ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವ
ಕಂಪ್ಲಿ 08 : ಸ್ಥಳೀಯ ಪಟ್ಟಣದ ಆರಾಧ್ಯ ದೈವ ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವ ಸಂಭ್ರಮ ಸಡಗರದಿಂದ ಭಾನುವಾರ ಜರುಗಿತು. ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಸಮಾರಂಭಕ್ಕಿಂತ ಮುಂಚೆ ವಿವಾಹದ ಕಾರ್ಯಕ್ರಮವನ್ನು ಸದ್ಭಕ್ತರ ಸಮ್ಮುಖದಲ್ಲಿ ಸವಾಲು ಹಾಕಲಾಯಿತು. ಬಸವೇಶ್ವರ ಕಡೆಯ ಪಾಲಕರಾಗಿ ಅಲಬನೂರು ಬಸವರಾಜ ಕುಟುಂಬದವರು 23101 ರೂಗಳಿಗೆ ಪಡೆದರೆ, ನೀಲಮ್ಮನವರ ಕಡೆಯ ಪಾಲಕರಾಗಿ ಮರಿಶೆಟ್ರು ವಿಜಯಕುಮಾರ್ ಕುಟುಂಬದವರು 26001 ರೂಗಳಿಗೆ ಸವಾಲನ್ನು ಪಡೆದು, ಎರಡು ಕುಟುಂಬದವರು ಮತ್ತು ಪಟ್ಟಣದ ವೀರಶೈವ ಸಮಾಜದವರು ಹಾಗೂ ವಿವಿಧ ಸಮಾಜಗಳ ಮುಖಂಡರು, ವರ್ತಕರು ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವವನ್ನು ಧಾರ್ಮಿಕ ವಿಧಿಗಳಾನು ಸಾರವಾಗಿ ನೆರೆವೇರಿಸಿದರು. ಕೆ.ಎಂ.ಚಂದ್ರಶೇಖರಯ್ಯ ಸ್ವಾಮಿ, ಸಿದ್ದರಾಮೇಶ್ವರ, ಕಲ್ಯಾಣಚೌಕಿಮಠದ ಬಸವರಾಜ ಶಾಸ್ತ್ರಿ, ಘನಮಠದ ಶಾಸ್ತ್ರಿಗಳು ಮಂಗಳಮಹೋತ್ಸವದ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟರು. ವಿವಾಹ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಕೈಂಕಾರ್ಯಗಳು ಶ್ರದ್ಧೆಯಿಂದ ನೆರವೇರಿದವು. ಈ ಕಾರ್ಯಕ್ರಮದಲ್ಲಿ ಧರ್ಮಕರ್ತ ಯು.ಎಂ.ವಿದ್ಯಾಶಂಕರ, ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ವೀರ್ಪ, ಕಾರ್ಯದರ್ಶಿ ಚೌಕೀನ ಸತೀಶ್, ಸಹ ಕಾರ್ಯದರ್ಶಿ ಮಣ್ಣೂರು ಶರಣಪ್ಪ, ಖಜಾಂಚಿ ವಸ್ತ್ರದ ಜಡೆಯ್ಯಸ್ವಾಮಿ, ಮುಖಂಡರಾದ ಗೊಗ್ಗ ಚನ್ನಬಸವರಾಜ, ವಾಲಿ ಕೊಟ್ರ್ಪ, ಪುಟ್ಟಿ ಬಸವನಗೌಡ, ಎಸ್.ಎಂ.ನಾಗರಾಜ, ವಾಗೀಶ್, ಎಚ್.ನಾಗರಾಜ, ಕಾರ್ಯಕಾರಿ ಮಂಡಳಿ ಸದಸ್ಯರು, ಸಲಹಾ ಸಮಿತಿಯ ಪದಾಧಿಕಾರಿಗಳು, ಅಕ್ಕಮಹಾದೇವಿ ಮಹಿಳಾ ಬಳಗದ ಪದಾಧಿಕಾರಿಗಳು ಹಾಗೂ ಸಮಸ್ತ ಸದ್ಭಕ್ತರು ಮತ್ತು ಮಹಿಳೆಯರು, ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.
ಡಿ.09ರಂದು ರಾತ್ರಿ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಹಾಗೂ 10ರಂದು ಸಂಜೆ ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನದ ಪದಾಧಿಕಾರಿಗಳು ತಿಳಿಸಿದರು.
ಡಿ.001: ಪಟ್ಟಣದ ಜನತೆಯ ಆರಾಧ್ಯ ದೇವರಾಗಿರುವ ಶ್ರೀ ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವ ಸಂಭ್ರಮದಿಂದ ಜರುಗಿತು.