ಸ್ತಗಿತಗೊಂಡ ಶಾಲೆಗಳು ಪುನಃ ಪ್ರಾರಂಭ

ಲೋಕದರ್ಶನ ವರದಿ

ಸಂಬರಗಿ 26: ರಾಜ್ಯ ಸರಕಾರ ಗಡಿ ಭಾಗದ ಕನ್ನಡ ಶಾಲೆಗಳಿಗೆ ಎಲ್ಲ ಸೌಲಭ್ಯ ನೀಡಬೇಕು ಹಾಗೂ ಸ್ತಗಿತಗೊಂಡಿರುವ ಶಾಲೆಗಳನ್ನು ಪುನಃ ಪ್ರಾರಂಭ ಮಾಡಬೇಕೆಂದು ಆದೇಶ ಮಾಡಿದೆ. ಆದರೆ ತಂಗಡಿ ಗ್ರಾಮದ ಬಾರಿಗಡ್ಡೆ ತೋಟದ ಸ್ಥಗಿತಗೊಂಡಿರುವ ಕಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ಶಾಸಕ ಮಹೇಶ ಕುಮಠಳ್ಳಿ ಭೆಟ್ಟಿ ನೀಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಶಾಲೆಯನ್ನು ಪುನರ್ ಪ್ರಾರಂಭ ಮಾಡಲಾಗುವುದೆಂದು ಪಾಲಕರಿಗೆ ಆಶ್ವಾಸನೆ ನೀಡಿದರು. 

         ತಂಗಡಿ ಗ್ರಾಮದ ಬಾರಿಗಡ್ಡೆ ತೋಟದ ಶಾಲೆಯ ಕಟ್ಟಡ ಇದ್ದು ಹೈಟೇಕ್ ಶೌಚಾಲಯ ಇದೆ. ಆದರೆ ವಿದ್ಯಾರ್ಥಿ ಕೊರತೆ ಕಾರಣ ಮುಂದು ಮಾಡಿ ಅಲ್ಲಿಯ ಶಿಕ್ಷಕರು ಬೇರೆ ಕಡೆಗೆ ವರ್ಗಾಯಿಸಿ ಹೋದ ನಂತರ ಕಳೆದ ಮೂರು ವರ್ಷಗಳಿಂದ ಶಾಲೆಯು ಸ್ಥಗಿತಗೊಂಡಿದೆ. ಸರಕಾರ ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಿ ಕನ್ನಡ ಬೇಳೆಸಿ ಎಂದು ಹೇಳುತ್ತಿದ್ದಾರೆ ಆದರೆ ಈ ಶಾಲೆ ಸ್ಥಗಿತಗೊಂಡ ನಂತರ ಈ ಶಾಲಾ ಮಕ್ಕಳು ತೊಟದಿಂದ ಸುಮಾರು 2 ಕಿ.ಮೀ ಅಂತರ ಕಾಲು ನಡಿಗೆ ಮುಖಾಂತರ ಗ್ರಾಮದ ಶಾಲೆಗೆ ಹೋಗುತ್ತಿದ್ದಾರೆ. 

         ಶಾಸಕ ಮಹೇಶ ಕುಮಠಳ್ಳಿ ರಸ್ತೆ ಕಾಮಗಾರಿ ಚಾಲನೆ ನೀಡಲು ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಈ ಶಾಲೆಯ ಸಮಸ್ಯೆ ಕುರಿತು ಅವರ ಗಮನಕ್ಕೆ ತಂದರು. ನಂತರ ಶಾಸಕ ಮಹೇಶ ಕುಮಠಳ್ಳಿ ಸತಃ ಶಾಲೆಗೆ ಭೆಟ್ಟಿ ನೀಡಿ ಸಮಸ್ಯೆ ಕುರಿತು ಪಾಲಕರಲ್ಲಿ ಚರ್ಚೆ  ಮಾಡಿದರು. ಈ ಶಾಲೆಗೆ ಅತ್ಯವಶ್ಯಕ ಸೇವೆ ಕಲ್ಪಿಸಿ ಶಾಲೆಯನ್ನು ಪುನರ್ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು. ಆದರೆ ಶಾಲಾ ಕೊಠಡಿಯನ್ನು ಕಳೆದ ಮೂರು ವರ್ಷಗಳಿಂದ ಶಿತಿಲಗೊಂಡಿರುವ ಸ್ಥಿತಿಗೆ ಬಂದಿದ್ದಾವೆ. ಸರಕಾರದ ಲಕ್ಷಾಂತರ ಹಣವನ್ನು ಖರ್ಚು  ಮಾಡಿ ಶಾಲೆ ನಿರ್ಮಾಣ ಮಾಡಿದ್ದಾರೆ. ಶಾಲಾ ಕೊಠಡಿಯನ್ನು ಸರಿಯಾಗಿ ಉಪಯೋಗ ಮಾಡುತ್ತಿಲ್ಲ. 

           ಈ ವೇಳೆ ಪಾಲಕರಾದ ಕಾಂತ ಪಾಟೀಲ, ರಾಮಚಂದ್ರ ಪಾಟೀಲ, ಶ್ರೀಕಾಂತ ಪಾಟೀಲ, ಪೋಪಟ ಮೋರೆ, ಎಸ್.ಎಮ್. ಮೋರೆ, ರಾಜು ನಾಯಿಕ, ಡಾ|| ಕಾಂಬಳೆ ಉಪಸ್ಥಿತರಿದ್ದರು. ಈ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್. ಜೋಡಗಿರಿ ಇವರನ್ನು ಸಂಪರ್ಕಿಸಿದಾಗ ನಾನು ಆ ಶಾಲೆಗೆ ಭೆಟ್ಟಿ ನೀಡಿ ಮಕ್ಕಳ ಸಂಖ್ಯೆ ಪರಿಸೀಲನೆ ಮಾಡಿ ಅತ್ಯವಶ್ಯಕ ಮಕ್ಕಳ ಸಂಕ್ಯೆ ಇದ್ದರೆ ಶಾಲೆಯನ್ನು ಪುನಃ ಪ್ರಾರಂಭ ಮಾಡಲಾಗುವುದೆಂದು ಹೇಳಿದರು.