ಶ್ರೀಕೃಷ್ಣ ಉಪದೇಶದಂತೆ ಸನ್ಮಾರ್ಗದಲ್ಲಿ ನಡೆಯಲು ಜಿಲ್ಲಾಧಿಕಾರಿ ಕರೆ

ವಿಜಯಪುರ 03:  ಶ್ರೀಕೃಷ್ಣ ಭಗವದ್ಗಿತೆಯಲ್ಲಿ ಉಪದೇಶಿಸಿರುವಂತೆ ಎಲ್ಲರೂ ಒಳ್ಳೆಯ ಜೀವನಕ್ಕಾಗಿ ಸನ್ಮಾರ್ಗದಲ್ಲಿ ನಡೆಯುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಕರೆ ನೀಡಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಭಗವಾನ್ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. 

12 ಅವತಾರಗಳನ್ನು ಅವತರಿಸಿದ್ದ ಶ್ರೀ ಕೃಷ್ಣನು ತಮ್ಮ 8ನೇ ಅವತಾರದಲ್ಲಿ ಶ್ರೀ ಕೃಷ್ಣನಾಗಿ ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಅಜರ್ುನನಿಗೆ ಸಾರಥಿಯಾಗಿ ತನ್ನ ವಿರಾಟ ಸ್ವರೂಪವನ್ನು ಪ್ರದಶರ್ಿಸಿದರು. ಧರ್ಮಕ್ಕಾಗಿ ಯುದ್ಧ ಸಾರುವ ಹಾಗೂ ಸನ್ಮಾರ್ಗದ ಮೂಲಕ ಜಯ ಸಾಧಿಸುವ ಬೋಧನೆ ಎಲ್ಲರೂ ಮಾರ್ಗಸೂಚಿಯಾಗಿದೆ ಎಂದು ಹೇಳಿದರು. 

ಶ್ರೀಕೃಷ್ಣನು ಭಗವದ್ಗಿತೆಯಲ್ಲಿ ಬೋಧಿಸಿದಂತೆ ಎಲ್ಲರೂ ಉತ್ತಮ ಕರ್ಮಗಳನ್ನು ಫಲಾಪೇಕ್ಷೆಯಿಲ್ಲದೇ ಮಾಡಿದಲ್ಲಿ ಅದಕ್ಕೆ ತಕ್ಕ ಫಲವನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯಬೇಕೆಂಬ ಭಗವದ್ಗಿತೆಯ ಮೂಲಕ ಬೋಧಿಸಿದ ಸನ್ಮಾರ್ಗವೂ ಜನರಿಗೆ ಅತ್ಯುತ್ತಮ ಮಾರ್ಗಸೂಚಿಯಾಗಿದೆ ಎಂದು ಹೇಳಿದರು. 

ಭಾರತದ ಅನೇಕ ಪ್ರದೇಶಗಳಲ್ಲಿ ಕೃಷ್ಣ ಆರಾಧನೆ ನಡೆಯುತ್ತಿದೆ. ಮಥುರಾ, ದ್ವಾರಕಾ, ಉಡುಪಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಶ್ರೀಕೃಷ್ಣನ ಆರಾಧನೆ ನಡೆಯುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಇಸ್ಕಾನ್ ಸೇರಿದಂತೆ ಅನೇಕ ಭಕ್ತಾದಿಗಳು ಶ್ರೀಕೃಷ್ಣನ ಸೇವಕರಾಗಿದ್ದಾರೆ. ಐತಿಹಾಸಿಕವಾಗಿ ಮೀರಾಬಾಯಿ ಅವರು ಭಕ್ತಿಪಂಥದಲ್ಲಿ ಶ್ರೀಕೃಷ್ಣನ ಬಗ್ಗೆ ಪ್ರಸ್ತಾಪಿಸಿರುವುದು ಈ ಸಂದರ್ಭದಲ್ಲಿ ಸ್ಮರಿಸಿದ ಜಿಲ್ಲಾಧಿಕಾರಿಗಳು, ಭಾರತೀಯರ ಸಂಸ್ಕೃತಿ ಮೇಲೆ ಅನೇಕ ರೀತಿಯಲ್ಲಿ ಶ್ರೀಕೃಷ್ಣನ ಪ್ರಭಾವ ಇದ್ದುದ್ದನ್ನು ನಾವು ಕಾಣಬಹುದಾಗಿದೆ. ಶ್ರೀಕೃಷ್ಣನ ಬಾಲ್ಯಜೀವನದ ತುಂಟಾಟಗಳು, ರಾಕ್ಷಸರ ಸಂಸಾರ, ಗೋವರ್ಧನ ಗಿರಿ ಎತ್ತಿ ಜನರನ್ನು ರಕ್ಷಿಸಿರುವ ಘಟನೆ ಮಹಾಭಾರತ ಕೌರವ-ಪಾಂಡವರ ಮಧ್ಯದ ಯುದ್ಧದಲ್ಲಿ ಧರ್ಮದ ಪರವಾಗಿ ನಿಂತು ಜಯವನ್ನು ದೊರಕಿಸಿಕೊಟ್ಟ ಶ್ರೀಕೃಷ್ಣರನ್ನು ಭಾರತೀಯರೆಲ್ಲರೂ ದೈವ ಸ್ವರೂಪಿಯಾಗಿ ಪೂಜಿಸುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಾಭಿವೃದ್ದಿ ಕೋಶದ ಯೋಜನಾ ನಿದರ್ೇಶಕರ ಮಹಾದೇವ ಮುರಗಿ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ಶ್ರೀಮತಿ ವಿದ್ಯಾವತಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಶೃತಿ ಪ್ರಾಥರ್ಿಸಿದರು.