ಭಂಡಾರಕೇರಿ ಮಠದ ಶ್ರೀಗಳ ಪ್ರವಚನ ಸಾರ


ಬಾಗಲಕೋಟೆ ಃ ಹನುಮಂತ ದೇವರು ಸೀತಾದೇವಿಯನ್ನು ಅರಸುತ್ತ ಸಮುದ್ರವನ್ನು ದಾಟಿ ಲಂಕೆಗೆ ಬಂದರು. ಅವರಿಗೆ ಈ ಕಾರ್ಯಗಳಲ್ಲಿ ಯಾವ ಶ್ರಮವೂ ಇಲ್ಲ. ಎಂತಹ ಮಹತ್ಕಾರ್ಯ ಮಾಡಿದರೂ ಅವರಿಗೆ ಶ್ರಮವಿಲ್ಲ. ಇದಕ್ಕೊಂದು ಸಂವಾದಿಯಾದ ಉಪನಿಷತ್ನ ಪ್ರಸಂಗ ಉಲ್ಲೇಖಿಸಬಹುದು. ಪ್ರಾಣದೇವರ ಮಹತ್ವ ಸಾರಲು ದೇವತೆಗಳು ತಮ್ಮ ತಮ್ಮಲ್ಲಿಯೇ ಸ್ಪಧರ್ೆಗಿಳಿದರು. ನಾನೇ ಶ್ರೇಷ್ಠ ಎಂಬ ವಿವಾದ ಶುರುವಾಯಿತು. ಆಗ ಬ್ರಹ್ಮದೇವರು ಶ್ರಮ ಎಂಬ ರೂಪದಿಂದ ಎಲ್ಲ ದೇವತೆಗಳಲ್ಲಿ ಪ್ರವೇಶ ಮಾಡಿದರು. ಹಾಗಾಗಿ ಎಲ್ಲ ದೇವತೆಗಳಿಗೂ ಆಯಾಸದ ಅನುಭವವಾಯಿತು. ನಮ್ಮ ಕಣ್ಣು, ಕಿವಿ ಮೊದಲಾದ ಇಂದ್ರೀಯಗಳಿಗೆ ದೇವತೆಗಳು ಪ್ರೇರಕರು. 

ನಮ್ಮ ಕಣ್ಣು ನೋಡಿ ನೋಡಿ ಆಯಾಸಪಟ್ಟು ಕೊನೆಗೆ ತಾನೇ ಮುಚ್ಚಿಕೊಳ್ಳುತ್ತದೆ. ಇದರಂತೆ ಎಲ್ಲ ಇಂದ್ರೀಯಗಳಿಗೆ ಆಯಾಸವಿದೆ. ಆದರೆ ಬ್ರಹ್ಮ ದೇವರು ಶ್ರಮ ರೂಪದಿಂದ ಪ್ರಾಣದೇವರನ್ನು ಮಾತ್ರ ಪ್ರವೇಶ ಮಾಡಲಿಲ್ಲ. ಹಾಗಾಗಿ ವಾಯುದೇವರಿಗೆ ಆಯಾಸವೇ ಇಲ್ಲ. ಅವರು ಪ್ರೇರಿಸುವ ಉಸಿರಾಟಕ್ಕೆ ವಿಶ್ರಾಂತಿಯೂ ಇಲ್ಲ. ಅಂತಹ ವಾಯುಪುತ್ರನಾದ ಹನುಮಂತ ದೇವರಿಗೆ ಆಯಾಸವಿರಲು ಹೇಗೆ ಸಾಧ್ಯ ?. ಹನುಮಂತ ದೇವರು ಸೀತಾದೇವಿಯನ್ನು ಹುಡುಕುತ್ತ ಹೊರಟರು, ಸೀತೆ ಎಂದರೆ ಲಕ್ಷ್ಮಿ. ಅವಳು ವೇದವಿದ್ಯೆಗೆ ಅಭಿಮಾನಿಯಾಗಿದ್ದಾಳೆ. ಸೀತೆಯನ್ನು ಹುಡುಕುವುದು ಎಂದರೆ ವೇದಗಳ ಅರ್ಥವನ್ನು ಅನ್ವೇಷಣೆ ಮಾಡುವುದು ಎಂದರ್ಥ. ಪ್ರತಿಯೊಬ್ಬ ಸುಜನರೂ ಸದ್ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದು ಇದರರ್ಥವಾಗಿದೆ. 

ಇಂದಿನಿಂದ ಪ್ರವಚನ 

ನಗರದಲ್ಲಿ ಚಾತುಮರ್ಾಸ ವ್ರತ ಕೈಗೊಂಡಿರುವ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಗಳು ಇಂದಿನಿಂದ ವಿದ್ಯಾಗಿರಿಯಲ್ಲಿ ವಿಶೇಷ ಅನುಗ್ರಹ ಸಂದೇಶ ನೀಡಲಿದ್ದಾರೆ. 

ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗಳು ಪ್ರತಿ ದಿನ ಸಂಜೆ 7ಕ್ಕೆ ಪ್ರವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿ ದಿನ 6 ಗಂಟೆಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಸಂಶೋಧನೆ ಮಂದಿರದ ಮುಖ್ಯಸ್ಥ ಡಾ.ಆನಂದತೀಥರ್ಾಚಾರ್ಯ ನಾಗಸಂಪಗಿ ಪ್ರವಚನ ನೀಡುವರು ಎಂದು ಪ್ರಕಟಣೆ ತಿಳಿಸಿದೆ.