ಜಿ.ಪಂ ಯೋಜನಾ ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆ

ಬೆಳಗಾವಿ, ನವೆಂಬರ್ 16 :  ಜಿಲ್ಲಾ ಪಂಚಾಯತ ಕಾಯರ್ಾಲಯದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ.ಆಶಾ.ಪ್ರ.ಐಹೊಳೆ ಇವರ ಅಧ್ಯಕ್ಷತೆಯಲ್ಲಿ ನವೆಂಬರ್ 16 ರಂದು ನಡೆದ ಜಿಲ್ಲಾ ಪಂಚಾಯತ ಯೋಜನಾ ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆ ಜರುಗಿಸಲಾಯಿತು. 

ಈ ಸಭೆಯಲ್ಲಿ ಎಲ್ಲ ಇಲಾಖೆಯ ಪ್ರಗತಿ ಪರಿಶೀಲಿಸಲಾಯಿತು ಮತ್ತು ಪ್ರಗತಿ ಕುಂಠಿತ ಇಲಾಖೆಯವರಿಗೆ ಕಟ್ಟುನಿಟ್ಟಾಗಿ ಪ್ರಗತಿ ಸಾಧಿಸಲು ಸೂಚನೆ ನೀಡಲಾಯಿತು. ಅದರಲ್ಲಿ ವಿಶೇಷವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಿಗೆ ಪಾಠ ಟಿಪ್ಪಣಿ, ಪರೀಕ್ಷೆ ಮತ್ತು ಶಾಲಾ ಕಟ್ಟಡಗಳ ಪ್ರಗತಿ ಬಗ್ಗೆ ವ್ಯವಸ್ಥಿತವಾಗಿ ಕ್ರಮ ವಹಿಸಲು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ.ಆಶಾ.ಪ್ರ.ಐಹೊಳೆ ಇವರು ಸೂಚಿಸಿದರು.

ಯೋಜನಾ ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿಯ ಎಲ್ಲ ಸದಸ್ಯರು, ಸಭೆಯ ಕಾರ್ಯದಶರ್ಿಗಳಾದ ಶಂಕರಾನಂದ. ಬನಶಂಕರಿ ಹಾಗೂ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.