ರಾಣೇಬೆನ್ನೂರಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಆರಂಭ

ರಾಣೇಬೆನ್ನೂರು13: ಸಂಚಾರಿ ಹಾಗೂ ನಗರಠಾಣಾ ವತಿಯಿಂದ ನಗರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಸಾವಿರಾರು ವಿದ್ಯಾರ್ಥಿ ಗಳೊಂದಿಗೆ ಸಂಚರಿಸಿ ರಸ್ತೆ ಸಂಚಾರ ನಿಯಮ ಜಾಗೃತಿ ಕುರಿತಂತೆ ಜನಜಾಗೃತಿಗೊಳಿಸುವಲ್ಲಿ ಬೃಹತ್ ಜಾಥಾ ಮೆರವಣಿಗೆಯು ಯಶಸ್ವಿ ಕಂಡಿತು.  ಸಂಚಾರಿ ಠಾಣಾ ಸಭಾಂಗಣದಿಂದ ಹೊರಟ ವಿದ್ಯಾರ್ಥಿ  ಸಮುದಾಯದ ಮೆರವಣಿಗೆಯು ಕುರುಬಗೇರಿ, ದುರ್ಗಾ  ಸರ್ಕಲ್, ಗೌಳಿ ಗಲ್ಲಿ, ಮಹಾವೀರ ಗಲ್ಲಿ, ಸಂಗಮ್ ವೃತ್ತ, ಪ್ರಧಾನ ಅಂಚೆಕಛೇರಿ ಮತ್ತು ಎಂ.ಜಿ.ರಸ್ತೆ ಮೂಲಕ ಸಾಗಿ ಬಸ್ಟ್ಯಾಂಡ್ ಬಳಿ ಸಾಂಗತ್ಯಗೊಂಡಿತು.  ಜಾಗೃತಿ ಜಾಥಾದಲ್ಲಿ ಬಿಎಜೆಎಸ್ಎಸ್ ಕಾಲೇಜು, ರಾಜ-ರಾಜೇಶ್ವರಿ, ಎಚ್.ಎಸ್.ಪಿ.ಯು ಕಾಲೇಜು, ದೇವಿಕಾ ಕಾಲೇಜು ಸೇರಿದಂತೆ ನಗರದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಮೆರವಣಿಗೆಯಲ್ಲಿ ಸಿಪಿಐ ಲಿಂಗನಗೌಡ ನೆಗಳೂರ, ಸಂಚಾರಿ ಪಿಎಸ್ಐ ಎನ್ಎಸ್ ಉದಗಟ್ಟಿ, ಸಹದೇವಪ್ಪ ಚೌಟಗಿ ಸೇರಿದಂತೆ ಪೋಲೀಸ್ ಇಲಾಖೆಯ ಅನೇಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.