ವಿಜಯಯಾತ್ರೆ ನಿಮಿತ್ತ ನಗರಕ್ಕೆ ನ.28ರಂದು ಶೃಂಗೇರಿ ಜಗದ್ಗುರುಗಳು

ಲೋಕದರ್ಶನ ವರದಿ

ಬೆಳಗಾವಿ-ನ24- ಶ್ರೀ ಜಗದ್ಗುರು ಆದಿಶಂಕರ ಭಗವತ್ಪಾದಾಚಾರ್ಯರಿಂದ ಸನಾತಯನ ಧರ್ಮ ರಕ್ಷಣೆಗಾಗಿ ದೇಶದ ನಾಲ್ಕುದಿಕ್ಕುಗಳಲ್ಲಿ ಚತಿರಾಮ್ನಾಯ ಪೀಠಗಳು ಸ್ಥಾಪಿಸಲ್ಪಟ್ಟಿತು ಅದರಲ್ಲಿ ದಕ್ಷಿಣ ಶೃಂಗೇರಿಯ ಶಾರದಾ ಪೀಠವು ಪ್ರಥಮವೊ ಪ್ರಧಾನವೊ ಆಗಿದೆ ಅಂದಿನಿಂದಲೊ ಸನಾತನ ಧರ್ಮದ ರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳು, ಯಾತ್ರೆಗಳನ್ನ ಪೀಠದ ಜಗದ್ಗುರುಗಳು   ನಡೆಸುತ್ತ ಬಂದಿದ್ದಾರೆ. 

ಪ್ರಸ್ತುತ   ಸನಾತನ ಧರ್ಮ ರಕ್ಷಣೆಯ ವಿಜಯಯಾತ್ರೆಯು ಇಂದಿನ ಪೀಠಾಧಿಪತಿಗಳಾದ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಕರಕಮಲ ಸಂಜಾತ ಜಗದ್ಗುರು ಶ್ರೀಶ್ರೀ ವಿಧುಶೇಖರಭಾರತಿ ಮಹಾಸ್ವಮಿಗಳು ಭಕ್ತರನ್ನ ಅನುಗ್ರಹಿಸುವ ಸಲುವಾಗಿ ದಿನಾಂಕ 28/11/2018 ಬುಧವಾರದಂದು ಬೆಳಗಾವಿಗೆ ಆಗಮಿಸಲಿದ್ದಾರೆ.  ಬುಧವಾರದಿಂದ 30/11/2018 ಶುಕ್ರವಾರದವರೆಗೆ ಬೆಳಗಾವಿಯಲ್ಲಿ ವಿಜಯಯಾತ್ರೆಯ ನಿಮಿತ್ತ ನಡೆಯುವ ಧಾಮರ್ಿಕ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

28 ರಂದು ಸಂಜೆ 5.30ಕ್ಕೆ ಮಂಗಳವಾದ್ಯದೊಂದಿಗೆ ಪೊರ್ಣಕುಂಭ ಸ್ವಾಗತ ಹಾಗು ಅನಗೊಳ ನಾಕ ಹತ್ತಿರದ ನ್ಯೊ ಉದಯ ಭವನದಿಂದ ಸಿಟಿಹಾಲ್ ವರೆಗೆ ಶೊಭಾಯಾತ್ರೆ ನಡೆಯುವುದು ನಂತರ ಸಿಟಿಹಾಲ್ನಲ್ಲಿ  ನಡೆಯುವ ಕಾರ್ಯಕ್ರಮದಲ್ಲಿ ಧೊಳಿ ಪಾದುಕ ಪೊಜೆ, ವೇಧಘೋಷ, ಪ್ರಾರ್ಥನೆ, ಫಲಪುಷ್ಪ ಸಮರ್ಪಣೆ ಮತ್ತು ಜಗದ್ಗುರುಗಳಿಂದ ಅನುಗ್ರಹ ಭಾಷಣ ನಡೆಯಲಿದೆ. ರಾತ್ರಿ 8 ಘಂಟೆಗೆ ಶ್ರೀ ಶಾರದ ಚಂದ್ರಮೌಳೀಶ್ವರ ಪೊಜೆ ಹಾಗು ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 29 ಗುರುವಾರದಂದು ಹಾಗು 30 ಶುಕ್ರವಾರದಂದು  ಭಾಗ್ಯ ನಗರದ ಸಿಟಿಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 8 ಘಂಟೆಗೆ ಶ್ರೀಮಠದ ಅರ್ಚಕರಿಂದ ಶಾರದಾಚಂದ್ರಮೌಳೀಶ್ವರ ಪೊಜೆ, ಬೆಳಿಗ್ಗೆ 10 ಘಂಟೆಯಿಂದ ಮಹಾಸ್ವಮಿಗಳವರ ದರ್ಶನ, ಪಾದುಕಪೊಜೆ, ಭಿಕ್ಷಾವಂದನೆ ಇತ್ಯಾದಿ ಗುರುಸೇವೆಗಳು ನಡೆಯಲಿವೆ.

ಗುರುವಾರ ಸಂಜೆ ಭಾಗ್ಯನಗರದ ರಾಮನಾಥ ಮಂಗಲ ಕಾಯರ್ಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾ ಜನತೆ ಪರವಾಗಿ ಗುರುಗಳವರಿಗೆ ಅಭಿನಂದನ ಪತ್ರ, ಗುರುಕಾಣಿಕೆ ಹಾಗು ಫಲಪುಷ್ಪ ಸಮರ್ಪಣೆ, ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ ಸಮಿತಿಯಿಂದ ಉಪನ್ಯಾಸ, ಕೃತಜ್ಞತಾ ಸಮರ್ಪಣೆ ಹಾಗು ಗುರುಗಳಿಂದ ಆಶರ್ಿವಚನ, ಪ್ರಸಾದ ವಿತರಣೆ ನಡೆಯಲಿದೆ.

ಸನಾತನ ಧರ್ಮ ರಕ್ಷಣೆಗಾಗಿ ನಡೆಯುವ ಈ ಎಲ್ಲ ಧಾಮರ್ಿಕ ಕಾರ್ಯಕ್ರಮಗಳಿಗೆ ಬೆಳಗಾವಿಯ ಎಲ್ಲ ಭಕ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಮಿತಿಯ ಕಾಯರ್ಾಧ್ಯಕ್ಷರಾದ ಎಸ್.ಎಂ ಕುಲಕಣರ್ಿ, ಅಧ್ಯಕ್ಷರಾದ ಸುರೇಂದ್ರ ಅನಗೊಳಕರ ಹಾಗು ಕಾರ್ಯದಶರ್ಿ ಡಾ.ಅನಿಲ ಅಂಕೊಲ ತಿಳಿಸಿದ್ದಾರೆ.