ಲೋಕದರ್ಶನ ವರದಿ
ಧಾರವಾಡ05: ಅಭಿಜ್ಞಾ ಸಂಗೀತ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 'ಶೃತಿ ಸಂತತಿ' ಶಾಸ್ರ್ತೀಯ ಸಂಗೀತಸಂಜೆ ಎಂಬ ಕಾರ್ಯಕ್ರಮವನ್ನು ಆಲೂರು ವೆಂಕಟರಾವ ಸಭಾಭವನ ಧಾರವಾಡದಲ್ಲಿ ಆಯೋಜಿಸಲಾಗಿತು.
ಗಾಯನದಲ್ಲಿ ವಿಶಾಲ ಹೆಗಡೆಯವರು ರಾಗ ಪೂರಿಯಾಕಲ್ಯಾಣಿಯನ್ನು ಪ್ರಸ್ತುತ ಪಡಿಸಿದರು, ರಾಗ ದುಗರ್ಾ, ಬಸವಣ್ಣನವರ ವಚನ, ದಾಸವಾಣಿ ಪ್ರಸ್ತುತ ಪಡಿಸಿದರು ಇವರಿಗೆ ಶ್ರೀಧರ ಮಾಂಢ್ರೆಯುವರು ತಬಲಾ ಹಾಗೂ ಸತೀಶ ಹೆಗ್ಗಾರ ಸಂವಾದಿನಿ ಸಾಥ್ ನೀಡಿದರು.
ಸರಫರಾಜಕರವರು ಸಾರಂಗಿವಾದನದಲ್ಲಿ ರಾಗ ರಾಗೆಶ್ರೀ, ಖಮಾಜ ರಾಗಗಳನ್ನು ಪ್ರಸ್ತುತ ಪಡಿಸಿದರು. ಇವರಿಗೆ ಸುಮಿತ ನಾಯ್ಕರವರು ತಬಲಾ ಸಾಥ ನೀಡಿದರು.
ಈ ಕಾರ್ಯಕ್ರಮದಲ್ಲಿ ಆರತಿ ಪಾಟೀಲ, ಡಾ.ಶಕ್ತಿ ಪಾಟೀಲ, ಭಾಗೀರಥಿ ಕಲಕಾಂಬಕರ, ಪಂ. ಶ್ರೀಪಾದ ಹೆಗಡೆ, ನಾಗವೇಣಿ ಹೆಗಡೆ, ಉಸ್ತಾದ ಫಯಾಜಖಾನ ಉಪಸ್ಥಿತರಿದ್ದರು, ಡಾ.ಸುಜಾತಾ ಕೊಂಬಳಿ ಕಾರ್ಯಕ್ರಮ ನಿರೂಪಿಸಿದರು, ಪಂ ರಘುನಾಥ ನಾಕೋಡ, ರೇಣುಕಾ ನಾಕೋಡ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶ್ರೀರಮಂಜಾನ ದಗರ್ಾ,
ಪಂ. ಬಿ.ಎಸ.ಮಠ, ಪಂ.ಸೋಮನಾಥ ಮರಡೂರ, ಕೆ.ಬಿ.ನಾವಲಗಿಮಠ ಹಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು,