ಯರಗಟ್ಟಿ, 19: ಸಮೀಪದ ಕೋಟೂರ-ಶಿವಾಪುರ ಗ್ರಾಮದ ಉಜ್ಜಯಿನಿ ಶಾಖಾ ಹಿರೇಮಠದ ಶ್ರೀ ಚರಂತಯ್ಯ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಉಜ್ಜಯಿನಿ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಚಾರ ಭಗವತ್ಪಾದರ ಸಾನ್ನಿಧ್ಯದಲ್ಲಿ ಏ.21ರಿಂದ ಮೇ 12ರ ವರೆಗೆ ಜರುಗಲಿವೆ. ಉಜ್ಜಯಿನಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ 1008 ಕುಂಭಮೇಳ, ಅಯ್ಯಾಚಾರ, ಪುರಾಣ ಪ್ರವಚನ, ಧರ್ಮ ಸಭೆಗಳು ನಡೆಯಲಿವೆ.ನಿರಂತರ 21 ದಿನಗಳ ಕಾಲ ಪ್ರವಚನ ಕಾರ್ಯಕ್ರಮವನ್ನು ಗದಗ ಜಿಲ್ಲೆ ಅಂತೂರ-ಬೆಂತೂರ ಬೂದಿಸ್ವಾಮಿ ಮಠದ ಶ್ರೀ ಕುಮಾರ ದೇವರು ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಹಾಗೂ ಉದ್ಘಾಟಕರಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ನೇತೃತ್ವವನ್ನುಮುನವಳಿಯ ಮುರಘಂದ್ರ ಮಹಾಸ್ವಾಮಿಗಳು,ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ರೇಣುಕ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಜಿ, ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಜಿ, ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ, ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ಉಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ, ಬಾಳಯ್ಯಾ ಸ್ವಾಮಿಗಳು, ಗಂಗಾದರ ಸ್ವಾಮಿಜಿ ಸೇರಿದಂತೆ ಹಲವಾರು ಮಠಾಧೀಶರು, ರಾಜಕೀಯ ಧುರೀಣರು, ಸಾಹಿತಿಗಳು, ಸಂಗೀತಗಾರರು, ಸಮಾಜ ಸೇವಕರು, ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುವರೆಂದು ಶ್ರೀಮಠ ಮೂಲಕ ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಈ ವೇಳೆ ಚರಂತಯ್ಯ ದೇವರು, ಬಸಯ್ಯ ಹಿರೇಮಠ, ಮಹಾಂತೇಶ ತೋಟಗಿ, ಶಿಂಗಯ್ಯ ಮಠಪತಿ, ಶಿವಾನಂದ ಕಟ್ಟಿಮನಿ ಇದ್ದರು.