ಕೊಪ್ಪಳ 30: ನೆರೆ ರಾಷ್ಟ್ರ ನೇಪಾಳ ದೇಶದ ಫೋಕಾರ್ ಮಹಾ ನಗರದಲ್ಲಿ ಜ.12 ರಿಂದ ಜರುಗಿದ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಕಿನ್ನಾಳ ಚಿತ್ರಕಲೆಯ ಬಗ್ಗೆ ಶ್ರೀನಿವಾಸ ಚಿತ್ರಗಾರ ಹಾಗೂ ಅವರ ಪತ್ನಿ ಶ್ರೀಮತಿ ವಿದ್ಯಾವತಿ ಚಿತ್ರಗಾರ ಅವರು ಪರಿಚಯಿಸಿ ಕೊಪ್ಪಳ ಜಿಲ್ಲೆಯ ಕಲೆಯನ್ನು ವಿದೇಶದಲ್ಲಿ ಪರಿಚಯಿಸಿದ್ದಾರೆ.
ಶ್ರೀನಿವಾಸ ಚಿತ್ರಗಾರ ಅವರ ಆರ್ಟ್ ಗ್ಯಾಲರಿ ಅನಾವರಣಕ್ಕೆ ಅಲ್ಲಿಯ ಜನ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮದಲ್ಲಿ ಅವರೆಲ್ಲರನ್ನು ನೇಪಾಳ ದೇಶದ ಕನ್ನಡಿಗರ ಪರವಾಗಿ ಗೋಲ್ಡನ್ ಎಕ್ಷೆಲ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕೊಪ್ಪಳ ಜಿಲ್ಲೆಯಿಂದ ಹಲವರು ಭಾಗವಹಿಸಿ ಕಾರ್ಯಕ್ರಮ ನೀಡುವುದರ ಮೂಲಕ ನೇಪಾಳದ ನೆಲದಲ್ಲಿ ಕೊಪ್ಪಳದ ಕನ್ನಡದ ಕಂಪು ಕಾರ್ಯಕ್ರಮ ಮೂಡಿಬಂದಿತು. ಮಂಗಳೂರಿನ ಪಿ.ವಿ.ಪ್ರದೀಪ್ ಕುಮಾರ ನೇತೃತ್ವದಲ್ಲಿ ರಾಜ್ಯದಿಂದ ಈ ತಂಡ ನೇಪಾಳಕ್ಕೆ ಪ್ರಯಾಣ ಬೆಳೆಸಿತ್ತು. ಮಂಗಳೂರಿನ ಪ್ರೀಯಾ ಹರ್ಷರವರು ಕಾರ್ಯಕ್ರಮ ನಿರೂಪಿಸಿದರೆ, ಪತ್ರಕತರ್ೆ ಉಷಾ ಬೆಂಗಳೂರು ಅನೇಕರು ಪಾಲ್ಗೊಂಡಿದ್ದರು.
ಶ್ರೀನಿವಾಸ ಹಾಗೂ ವಿದ್ಯಾವತಿ ಚಿತ್ರಗಾರ ದಂಪತಿ ಸೇರಿದಂತೆ ಮತ್ತೀತರರು ನೇಪಾಳದ ಪ್ರವಾಸ ಹಮ್ಮಿಕೊಂಡು ಅಲ್ಲಿಯ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ಕನ್ನಡದ ಕಂಪು ಮೂಡಿಸಿ ಜನಮನ ರಂಜಿಸಿ ಅಲ್ಲಿಯ ಕನ್ನಡಿಗರ ವಿಶ್ವಾಸ, ಪ್ರೀತಿ ಗಳಿಸಿ ಅವರಿಂದ ಮೆಚ್ಚುಗೆ ಮತ್ತು ಪ್ರಶಸ್ತಿಗಳಿಸಿ ಜಿಲ್ಲೆಯ ಕೀರ್ತಿ ತಂದಿರುವುದಕ್ಕೆ ಇಲ್ಲಿನ ಸಿರಿಗನ್ನಡ ವೇದಿಕೆ, ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿವೆ.