ಶ್ರೀರಾಮ ಜನ್ಮಭೂಮಿ: ಶಿವಲಿಂಗ ಸೇರಿದಂತೆ ಪ್ರಾಚೀನ ರಾಮ ದೇವಾಲಯದ ಅವಶೇಷಗಳು ಪತ್ತೆ

ಅಯೋಧ್ಯೆ, ಮೇ 21, ಶ್ರೀರಾಮ ಜನ್ಮಭೂಮಿಯಾದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಾಚೀನ ರಾಮ ದೇವಾಲಯದ ಅವಶೇಷಗಳೆನ್ನಲಾಗಿರುವ ಶಿವಲಿಂಗ, ಸ್ತಂಭಗಳು, ಕಲಶ ಮತ್ತು ಇತರ ವಸ್ತುಗಳು ಸೇರಿದಂತೆ ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯ ಹಲವಾರು ಅಪರೂಪದ ಕಲಾಕೃತಿಗಳು ಪತ್ತೆಯಾಗಿವೆ. ಸುಪ್ರೀಂ ಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಭವ್ಯ ರಾಮ ದೇವಾಲಯ ನಿರ್ಮಾಣಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ಈ ಅವಶೇಷಗಳು ಲಭಿವಸಿವೆ.
 ಕಾರ್ಮಿಕರು ಮತ್ತು ಯಂತ್ರಗಳ ಸಹಾಯದಿಂದ ಭೂಮಿ ಅಗೆಯುತ್ತಿರುವಾಗ ಕಂಬಗಳು, ಶಿವಲಿಂಗ ಮತ್ತಿತರ ದೇವಾಲಯದ ಕುರುಹುಗಳು ಪತ್ತೆಯಾಗಿವೆಎಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಗುರುವಾರ ಖಚಿತಪಡಿಸಿದ್ದಾರೆ.ಕಳೆದ 10 ದಿನಗಳಿಂದ ರಾಮ ಜನ್ಮಭೂಮಿಯಲ್ಲಿ ನೆಲ ಸಮಗೊಳಿಸುವ ಕಾರ್ಯ ನಡೆಯುತ್ತಿದೆ.  ಪತ್ತೆಯಾಗಿರುವ ಶಿವಲಿಂಗ ವಿಶೇಷ ರೀತಿಯಲ್ಲಿ ಕೆತ್ತಲ್ಪಟ್ಟಿದ್ದು, ಐದು ಅಡಿ ಎತ್ತರವಿದೆ. ಏಳು ಕಪ್ಪು ಕಲ್ಲಿನ ಕಂಬಗಳು, ಆರು ಕೆಂಪು ಕಲ್ಲಿನ ಕಂಬಗಳು ಮತ್ತು ವಿವಿಧ ದೇವ. ದೇವಿಯರ ಮುರಿದ ವಿಗ್ರಹಗಳು ಪತ್ತೆಯಾಗಿವೆ.  ಸೇರಿವೆ.ಪತ್ತೆಯಾದ ಎಲ್ಲಾ ವಸ್ತುಗಳನ್ನು ರಾಮ ದೇವಾಲಯದ ಜೊತೆಗೆ ನಿರ್ಮಿಸಲಾಗುವ ವಸ್ತು ಸಂಗ್ರಹಾಲಯದಲ್ಲಿ ಇಡಲಾಗುವುದು ಎಂದು ಚಂಪತ್ ರಾಯ್ ಹೇಳಿದ್ದಾರೆ. ಏತನ್ಮಧ್ಯೆ, ಕೊರೋನಾ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, ಕಟ್ಟುನಿಟ್ಟಾದ ಸಾಮಾಜಿಕ ಅಂತರವನ್ನು ಕಾಯ್ಡುಕೊಂಡು ನೆಲವನ್ನು ಸಮಗೊಳಿಸುವ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ.