ರಣತೂರಿನಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ವೀರಭದ್ರೇಶ್ವರ ಜಾತ್ರೆ

ಲೋಕದರ್ಶನ ವರದಿ

ಶಿರಹಟ್ಟಿ: ತಾಲೂಕಿನ ರಣತೂರಿನ ಗ್ರಾಮದಲ್ಲಿ ಪ್ರಥಮ ವರ್ಷದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮಡ್ಲೂರರಿನ ಮಹಾರುದ್ರಪ್ಪ ವೀರಪ್ಪ ಇಟಗಿ ಮತ್ತು ಜಗದೀಶ ನಿಟ್ಟೂರ ಇವರ ನೇತೃತ್ವ ದಲ್ಲಿ ಮಂಗಳವಾರ ದಂದು ಮುಂಜಾನೆ ವೀರಭದ್ರನಿಗೆ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ಜರುಗಿದ ನಂತರ ವೀರಭದ್ರ ದೇವರ ಮೂತರ್ಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಗ್ರಾಮದ ಪ್ರಮುಖ ಬೀದಗಳಲ್ಲಿ ಮೆರವಣಿಗೆ ಜರುಗಿತು. 

ಈ ಸಂದರ್ಭದಲ್ಲಿ ಮೆಡ್ಲೂರಿನ ಪುರವಂತರಿಂದ ವೀರಭದ್ರೇಶ್ವರನ ಚರಿತ್ರೆಯನ್ನು ಸಾರು ವಡಪುಗಳನ್ನು ಪುರಂತರು ಗ್ರಾಮಸ್ಥರಿಗೆ ಮನವಿರಕೆಯಾಗುವ ರೀತಿಯಲ್ಲಿ ಅರ್ಭಟದಿಂದ ಒಡಪುಗಳನ್ನು ಹೇಳಿದರು. ಜೊತೆಗೆ ನಂದಿಕೋಲು ಕುಣಿತ ಬಾಜಾಭಂತ್ರಿಗಳೊಂದಿಗೆ ಮೆರವಣಿಗೆ ಸಾಗಿ ಬಂದು ದೇವಸ್ಥಾನ ಮುಂಭಾಗದಲ್ಲಿ ನಿಮರ್ಿಸಲಾಗಿದ್ದ ಅಗ್ನಿಕುಂಡವನ್ನು ಪಲ್ಲಕ್ಕಿಯೊಂದಿಗೆ ಪುರವಂತರು ಮತ್ತು ವೀರಭದ್ರೇಶ್ವರ ಭಕ್ತರು ಅಗ್ನಿಕುಂಡವನ್ನು ಹಾಯ್ದು ಭಕ್ತ ಭಾವವನ್ನು ಮೆರದರು. 

ನಂತರ ಗ್ರಾಮಸ್ಥರು ವೀರಭದ್ರೇಶ್ವರನಿಗೆ ಹಣ್ಣು ಕಾಯಿ ಮತ್ತು ಎಡಿಯನ್ನು ಅರ್ಪಿಸಿ ಸದಾವಕಾಲ ಸುಖ, ಶಾಂತಿ  ಮತ್ತು ನೆಮ್ಮದಿಯನ್ನು ದಯಪಾಲಿಸು ಎಂದು ಬೇಡಿಕೊಂಡರು.