್ನಿಷಿಯನ್ ವೀರೇಶ ವಿವರಿಸಿದರು. 

ಕೊಪ್ಪಳದಲ್ಲಿ ನೂತನವಾಗಿ ವಿಶ್ವ ದರ್ಜೆಯ ಥೈರೋಕೇರ್ ರಕ್ತ ಪರೀಕ್ಷಾ ಕೇಂದ್ರದ ಪ್ರಾರಂಭೋತ್ಸವ ಸಮಾರಂಭದಲ್ಲಿ ಹಿರಿಯ ವೈದ್ಯ ಹಾಗೂ ನಿವೃತ್ತ ಡಿಎಚ್ಓ ಡಾ.ಟಿ.ಹೆಚ್.ಮುಲ್ಲಾ, ವೈದ್ಯಾಧಿಕಾರಿ ಡಾ.ಶಫೀ ಉಲ್ಲಾ ಮುಲ್ಲಾ, ಯುವ ನಾಯಕ ರಾಜು ಅಗಡಿ, ನಗರಸಭೆ ಸದಸ್ಯ ಗುರುರಾಜ ಹಲಗೇರಿ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ್ ಖಾದ್ರಿ, ಮುಖಂಡ ಆಯ್ಯೂಬ್ ಹುರಕಡ್ಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.