ಶ್ರೀ ಸದ್ಗುರು ಗುರುಪಾದೇಶ್ವರರ ಪುಣ್ಯ ಸ್ಮರಣೋತ್ಸವ * ಧರ್ಮಸಭೆ ಶಾಂತಿಯ ಬಧುಕಿನಿಂದ ತೃಪ್ತಿ : ಗದ್ದನಕೇರಿಶ್ರೀ

ಲೋಕದರ್ಶನ ವರದಿ

ತಾಳಿಕೋಟೆ, 5: ಭುನಾದಿ ಎಂಬುದು ಗಟ್ಟಿಯಾಗಿದ್ದರೆ ಕಟ್ಟಡವು ಸದೃಢತೆಯಿಂದ ಮೇಲೆಳುತ್ತದೆ ಭುನಾದಿಗೆ ಭೂಮಿ ಮುಖ್ಯ, ಭೂಮಿಗೆ ಬೀಜ ಮುಖ್ಯ ಅದರಂತೆ ಮೂಲ ಪುರುಷರು ಶರಣ ಸಂತರನ್ನು ನೆನೆದರೆ ನೀರು ಆಹಾರ ಗಾಳಿ ಎಲ್ಲವೂ ಲಬಿಸುತ್ತದೆ ಎಂದು ಗದ್ದನಕೇರಿ ಕಸ್ತೂರಿಮಠದ ಪೂಜ್ಯಶ್ರೀ ಕರಬಸವೇಶ್ವರ ಮಹಾಸ್ವಾಮಿಗಳು ನುಡಿದರು.

ಸೋಮವಾರರಂದು ತಾಲೂಕಿನ ಮಿಣಜಗಿ ಗ್ರಾಮದ ಸದ್ಗುರು ಶ್ರೀ ಗುರುಪಾದೇಶ್ವರರ 50 ಪುಣ್ಯಸ್ಮರಣೋತ್ಸವ ಕುರಿತು ಏರ್ಪಡಿಸಲಾದ ಧರ್ಮಸಭೆಯನ್ನು ತುಳಸಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಆಶಿರ್ವದಿಸಿದ ಶ್ರೀಗಳು ಶರಣ ಸಂತರು ದಾರ್ಶನಿಕರು ಹಾಕಿಕೊಟ್ಟ ಮಾರ್ಗದಿಂದ ನಡೆಯಬೇಕು ಭೂಮಿಯಲ್ಲಿ ಒಳ್ಳೆಯ ಬೀಜ ಹಾಕಿದರೆ ಒಳ್ಳೆಯ ಫಸಲು ಬರುತ್ತದೆ ಅದರಂತೆ ಮಿಣಜಗಿ ಗ್ರಾಮದ ಶ್ರೀಗುರುಪಾದೇಶ್ವರರು ಆದ್ಯಾತ್ಮವೆಂಬ ಬೀಜದಿಂದ ಇಲ್ಲಿಯ ಜನತೆಗೆ ಸನ್ಮಾರ್ಗಕ್ಕೆ ಕೊಂಡೊಯ್ದಿದ್ದಾರೆ ಯಾವ ರೀತಿ ಗಿಡ ಒಂದರಲ್ಲಿ ಸಿಹಿ ಕಹಿ ಹುಳಿ ಎಂಬುದು ಬರುತ್ತದೆ ಅದಕ್ಕೆ ಕಾರಣ ಸೂರ್ಯನ ಬೆಳಕು ಭೂಮಿ ನೀರು ಎಂಬುದು ಆಗಿರುತ್ತದೆ ಸಂಸಾರದಲ್ಲಿ ಸದ್ಗತಿ ಹೊಂದಿದ ಸದ್ಗುರು ಗುರುಪಾದಯ್ಯನವರಾಗಿದ್ದಾರೆ ಸ್ನೇಹ ಪ್ರೀತಿ ಎಂಬವುಗಳಿಗೆ ಬೆಲೆ ಕೊಡಬೇಕು ಪುರಾಣ ಪ್ರವಚನ ಆಲಿಸಬೇಕು ಅಂದರೆ ಜೀವನವೆಂಬುದು ಸಾರ್ಥಕವಾಗಿ ಶಾಂತಿಯ ಬಧುಕಾಗಿ ತೃಪ್ತಿಯ ಜೀವನ ನಿಮರ್ಾಣವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಗಮೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ಶರಣ ಸಂತರಿಗೆ ಸಾವು ವೆಂಬುದಿಲ್ಲಾ ಅವರು ತಮ್ಮ ಉದ್ದಾರಬಯಸದೇ ಭಕ್ತೋದ್ದಾರ ಜನೋದ್ದಾರಕ್ಕೆ ಮುಂದಾಗಿರುತ್ತಾರೆ ಅದರಂತೆ ಅಂತಹ ಮಹಾ ಶರಣರಲ್ಲಿ ಮಿಣಜಗಿಯ ಸದ್ಗುರು ಶ್ರೀ ಗುರುಪಾದೇಶ್ವರ ಮಹಾಸ್ವಾಮಿಗಳಾಗಿದ್ದಾರೆಂದ ಪಾಟೀಲರು ತ್ಯಾಗ ಮಾಡಿದವರು ದೇಶಕ್ಕಾಗಿ ಬಲಿದಾನಗೊಂಡವರನ್ನು ನಾವು ಸ್ಮರಣೆ ಮಾಡುತ್ತೇವೆ ಅವರು ಮೃತಪಟ್ಟಿಲ್ಲಾ ಇನ್ನೂ ಜೀವಂತವಾಗಿದ್ದಾರೆಂದರು.

ಇನ್ನೊರ್ವ ಅತಿಥಿ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಸದ್ಗುರು ಶ್ರೀ ಗುರುಪಾದೇಶ್ವರ ಮಠದ ಈ ಹಿಂದೆ ಲಿಂಗೈಕ್ಯರಾದ ಬಸ್ಸಯ್ಯಮುತ್ಯಾರವರೊಂದಿಗೆ ನನ್ನ ಪ್ರೀತಿಯ ಒಡನಾಟವಿತ್ತು ಶ್ರೀಗಳು ತಮ್ಮ ಮೇಲೆ ಪ್ರೀತಿ ಪ್ರೇಮ ತೋರುತ್ತಿದುದ್ದರ ಕುರಿತು ವಿವರಿಸಿದ ಅವರು ಮುಂಬರುವ ದಿನಮಾನಗಳಲ್ಲಿ ಬರುವ ಶ್ರೀಗಳ ಪುಣ್ಯಸ್ಮರಣೋತ್ಸವ ದಿನಕ್ಕೆ 10 ದಿನದ ಮೊದಲೇ ಶ್ರೀಮಠದಲ್ಲಿ ಆದ್ಯಾತ್ಮೀಕ ಪ್ರವಚನವನ್ನು ನಡೆಸಿಕೊಂಡು ಬಂದರೆ ಭಕ್ತಸಮೂಹ ಪ್ರವಚನ ಆಲಿಸಿ ತಮ್ಮ ದುಃಖ ದುಮ್ಮಾನುಗಳನ್ನು ದೂರಿಕರಿಸಿಕೊಳ್ಳುತ್ತಾರೆಂದು ಶ್ರೀ ಮಠದ ಉಸ್ತುವರಿ ವೆ.ಸೋಮಶೇಖರಯ್ಯನವರಿಗೆ ತಿಳಿ ಹೇಳಿದರಲ್ಲದೇ ಶ್ರೀಮಠದ ಜೀಣರ್ೋದ್ದಾರಕ್ಕಾಗಿ ಮಿಣಜಗಿಯ ಗಣ್ಯಮಾನ್ಯರು ಕೈ ಜೋಡಿಸಬೇಕೆಂದ ಅವರು ತಾಳಿಕೋಟೆ-ಮಿಣಜಗಿ ಈ ಎರಡು ಸರಪಳಿ ಕೊಂಡಿಯಂತಿವೆ ಇವು ಆದ್ಯಾತ್ಮದಿಂದ ಪಾವನ ಮಾಡುವ ಕೇಂದ್ರಗಳಾಗಿವೆ ಎಂದರು.

ಇನ್ನೋರ್ವ ಅಥಿತಿ ಗಣ್ಯರಾದ ದ್ಯಾಮನಗೌಡ ಪಾಟೀಲ ಅವರು ಮಾತನಾಡಿ ಧರ್ಮದ ಅಡಿಪಾಯ ಮಿಣಜಗಿ ಹಿರೇಮಠದಲ್ಲಿದೆ ಶ್ರೀಮಠದ ಈಗಿನ ಉಸ್ತುವರಿ ವೆ.ಸೋಮಶೇಖರಯ್ಯನವರು ಎಲ್ಲರೊಂದಿಗೆ ಬೆರೆತು ಪ್ರೀತಿ ಪ್ರೇಮ ಗಳಿಸಿದ್ದಾರೆಂದರು.

ಇದೇ ಸಮಯದಲ್ಲಿ ಉಪಸ್ಥಿತ ಶ್ರೀಗಳಿಗೆ ಹಾಗೂ ಅತಿಥಿ ಮಹೋದಯರಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಗಣ್ಯರಾದ ಜೆ.ಡಿ.ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಸಾನಿದ್ಯ ವಹಿಸಿದ ಹಿರೂರ ಅನ್ನದಾನೇಶ್ವರ ಮಠದ ಶ್ರೀ ಗರುಶಾಂತವೀರ ಶಿವಾಚಾರ್ಯರು ಶ್ರೀ ಮಠದಲ್ಲಿಯ ಪೂಜೆಯ ವಿಧಿ ವಿದಾನಗಳನ್ನು ನಡೆಸಿಕೊಟ್ಟರು.

   ಕಾರ್ಯಕ್ರಮದ ಮೊದಲಿಗೆ ಸುಮಂಗಲೆಯರ ಕುಂಭಮೇಳದೊಂದಿಗೆ ಫಲ್ಲಕ್ಕಿ ಉತ್ಸವವು ವಿವಿಧ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಜರುಗಿ ಶ್ರೀಮಠಕ್ಕೆ ತಲುಪಿತು. ನಂತರ ರುದ್ರಾಭಿಷೇ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಿತು.

ತಮದಡ್ಡಿಯ ಭದ್ರೇಶ್ವರ ಮಠದ ಪೂಜ್ಯ ಶ್ರೀ ಚನ್ನಬಸ್ಸಯ್ಯ ಮಹಾಸ್ವಾಮಿಗಳು, ಮಲ್ಲಯ್ಯ ಹಿರೇಮಠ, ಜಿ.ಕೆ.ಬಿರಾದಾರ, ಕಾಶಿನಾಥ ಹಿರೇಮಠ, ಕುಂಟಯ್ಯ ಹಿರೇಮಠ, ಮಲ್ಲಯ್ಯ ವಿಭೂತಿ, ಶಂಕ್ರಯ್ಯ ಹಿರೇಮಠ, ಆಯ್.ಯು.ಹಿರೇಮಠ, ಡಿ.ಕೆ.ಹಿರೇಮಠ, ವೀರಯ್ಯ ಹಿರೇಮಠ, ಬಸವರಾಜ ಬಿರಾದಾರ, ಎಂ.ಎನ್.ಬಿರಾದಾರ, ಅಂಬ್ರಪ್ಪಣ್ಣ ಬಾಗೇವಾಡಿ, ಶಾಂತಗೌಡ ಬಿರಾದಾರ, ಸಂಗನಗೌಡ ಬಿರಾದಾರ(ಕೋರವಾರ), ಮುದೆಪ್ಪ ನಾಯ್ಕೋಡಿ, ವೀರುಪಾಕ್ಷೀ ಮ್ಯಾಗೇರಿ, ಹಾಗೂ ವಿವಿಧ ಭಜನಾ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕುಮಾರಿ ವಿದ್ಯಾ ಹಿರೇಮಠ ಪ್ರಾಥರ್ಿಸಿದರು. ಶ್ರೀಮಠದ ಉಸ್ತುವಾರಿ ಸೋಮಶೇಖರಯ್ಯ ಹಿರೇಮಠ ಸ್ವಾಗತಿಸುವದರೊಂದಿಗೆ ಪ್ರಾಸ್ಥಾವಿಕ ಮಾತನಾಡಿದರು.

ಉಪನ್ಯಾಸಕ ಎಸ್.ವ್ಹಿ.ಹಿರೇಮಠ ನಿರೂಪಿಸಿದರು. ಎ.ಎಂ.ಸಜರ್ಾಪೂರ ವಂದಿಸಿದರು.