ಲೋಕದರ್ಶನ ವರದಿ
ಕೊಪ್ಪಳ: ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣ ಕಲಾ ಮಂದಿರದಲ್ಲಿ ಇದೇ ದಿ. 20ರ ರವಿವಾರದಂದು 6ನೇ ಬಾರಿಗೆ ಜರುಗಲಿರುವ ವಿಜಯನಗರದ ಸಾಂಸೃತಿಕ ವೈಬವ ಹಾಗೂ ಬೀಚಿ ಸ್ಮರಣೆ ಕಾರ್ಯಕ್ರಮದಲ್ಲಿ ಕೂಡ ಮಾಡುವ ಶ್ರೀ ಕೃಷ್ಣದೇವರಾಯ ರಾಜ್ಯ ಮಟ್ಟದ ಪ್ರಶಸ್ತಿಗೆ ಹೊಸಪೇಟೆಯ ಟಿಬಿ.ಡ್ಯಾಂ ಸರ್ಕಲ್ ಪೋಲೀಸ್ ಠಾಣೆಯ ಸಿಪಿಐ ವಿ. ನಾರಾಯಣ ರವರು ಆಯ್ಕೆಗೊಂಡಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕ ಸಮಿತಿಯ ಮುಖ್ಯಸ್ಥ ಕೆ. ರಾಮಲಿಂಗ ಮತ್ತು ಮಹೇಶಬಾಬು ಸುರ್ವೇ ಪ್ರಕಟಣೆೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ವಿವಿಧ ಕ್ಷೇತ್ರದಲ್ಲಿ ಸಾದನೆ ಮಾಡಿದ ಸಾಧಕರಿಗೆ ಕೂಡ ಮಾಡುವ ಶ್ರೀ ಕೃಷ್ಣದೇವರಾಯ ರಾಜ್ಯ ಮಟ್ಟದ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಟಿಬಿ.ಡ್ಯಾಂ ಸರ್ಕಲ್ ಪೋಲೀಸ್ ಠಾಣೆಯ ಸಿಪಿಐ ವಿ. ನಾರಾಯಣ ರವರು ಸಲ್ಲಿಸಿದ ಉತ್ತಮ ಪೋಲೀಸ್ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಸಿಪಿಐ ವಿ. ನಾರಾಯಣ ರವರಿಗೆ ಶ್ರೀ ಕೃಷ್ಣದೇವರಾಯ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವದಕ್ಕೆ ಪೋಲೀಸ್ ಇಲಾಖೆಯ ಅಧಿಕಾರಿ ಮತ್ತು ಪೋಲೀಸ್ ಪೇದೆಗಳು ಸೇರಿದಂತೆ ಅವರ ಅಭಿಮಾನಿ ಬಳಗ ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.