ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಹುಟ್ಟುಹಬ್ಬಕ್ಕೆ ಸ್ಟಾರ್ ನಟರ ಶುಭಹಾರೈಕೆ

ಬೆಂಗಳೂರು, ಮೇ13,ಸ್ಯಾಂಡಲ್ ವುಡ್ ನ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರು 40ನೇ ವಸಂತಕ್ಕೆ‌ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಸ್ಯಾಂಡಲ್​​ವುಡ್​​ ಸ್ಟಾರ್​​ ನಟರು ಹಾಗೂ ನಿರ್ದೇಶಕರು ಅರ್ಜುನ್ ಜನ್ಯ ಅವರಿಗೆ ಶುಭಕೋರಿದ್ದಾರೆ.ನಿರ್ದೇಶಕ ಪ್ರೇಮ್ ಅವರು, ಪ್ರತಿಯೊಬ್ಬರ  ಹಾರ್ಟ್ ಬೀಟ್​​ನ ತನ್ನ ಮ್ಯೂಸಿಕ್​ನಿಂದ ರಿಫ್ರೇಶ್ ಮಾಡೋ ನಮ್ಮ ಮ್ಯಾಜಿಕಲ್ ಕಂಪೋಸರ್  ಅರ್ಜುನ್ ಜನ್ಯ ಬರ್ತ್​​ಡೇ. ಅವರಿಗೆ ಬದುಕಲ್ಲಿ ಯಶಸ್ಸು ಸಿಗಲೆಂದು ಕೋರೋಣ ಎಂದು  ಶುಭ  ಹಾರೈಸಿದ್ದಾರೆ.

ಇನ್ನು, ನಟ  ಕಿಚ್ಚ ಸುದೀಪ್ ಟ್ವೀಟ್ ಮಾಡಿ, ನಿನ್ನ ಸಂಕಷ್ಟಗಳನ್ನು ನಾನು ನೋಡಿದ್ದೇನೆ. ನಿನ್ನ  ಬೆಳವಣಿಗೆ, ಏಳು ಬೀಳು ಎರಡನ್ನೂ ನೋಡಿದ್ದೀನಿ. ಎಲ್ಲವನ್ನೂ ಅದ್ಭುತವಾಗಿ ಸಮತೋಲನ  ಮಾಡಿರುವೆ. ಇವತ್ತು ನಿನಗೆ ಸಿಕ್ಕಿರುವ ಯಶಸ್ಸಿನ ಪ್ರತಿ ಅಂಶಕ್ಕೂ ನೀನು ಅರ್ಹ.  ಮತ್ತಷ್ಟು ಯಶಸ್ಸು ಸಿಗಲಿ ಎಂದು ಕೋರುತ್ತೇನೆ. ಹುಟ್ಟುಹಬ್ಬದ ಶುಭಾಶಯ ಗೆಳೆಯ ಎಂದು  ಬರೆದುಕೊಂಡಿದ್ದಾರೆ.ನಿರ್ದೇಶಕ  ತರುಣ್ ಸುಧೀರ್​ ಅವರು ಟ್ವೀಟ್ ಮಾಡಿ, ನನಗೆ ಸದಾ ಬೆಂಬಲವಾಗಿ ನಿಂತಿರುವುದಕ್ಕೆ  ಧನ್ಯವಾದ. ಹುಟ್ಟುಹಬ್ಬದ ಶುಭಾಶಯ ಸ್ನೇಹಿತ ಎಂದು ಹಾರೈಸುವ ಮೂಲಕ ಇಬ್ಬರ ಫೋಟೋ‌  ಒಂದನ್ನು ಶೇರ್ ಮಾಡಿದ್ದಾರೆ.