ಮಾಂಜರಿ 10: ಕರ್ನಾಟಕ ಮಹಾರಾಷ್ಟ್ರ ಆಂಧ್ರ ಪ್ರದೇಶ್ ಹಾಗೂ ಇನ್ನಿತರ ರಾಜ್ಯಗಳ ಹಲವಾರು ಭಕ್ತಾದಿಗಳ ಕುಲ ದೈವತ ಹಾಗೂ ಶ್ರದ್ಧಾ ಸ್ಥಾನವಾದ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡುರಿನ ವೀರಭದ್ರ ದೇವರ ಹಾಗೂ ಕಾಡದೇವರ ಮಠದ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 13 ಮಾರ್ಚ್ ಮತ್ತು 14 ಮಾರ್ಚ್ ರಂದು ಶ್ರೀ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹಾ ಮಹೋತ್ಸವ ಹಾಗೂ ಮಹಿಳೆಯರಿಂದ ರಜತ ಬೆಳ್ಳಿ ರಥೋತ್ಸವ ಸಹಸ್ರಾರು ಸುಮಂಗಲಿಯರ ಉಡಿ ತುಂಬುವ ಕಾರ್ಯಕ್ರಮವನ್ನು ಗುಗ್ಗುಳು ಉತ್ಸವ ಮತ್ತು ಪುರವಂತರ ಮಹಾಮೇಳವನ್ನು ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾಹನ ನಿಲುಗಡೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ತಿಳಿಸಿದರು
ಶ್ರೀ ವೀರಭದ್ರ ದೇವರು ಶಿವನ ಕೆಂಜೆಡೆಯಿಂದ ಅವತರಿಸಿ, ಸತಿದೇವಿಯ ದಹನಕ್ಕೆ ಕಾರಣವಾದ ದಕ್ಷಬ್ರಹ್ಮನ ಸಂಹರಿಸಿ, ಶಿವನ ಅಪ್ಪಣೆಯ ಮೇರೆಗೆ ಭದ್ರಕಾಳಿಯ ಜೊತೆಗೆ ವಿವಾಹವನ್ನು ಮಾಡಿಕೊಂಡು ಶ್ರೀ ಕ್ಷೇತ್ರ ಯಡೂರದಲ್ಲಿ ಲಿಂಗ ರೂಪದಿಂದ ನಿತ್ಯನಿವಾಸ ಮಾಡಿರುವುದು ಸರ್ವರಿಗೂ ವೇದ್ಯವಾದ ಸಂಗತಿಯಾಗಿದೆ. ಶ್ರೀ ಕ್ಷೇತ್ರದಲ್ಲಿ ಶ್ರೀ ವೀರಭದ್ರನ ಧರ್ಮ ಪತ್ನಿಯಾದ ಭದ್ರಕಾಳಿಯ ಮೂರ್ತಿಯನ್ನು ಶಾಸೋಕ್ತವಾಗಿ ನಿರ್ಮಿಸಿ ದಿನಾಂಕ 21-01-2015 ರಂದು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿಧಿವತ್ತಾಗಿ ಆ ಮೂರ್ತಿಯ ಪ್ರತಿಷ್ಠಾಪನೆಯು ವೈಭವದಿಂದ ಜರುಗಿದೆ. ಶಾಸ್ತ್ರವಿಧಿಗನುಸಾರವಾಗಿ ಅದರ ಮಂಡಲ ಪೂಜೆಯು ಪೂರ್ಣಗೊಂಡು ಶ್ರೀ ಭದ್ರಕಾಳಿ-ವೀರಭದ್ರೇಶ್ವರ ಕಲ್ಯಾಣ ಮಹೋತ್ಸವವನ್ನು ಕಳೆದ 11 ವರ್ಷಗಳಿಂದ ಪ್ರಾರಂಭಿಸಲಾಗಿದೆ. ಈ ವರ್ಷವೂ ಆ ಕಲ್ಯಾಣ ಮಹೋತ್ಸವವು ವೈಭವದಿಂದ ಜರುಗಲಿದ್ದು, ತನ್ನಿಮಿತ್ಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಶೈಲ ಶ್ರೀಗಳು ಹೇಳಬೇಕು
ಶ್ರೀ ಮ.ನೃ.ಪ.ಶಾ.ಶಕೆ 1946 ನೇ ಕ್ರೋಧಿನಾಮ ಸಂವತ್ಸರ, ಫಾಲ್ಗುಣ ಶುಕ್ಲ ಪಕ್ಷ ಪೂರ್ಣಿಮೆಯ ಗುರುವಾರ ದಿ. 13-03-2025 ರಂದು ಸಂಜೆ 5-18 ಗಂಟೆಗೆ ಗೊಧೂಳಿ ಮುಹೂರ್ತದ ಶುಭ ಲಗ್ನದಲ್ಲಿ ಕಲ್ಯಾಣ ಮಹೋತ್ಸವ ಕಾರ್ಯಕ್ರಮ.
* ವೈದಿಕ ನೇತೃತ್ವ *
ಶ್ರೀ ಸಿದ್ದಲಿಂಗ ಶಿವಾಚಾರ್ಯ ವೇದಾಗಮ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರು ಹಾಗೂ ಸಾಧಕ ವೃಂದ
ಅದೇ ದಿನ ರಾತ್ರಿ 7-30 ಗಂಟೆಗೆ ಸಹಸ್ರ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ
ರಾತ್ರಿ 9-00 ಗಂಟೆಗೆ : ಮಹಾಪ್ರಸಾದ
ಶುಕ್ರವಾರ ದಿ. 14-03-2025 ರಂದು ಮುಂಜಾನೆ 8-00 ಗಂಟೆಗೆ
ಶ್ರೀ ವೀರಭದ್ರ-ಭದ್ರಕಾಳಿ ಮೂರ್ತಿಗಳ ಗ್ರಾಮೋತ್ಸವ ಹಾಗೂ ಗುಗ್ಗುಳೋತ್ಸವ ಮತ್ತು ಪುರವಂತರ ಮಹಾಮೇಳ, ಮುಂಜಾನೆ 10-30 ಗಂಟೆಗೆ
ಮಹಿಳೆಯರಿಂದ ಬೆಳ್ಳಿ ರಥೋತ್ಸವ ಮಧ್ಯಾಹ್ನ 12-00 ಗಂಟೆಗೆ ಅಗ್ನಿ ಪ್ರವೇಶ ಕಾರ್ಯಕ್ರಮ ಎಂದು ಅವರು ಹೇಳಿದರು.
ಗುರುವಾರ ದಿನಾಂಕ 13 ರಂದು ಸಾಯಂಕಾಲ 6:00 ಗಂಟೆಗೆ ನಡೆಯಲಿರುವ ಶ್ರೀ ವಿ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹಾಮಹೋತ್ಸವದಲ್ಲಿ ಹಾಗೂ ಸುಮಂಗಲಿಯರ ಕಾರ್ಯಕ್ರಮವನ್ನು ದಿವ್ಯ ಸಾನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರುವಾದ ಡಾ. ಚೆನ್ನ ಸಿದ್ದರಾಮ ಪಂಡಿತರಾಜ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ಸಿಂದಗಿಯ ಸಾರಂಗಮಠ ಗಚ್ಚಿನ ಮಠದ ಪರಮಪೂಜ್ಯ ಡಾಕ್ಟರ್ ಪ್ರಭು ಸಾರಂಗದೇವರ ಶಿವಾಚಾರ್ಯ ಸ್ವಾಮೀಜಿಗಳು ವಹಿಸಿದ್ದಾರೆ. ಇದೇ ವೇಳೆ ಬೆಂಗಳೂರಿನ ಯುವ ವಾಗ್ಮಿ ಲೇಖಕರು ಕುಮಾರಿ ಹರಿಕ್ ಮಂಜುನಾಥ್ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಈ ಕಾರ್ಯಕ್ರಮಕ್ಕೆ ವಿಶೇಷ ಮಠಾಧೀಶರು ರಾಜಕೀಯ ಗಣ್ಯರು ಇನ್ನುಳಿದ ಗಂಡ ನಾಗರಿಕರು ಪಾಲ್ಗೊಳ್ಳುತ್ತಾರೆ ಎಂದು ಅವರು ಹೇಳಿದರು.