ಶ್ರೀ ಬೀರೇಶ್ವರ ಜಾತ್ರಾ ಮಹೋತ್ಸವ: ಸತ್ಸಂಗ ಸೌರಭ ಕಾರ್ಯಕ್ರಮ

ಶ್ರೀ ಬೀರೇಶ್ವರ ಜಾತ್ರಾ ಮಹೋತ್ಸವ: ಸತ್ಸಂಗ ಸೌರಭ ಕಾರ್ಯಕ್ರಮ Sri Beereshwar Jatra Festival: Satsang Saurabha Program

ಧಾರವಾಡ 24: ಸತ್ತೂರು ಶ್ರೀ ಬೀರೇಶ್ವರ ಜಾತ್ರಾ ಮಹೋತ್ಸವ ಹಾಗೂ ಬೀರೇಶ್ವರ ಸತ್ಸಂಗ ಸೌರಭ ಕಾರ್ಯಕ್ರಮವು ಶ್ರೀ ರೇವಣಸಿದ್ದೇಶ್ವರ ಮಹಾಮಠದ ಪೂಜ್ಯಶ್ರೀ ಡಾ. ಬಸವರಾಜ ದೇವರು ಸಾನಿಧ್ಯದಲ್ಲಿ ಜರುಗಿತು.

ಶ್ರೀಗಳು ಮಾತನಾಡಿ ಸತ್ಸಂಗವು ಬಹಳ ಮುಖ್ಯ. ಪ್ರತಿಯೊಬ್ಬರ ಮೋಕ್ಷಕ್ಕಾಗಿ ಹಂಬಲಿಸಬೇಕು ನಾವೆಲ್ಲರೂ ಜಪ-ತಪ ಮಾಡುತ್ತಾ ಶರಣರ ಸಾತ್ವಿಕರು ಸಜ್ಜನರ ಸಂಘದಲ್ಲಿದ್ದು ಜೀವನ ಕಳೆಯಬೇಕು ಉತ್ತಮ ಸಂಸ್ಕಾರ ಹೊಂದಿ, ಮನುಷ್ಯ ಜನ್ಮ ಸಾರ್ಥಕಗೊಳಿಸಬೇಕು ಗಣ್ಯರಾದ ಮಲ್ಲಯ್ಯ ಸ್ವಾಮಿ ಹಿರೇಮಠ ನಾಗಪ್ಪ ಚಿನಗಿ ಚನ್ನಬಸಪ್ಪ ಕರಡಿನವರ ವೆಂಕನಗೌಡ ಪಾಟೀಲ ಬಸವರಾಜ ಕುಸುಗಲ ಮೈಲಾರಿ ಉಪ್ಪಿನ ಎಂಎಸ್ ಗೊನೆನವರ ಧರ್ಮ ಕೋರೆಗಣ್ಣವರ ಉಪಸ್ಥಿತರಿದ್ದರು. ಶ್ರೀ ಬೀರೇಶ್ವರ ದೇವಸ್ಥಾನದ ಅಧ್ಯಕ್ಷರು ಭೀಮಣ್ಣ ಹೊನಕೇರಿ ಸ್ವಾಗತಿಸಿ ವಂದಿಸಿದರು. ಸಂತರ್ಪಣೆ ಜರಗಿತು.