ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೆ “ಗುರುರಾಘವೇಂದ್ರ ವೈಭವ"

ಬೆಂಗಳೂರು, ಮೇ 07, ಮಂತ್ರಾಲಯದ ಗುರು ರಾಘವೇಂದ್ರರ ಮಹಿಮೆ, ಜನ್ಮ ವೃತ್ತಾಂತ ಸಾರುವ  ಗುರು ರಾಘವೇಂದ್ರ ವೈಭವ ಧಾರಾವಾಹಿ ನೆನಪಿದೆಯೇಲ್ಲವೇ?ಎಂ.ಎಸ್.ರಾಮಯ್ಯ ಮೀಡಿಯಾ ಎಂಡ್ ಎಂಟರ್ ಟೈನರ್ ಲಾಂಛನದಲ್ಲಿ ಅನಿತಾ ಪಟ್ಟಾಭಿರಾಮ್ ಹಾಗೂ ಡಾ'' ಎಂ.ಆರ್.ಪಟ್ಟಾಭಿರಾಮ್ ಅವರು ನಿರ್ಮಿಸಿದ್ದ ಮಂತ್ರಾಲಯ ಗುರುಗಳ ಕುರಿತಾದ ಗುರು ರಾಘವೇಂದ್ರ ವೈಭವ ಧಾರಾವಾಹಿ ಮರು ಪ್ರಸಾರ ಶುರುವಾಗಿದೆ.ಮೇ 5 ರಿಂದ ಆರಂಭವಾಗಿದ್ದು, ಬೆಳಗ್ಗೆ 7 ರಿಂದ 8 ರವರೆಗೂ  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮರುಪ್ರಸಾರವಾಗುತ್ತಿದೆ..ಈ ಪೌರಾಣಿಕ ಧಾರಾವಾಹಿಯ ಮೊದಲ ಪ್ರಸಾರದಲ್ಲಿ 25 ದೇಶಗಳಲ್ಲಿ ವೀಕ್ಷಿಸಿದ್ದರು.. 500ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಮೊದಲ ಪೌರಾಣಿಕ ಧಾರವಾಹಿ‌ ಎಂಬ ಹೆಗ್ಗಳಿಕೆ ಇದಕ್ಕಿದೆ... ಸಿನಿಮಾಗಳನ್ನು ಮೀರಿಸುವ ಅದ್ದೂರಿ ಸೆಟ್ ಗಳಲ್ಲಿ ಈ ಧಾರಾವಾಹಿ ಚಿತ್ರೀಕರಣಗೊಂಡಿರುವುದು ಇದರ ಹೆಮ್ಮೆ.ಹಿಂದೆ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಗಳ ಪ್ರಸಾರ ಸಮಯದಲ್ಲಿ ಜನ‌ ಟಿವಿಗೆ ಪೂಜೆ‌ ಮಾಡಿ ಹೇಗೆ ನೋಡುತ್ತಿದ್ದರೊ, ಹಾಗೆ ಈ ಧಾರಾವಾಹಿ ಪ್ರಸಾರ ಸಮಯದಲ್ಲೂ ಪೂಜೆ ಮಾಡಿ ನೋಡುತ್ತಿದ್ದರು.. ನೂರೈವತ್ತಕ್ಕೂ ಅಧಿಕ  ದೇವರನಾಮಗಳನ್ನು ಬಳಸಿಕೊಂಡಿರುವುದು ಧಾರಾವಾಹಿ ವಿಶೇಷ.. ರಾಯರ ಭಕ್ತರ ಹಾಗೂ ವೀಕ್ಷಕರ ಬಹುದಿನದ ಬೇಡಿಕೆಯನ್ನು‌ ಸುವರ್ಣ ವಾಹನಿ ಪೂರೈಸುತ್ತಿದ್ದು, ಸ್ಟಾರ್ ಸುವರ್ಣ ವಾಹಿನಿಗೆ ವೀಕ್ಷಕರು ಧನ್ಯವಾದ ಸಲ್ಲಿಸಿದ್ದಾರೆ.