ಶತಕೋಟಿ ಕ್ಲಬ್ನತ್ತ ಅವನೇ ಶ್ರೀಮನ್ನಾರಾಯಣ: ರಕ್ಷಿತ್ ಶೆಟ್ಟಿ
ಶತಕೋಟಿ ಕ್ಲಬ್ನತ್ತ ಅವನೇ ಶ್ರೀಮನ್ನಾರಾಯಣ: ರಕ್ಷಿತ್ ಶೆಟ್ಟಿSrimannarayana, the billionaire club: Rakshit Shetty
Lokadrshan Daily
1/7/25, 8:44 AM ಪ್ರಕಟಿಸಲಾಗಿದೆ
ಹುಬ್ಬಳ್ಳಿ: ಈಗಾಗಲೇ ಭರ್ಜರಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾ 100 ಕೋಟಿ ಕ್ಲಬ್ ಸೇರುವತ್ತ ಯಶಸ್ವಿ ದಾಪುಗಾಲು ಇಡುತ್ತಿದೆ ಎಂದು ಚಿತ್ರದ ನಟ ರಕ್ಷಿತ್ ಶೆಟ್ಟಿ ಹೇಳಿದರು.
ಚಿತ್ರದ ಯಶಸ್ಸನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನಗರಕ್ಕೆ ಆಗಮಿಸಿದ್ದ ನಾಯಕ ರಕ್ಷಿತ್ ಶೆಟ್ಟಿ ಮತ್ತು ತಂಡ ಪತ್ರಕರ್ತರ ಭವನದಲ್ಲಿ ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಸಿನಿಮಾ ಯಶಸ್ವಿನ ಬಗ್ಗೆ ಮತ್ತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, 'ಯಾವುದೇ ಒಂದು ಸಿನಿಮಾ ಗೆಲುವು ಸಾಧಿಸಲು ಉತ್ತರ ಕನರ್ಾಟಕ ಭಾಗ ಬೆನ್ನೆಲುಬು ಆಗಿದ್ದು, ಶ್ರೀಮನ್ನಾರಾಯಣ ವಿಜಯ ಯಾತ್ರೆಯಲ್ಲಿ ಅದು ಮುಂದುವರಿದಿದೆ. ನಿಜಕ್ಕೂ ಅವನೇ ಶ್ರೀಮನ್ನಾರಾಯಣ 'ಕಿರಿಕ್ ಪಾಟರ್ಿಗಿಂತ ನಾಲ್ಕು ಪಟ್ಟರಷ್ಟು ಮೊದಲ ವಾರ ಮತ್ತು ಎರಡನೇ ವಾರದಲ್ಲಿ ಸಕ್ಸಸ್ ಕಾಣುತ್ತಿದೆ. ಎಲ್ಲಾ ಭಾಷೆಯಿಂದಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬರುತ್ತಿದ್ದು, ನಾರಾಯಣನನ್ನು ಜನ ಗೆಲಿಸಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಉತ್ತರ ಕನರ್ಾಟಕ ಭಾಗದಲ್ಲೂ ಮಾಡಲಾಗಿದ್ದು, ಸಿನಿಮಾ 10 ದಿನದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ್ದು ತೆಲಗು, ತಮಿಳು, ಮಳಿಯಾಳಂನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 17 ರಂದು ಬಾಲಿವುಡ್ಗೂ ಶ್ರೀಮನ್ನಾರಾಯಣ ಬಲಗಾಲಿಡಲಿದ್ದಾನೆ. ಉತ್ತಮ ಚಿತ್ರಗಳನ್ನು ಎಂದೂ ಪ್ರೇಕ್ಷಕರು ಕೈ ಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಪ್ರತಿಯೊಬ್ಬರೂ ಈ ಚಿತ್ರ ನೋಡಿ ಆನಂದಿಸಬೇಕು' ಎಂದರು.
ಚಿತ್ರದ ಕಳನಟ ಬಾಲಾಜಿ ಮಾತನಾಡಿ, 'ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನು ರಾಜ್ಯ, ದೇಶ ಅಷ್ಟೇ ಅಲ್ಲದೇ ಹೊರ ದೇಶದಲ್ಲೂ ಜನರು ಚಿತ್ರವನ್ನು ವಿಕ್ಷಣೆ ಮಾಡುತ್ತಿದ್ದು, ಕೆನಡಾದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ಮೂಲ ಕಾರಣ ಚಿತ್ರದ ಕಥೆ. ಇನ್ನೂ ಹುಬ್ಬಳ್ಳಿ ಅಥವಾ ಉತ್ತರ ಕನರ್ಾಟಕ ಭಾಗದಲ್ಲಿ ಯಾವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಅದು ರೆಕಾಡರ್್ ಸಿನಿಮಾ ಆಗುವುದು ಎಂಬ ನಂಬಿಕೆ ಇದ್ದು, ಅದು ಮತ್ತೊಮ್ಮೆ ಸಾಬೀತಾಗಿದೆ. ಇದು ಬಾಕ್ಸ ಆಫೀಸಿನಲ್ಲಿ ಹೊಸ ದಾಖಲೆ ಬರೆಯುವುದು ನಿಶ್ಚಿತ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಮೋದ ಶೆಟ್ಟಿ, ನಿದರ್ೇಶಕ ಸಚಿನ ಸೇರಿದಂತೆ ಮುಂತಾದವರು ಇದ್ದರು