ಧಾರವಾಡ 20: ಸುಮಾರು 8ನೇ ಶತಮಾನದ ಪೂಜ್ಯ ಜಕಣಾಚಾರಿಗಳು ಧಾರವಾಡದ ವಿದ್ಯಾಗಿರಿಯಲ್ಲಿ ನಿರ್ಮಿಸಿದ ಶ್ರೀ ಮೈಲಾರಲಿಂಗ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಮೈಲಾರಲಿಂಗ ದೇವಸ್ಥಾನದ ಜಾತ್ರೆ ಹಾಗೂ ಕಾರ್ಣಿಕೋತ್ಸವವು ರವಿವಾರ ದಿ.23ರಂದು ಜರಗುವುದು ಮತ್ತು ಶನಿವಾರ ದಿ. 22 ರಂದು ಮಹಾಭಿಷೇಕ ಬಿಲ್ಲು ಪೂಜೆ, ಹಾಗೂ ರಾತ್ರಿ, ಭಜನೆ ಜಾಗರಣೆ ನಡೆಯುವದು.
ಇದು 59ನೇ ಕಾರ್ಣಿಕೋತ್ಸವ ಆಗಿದ್ದು, ಶ್ರೀ ಮೈಲಾರಲಿಂಗ ದೇವಸ್ಥಾನದ ವಂಶ ಪಾರಂಪರಿಕ ಕಾರ್ಣಿಕ ಪುರುಷ ಶ್ರೀ ಸಿರಿಮಲ್ಲ ತಿಪ್ಪಣ್ಣ ಶಿರೋಳ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರಗುವುದು. ದಿ.23ರಂದು ರವಿವಾರ ಮಧ್ಯಾಹ್ನ 12 ಗಂಟೆಗೆ ಡೋಣಿ ಪೂಜೆ (ತುಂಬಿಸುವುದು), ಅನ್ನ ಸಂತರೆ್ಣ, ಸಂಜೆ 4:30 ಕ್ಕೆ ಮಹಾಮಂಗಳಾರತಿ ನಂತರ ಪಲ್ಲಕ್ಕಿ ಉತ್ಸವ ಕಾರ್ಣಿಕ ಸೇವೆ, ಸರಪಳಿ ಸೇವೆ ಜರಗುವವು, ಕಾರಣ ಸಕಲ ಸದ್ಭಕ್ತರು ತನುಮನದಿಂದ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರೆ ಹಾಗೂ ಅನ್ನ ಪ್ರಸಾದದ ವ್ಯವಸ್ಥಾಪಕರಾದ ಮಂಜುನಾಥ ಎಂ ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.