ಲೋಕದರ್ಶನ ವರದಿ
ಮುನವಳ್ಳಿ: ಅ. 30 ರಂದು ಸಮೀಪದ ಹಿರೂರ ಗ್ರಾಮದಲ್ಲಿ ಊರಿನ ಸದ್ಭಕ್ತರ ಸಹಾಯ ಸಹಕಾರದಿಂದ ನಿಮರ್ಾಣಗೊಂಡ ನೂತನ ಶ್ರೀ ಲೋಕೂರೇಶ್ವರಿದೇವಿ ದೇವಸ್ಥಾನದ ಉದ್ಘಾಟನೆ ಶ್ರೀಗಳ ಅಮೃತಹಸ್ತದಿಂದ ನೆರವೇರಿತು.
ದೇವಸ್ಥಾನ ಉದ್ಘಾಟನೆಗೊಳಿಸಿ ಮಾತನಾಡಿದ ಮುನವಳ್ಳಿ ಸೋಮಶೇಖರಮಠದ ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು ದೇವಸ್ಥಾನಗಳು ಊರಿಗೆ ಕಳಶಪ್ರಾಯವಿದ್ದಂತೆ ಭಕ್ತಿಭಾವದೊಂದಿಗೆ ಅವುಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯ ಎಂದರು.
ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಸವದತ್ತಿ ಸ್ವಾದಿಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಶಿಂದೋಗಿಯ ಶ್ರೋ.ಬ್ರ. ಶ್ರೀ ಮುಕ್ತಾನಂದ ಮಹಾಸ್ವಾಮಿಗಳು ಹಾಗೂ ಸವದತ್ತಿಯ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಯಾವುದೇ ಸರಕಾರದ ಹಣ ಪಡೆಯದೇ ಊರಿನ ಸದ್ಭಕ್ತರೆಲ್ಲರೂ ತಮ್ಮ ದೇಣಿಗೆಯಿಂದ ದೇವಸ್ಥಾನ ನಿಮರ್ಾಣ ಮಾಡಿರುವುದು ಶ್ಲಾಘನೀಯ.
ಮನುಷ್ಯ ಗಳಿಸಿದ ಸಂಪತ್ತಿನಲ್ಲಿ ದಾನಧರ್ಮಗಳನ್ನು ಮಾಡಬೇಕು ಸಮಾಜದಲ್ಲಿ ತ್ರಿವಿಧ ದಾಸೋಹ ಕೈಗೊಳ್ಳುವ ಮೂಲಕ ಪುಣ್ಯವನ್ನು ಪಡೆದುಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಭಗವಂತನಿಗೆ ಮಾಡಿದ ಸೇವೆಯಿಂದ ನಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಓಬಳಾಪೂರದ ಶ್ರೀಗಳು ಉಪಸ್ಥಿತರಿದ್ದರು. ದೇವಸ್ಥಾನ ನಿಮರ್ಾಣಕ್ಕೆ ಸಹಾಯ ಸಹಕಾರ ನೀಡಿದ ಸೇವಾದಾನಿಗಳಿಗೆ ಶ್ರೀಗಳಿಂದ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಫಕೀರಪ್ಪ ಚಂದರಗಿ, ಗ್ರಾ.ಪಂ. ಸದಸ್ಯ ಶ್ರೀಶೈಲ ಬಿಜಗುಪ್ಪಿ, ರುದ್ರಪ್ಪ ಬೆಲ್ಲದ, ಮಹಾರುದ್ರಪ್ಪ ಬಾಳಿ, ಮಹಾದೇವಪ್ಪ ಮೇಟಿ, ಬಸವರಾಜ ಕರೀಕಟ್ಟಿ, ಭೀಮಪ್ಪ ಚಂದರಗಿ, ಶ್ರೀಶೈಲ ಮುನವಳ್ಳಿ, ಚಂದ್ರಪ್ಪ ಕಕ್ಕಾಳಿ, ಮಹಾದೇವ ಪೂಜೇರ, ನಿಂಗಪ್ಪ ಕರೀಕಟ್ಟಿ, ರಾಜೇಸಾಬ ಧಾರವಾಡ, ಮಹಾಂತೇಶ ಬಿಜಗುಪ್ಪಿ, ನಿಂಗಪ್ಪ ಮುನವಳ್ಳಿ, ಅಶೋಕ ಮುನವಳ್ಳಿ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದ ಮೊದಲು ನೂರಾರು ಮಹಿಳೆಯರು ಮಲಪ್ರಭಾ ನದಿಯಿಂದ ಜಲವನ್ನು ಪೂರ್ಣಕುಂಭದಲ್ಲಿ ಹೊತ್ತು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ಕುದರೆ ಮಜಲು, ಯುವಕರ ಕೋಲಾಟ, ವಾದ್ಯವೃಂದ ಮೆರವಣಿಗೆಗೆ ಮೆರಗು ತಂದವು. ದೇವಸ್ಥಾನದಲ್ಲಿ ವಿವಿಧ ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ಬಾಳು ಹೊಸಮನಿ ಮಾಡಿದರು.