ಕ್ರೀಡಾಂಗಣ ಸಮಿತಿ ಸಭೆ

ಗದಗ 23:  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ದಿ. 23ರಂದು ಬೆಳಿಗ್ಗೆ 11-30ಕ್ಕೆ ಕ್ರೀಡಾಂಗಣ ಸಮಿತಿ ಸಭೆಯನ್ನು ಎಚ್.ಕೆ. ಪಾಟೀಲ, ಶಾಸಕರು, ಗದಗ ವಿಧಾನಸಭಾ ಕ್ಷೇತ್ರ ಇವರು ನಡೆಸಿಕೊಟ್ಟು, ಗದಗ- ಬೆಟಗೇರಿ ನಗರದಲ್ಲಿ ಸಿಂಥೇಟಿಕ್ ಹಾಕಿ ಮೈದಾನವನ್ನು ರೂ.350.00 ಲಕ್ಷಗಳ ಅಂದಾಜಿನಲ್ಲಿ ಟರ್ಫ ನಿಮರ್ಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.ಈ ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸುವ ಬಗ್ಗೆ ಕ್ರಮ ವಹಿಸುವಂತೆ ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳಿಗೆ, ಕಾರ್ಯಪಾಲಕ ಇಂಜನೀಯರ, ಲೋಕೋಪಯೋಗಿ ಇಲಾಖೆ ಹಾಗೂ ಸಹಾಯಕ ನಿದರ್ೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರಿಗೆ ಸೂಚಿಸಿದರು. ಗದಗ ನಗರದ ವಿವಿಧ ಅಂಕಣಗಳಲ್ಲಿ ಸಕ್ರೀಯವಾಗಿ ಕ್ರೀಡಾ ಚಟುವಟಿಕೆಗಳು ನಡೆಯುವಂತೆ ಕ್ರಮ ವಹಿಸಲು ಸಹ ಸೂಚಿಸಿದರು.    ಸಭೆಯಲ್ಲಿ  ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ,   ಜಿ.ಪಂ. ಸದಸ್ಯ ಸಿದ್ದು ಪಾಟೀಲ,  ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ವಿಶ್ವನಾಥ,  ಜಿಲ್ಲಾ ಕ್ರೀಡಾಂಗಣ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು ಎಂದು ಕ್ರೀಡಾ ಇಲಾಖೆಯ ಪ್ರಕಟಣೆ ತಿಳಿಸಿದೆ.