ಶ್ರೀ ಮಾತಾ ಆರ್ಟ ಗ್ಯಾಲರಿ ಹಾಗೂ ವರ್ಣಕಲಾ ಸಾಂಸ್ಕೃತಿಕ ಸಂಘದ ಉದ್ಘಾಟನೆ

ಲೋಕದರ್ಶನ ವರದಿ

ಬೆಳಗಾವಿ, 17: ಗೋವಾವೆಸ್ ಬಳಿ ಇರುವ ಮಾಹಾವೀರ ಭವನ ಆರ್ಟ ಗ್ಯಾಲರಿಯಲ್ಲಿ  ಶ್ರೀ  ಮಾತಾ ಆರ್ಟ ಗ್ಯಾಲರಿ ಹಾಗೂ ವರ್ಣಕಲಾ ಸಂಸ್ಕೃತಿಕ ಸಂಘದ ಉದ್ಘಾಟನೆ ಹಾಗು ವರ್ಲ್ಡ ಆರ್ಟ ಡೇ ಆಚರಿಸಲಾಯಿತು. 

ವರ್ಣಕಲಾ ಸಂಸ್ಕೃತಿಕ ಸಂಘ ಹಾಗು ವರ್ಡ ಆಟರ್್ ಡೇ ಕಾರ್ಯಕ್ರಮವನ್ನು  ಬೆಳಗಾವಿಯ ಕಂಕಣವಾಡಿ ಆಯರ್ುವೇದಿಕ ಕಾಲೇಜಿನ ಉಪನ್ಯಾಸಕ ಡಾ. ಮಾಹಾಂತೇಶ ರಾಮಣ್ಣವರ ಉದ್ಘಾಟಿಸಿ ಮಾತನಾಡಿ

ಕಲೆ ಕೆಲವರನ್ನು ಮಾತ್ರ ಕೈ ಬಿಸಿ ಕರೆಯುತ್ತದೆ. ಸಂಘದ ಸದಸ್ಯರು ಕಳೆದ ಅನೇಕ ದಿನಗಳಿಂದ ಬೆಳಗಾವಿಯಲ್ಲಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅನೇಕ ಕಲಾವಿದರನ್ನು ಬೆಳಗಾವಿಗೆ ಕರೆ ತಂದು ಅವರುಗಳ ಚಿತ್ರಗಳನ್ನು ಪ್ರದರ್ಶನ ಮಾಡಲು ವೇದಿಕೆ ನೀಡಿ ಈಗ ಮಕ್ಕಳಲ್ಲೂ ಸಹ ಕಲಾ ಆಸಕ್ತಿ ಮೂಡಿಸಲು ವರ್ಡ ಆಟರ್್ ಡೇ ದಂದ್ದು ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪಧರ್ೇ ಏರ್ಪಡಿಸಿ ಮಕ್ಕಳಲ್ಲಿ ಇರುವ ಸಾಮಥ್ರ್ಯ ಹೋರ ತರಲು ಉತ್ತಮ ವೇದಿಕೆ ಮಾಡಿದ್ದು ಶ್ಲಾಘನಿಯ ಎಂದರು. 

ಹುಬ್ಬಳ್ಳಿ ಕಲಾವಿದ ಶಂಕರ ಕಡಕುಂಟ್ಲ ವರ್ಣ ಕಲಾ ಶ್ರೀ ಪ್ರಶಸ್ಥಿ ಸ್ವೀಕರಿಸಿ ಮಾತನಾಡಿ ಶ್ರೀ ಮಾತಾ ಗ್ಲಾಸ್ ಆಟರ್್ ಗ್ಯಾಲರಿ ಹಾಗು ವರ್ಣಕಲಾ ಸಂಸ್ಕೃತಿಕ ಸಂಘದ ಸದಸ್ಯರು ತೆರೆ ಮರೆ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿರುವುದು ತುಂಬ ಸಂತೋಷದ ವಿಷಯ ಹಾಗು ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುತ್ತಿರುವುದು ಸಂತಸವೆನುಸುತ್ತದೆ ಎಂದರು. 

ಈ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ನಾಲ್ಕು ವಿಭಾಗ ಮಾಡಿ  ಚಿತ್ರ ಕಲಾ ಸ್ಪಧರ್ೆ ಮಾಡಲಾಗಿತು. ಇದರಲ್ಲಿ ಸುಮಾರು 100 ಕ್ಕೂ ಹೆಚ್ಚು ಮಕ್ಕಳು ಭಾಗ ವಹಿಸಿದರು ನಾಲ್ಕು ವಿಭಾಗದಲ್ಲಿ ಮೂರು ಬಹುಮಾನ ವಿತರಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ಣಕಲಾ ಸಂಸ್ಕೃತಿಕ ಸಂಘದ ಅಧ್ಯಕ್ಷ ನಾಗೇಶ ಚಿಮರೋಲ ವಹಿಸಿದ್ದರು.   

ಈ ವೇಳೆ ಕಲಾವಿದ ದಿಲೀಪ ಕಾಳೆ, ಸಂಜಯ ಬಸ್ತವಾಡ, ಸಂಜೀವಕುಮಾರ ತಿಲಗರ, ಸಂತೋಷ ಮಾಲೋಳ್ಳಿ, ಸ್ನೇಹಾ ಪತ್ತಾರ, ಶ್ವೇತಾ ಪತ್ತಾರ, ರಾಜೇಶ್ವರಿ ಡೋಣರ, ದೇಮಪ್ಪ ಕಟಾಬಳಿ, ಬರಮಾ ವೇತಾಲ, ರವಿ ಹೋಮಕರ. ಪದ್ಮಣಿ ಕುಲಕಣರ್ಿ ಇನ್ನು ಅನೇಕರು ಇದ್ದರು