ಶ್ರೀನೀಲಕಂಠಗೌಡ ಪ್ರೌಢಶಾಲೆ ತಾಲೂಕ ಮಟ್ಟಕ್ಕೆ ಆಯ್ಕೆ

ರಾಣಿಬೆನ್ನೂರ 15: ತಾಲೂಕಿನ ಅಸುಂಡಿ ಗ್ರಾಮದ ಶ್ರೀನೀಲಕಂಠಗೌಡ ಪ್ರೌಢಶಾಲೆ    ವಿದ್ಯಾರ್ಥಿಗಳು ಮಂಡಲ ಮಟ್ಟದ ಪಂದ್ಯಾವಳಿಯಲ್ಲಿ ವಿವಿಧ ಕ್ರೀಡೆಯಲ್ಲಿ ಸಾಧನೆ ಗೈದು  ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.   

ಬಾಲಕಿಯರ  ತ್ರೋಬಾಲ್‌ನಲ್ಲಿ ದ್ವಿತೀಯ, ಬಾಲಕರ ವಾಲಿಬಾಲ್ ದ್ವಿತೀಯ, ಬಾಲಕರ ತ್ರೋಬಾಲ್ ದ್ವಿತೀಯ, ಬಾಲಕರ ಬಾಸ್ಕೆಟ್ ಬಾಲ್ ಪ್ರಥಮ ಹಾಗೂ ವೈಯಕ್ತಿಕ ಆಟಗಳಲ್ಲಿ ಯಶೋಧ ಬನ್ನಿಹಟ್ಟಿ ಮತ್ತು ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, ಪ್ರಿಯಾಂಕ ಇಟಗಿ ಉದ್ದ ಜಿಗಿತ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ, ಲತಾ ಬಳಿಗಾರ ಅಡೆತಡೆ ಓಟದಲ್ಲಿ ದ್ವಿತೀಯ ಸ್ಥಾನ, ಗಾಯತ್ರಿ ಅಗಡಿ 3000 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಹಾಗೂ ಆಕಾಶ್ ಕೆಂಚಮ್ಮನವರ್ ಬರ್ಜಿ ಎಸೆತದಲ್ಲಿ ಪ್ರಥಮ ಸ್ಥಾನ, ರಜಾಖಲಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ, ಮೊಹಮ್ಮದ್ ರಫೀಕ್ ಚಕ್ರ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.