ಬೆಂಗಳೂರು/ಉಡುಪಿ, ಆ 23 : ರಾಜ್ಯಾದ್ಯಂತ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮೋತ್ಸಾಹದಿಂದ ಆಚರಿಸಲಾಗಿದೆ ಸ್ಯಾಂಡಲ್ ವುಡ್ ಕೂಡ ಇದಕ್ಕೆ ಹೊರತಾಗಿರಲಿಲ್ಲ
ಫ್ಯಾನ್, ಉಡುಂಬ, ವಿಜಯರಥ ಸೇರಿದಂತೆ ಇಂದು 7 ಹೊಸ ಚಿತ್ರಗಳು ಬಿಡುಗಡೆಯಾಗಿ ಕನ್ನಡ ಚಿತ್ರರಸಿಕರನ್ನು ಸೆಳೆಯುತ್ತಿದ್ದರೆ, ಮತ್ತೊಂದೆಡೆ ನಟ, ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ
'ಕಿರಿಕ್' ಚಿತ್ರ ನಟ ರಕ್ಷಿತ್ ಉಡುಪಿಯಲ್ಲಿ ತಮ್ಮ ಹಿತೈಷಿಗಳು ಅಭಿಮಾನದ ಜೊತೆ ಹುಲಿ ಕುಣಿತಕ್ಕೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಆನಂದಿಸಿದ್ದಾರೆ ಈ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿದೆ