ಶ್ರೀ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೋಸಾಯಿಟಿ ಗುರ್ಲಾಪೂರ ಶಾಖೆಯ ವಾರ್ಷಿಕೋತ್ಸವ

Sri Basaveshwara Urban Co op Credit Society Gurlapur Branch Anniversary

ಗುರ್ಲಾಪೂರ 18: ಶ್ರೀ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೋಸಾಯಿಟಿ ಲಿ ಮೂಡಲಗಿ ಶಾಖೆ ಗುರ್ಲಾಪೂರ ಇದರ 24ನೇ ವಾರ್ಷಿಕೋತ್ಸವ ಸಮಾರಂಭವನ್ನು ಶಾಖಾ ಕಾರ್ಯಾಲಯದಲ್ಲಿ ಬುಧವಾರ ದಿ 18 ರಂದು  ಮಲ್ಲಿಕಾರ್ಜುನ ಮೋಜನಿದಾರ ಇವರು ಬಸವೇಶ್ವರ ಹಾಗೂ ಲಕ್ಷ್ಮೀ  ದೇವಿಗೆ ಪೊಜೆ ಸಲ್ಲಿಸಿ ಉದ್ಘಾಟಿಸಿದರು.  

ಪ್ರ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಶಾಖಾ ಕಾಯದರ್ಶಿ ರಮೇಶ ಗೋಡಿಗೌಡರ ಗುರ್ಲಾಪೂರದಲ್ಲಿ ಈ ಶಾಖೆ ಆರಂಭದಿಂದ ಪ್ರಗತಿ ಪಥದಲ್ಲಿ ಸಾಗಲು ಪ್ರಧಾನ ಕಛೇರಿ ಆಡಳಿತ ಮಂಡಳಿ ಹಾಗು ಸಿಬ್ಬಂದಿ ಹಾಗೂ ಸಲಹಾ ಸಮೀತಿಯವರು ಸಹಕಾರದಿಂದ 31/3/2024ಕ್ಕೆ 62.34.059.52.ಲಾಭ ಗಳಿಸಿದೆ ಎಂದು ತಿಳಿಸಲು ಸಂತೋಷವೆನಿಸುತ್ತಿದೆ. ಸಂಘದಿಂದ ಸದಸ್ಯರಿಗೆ ಯಾವ ಯಾವ ಸಾಲ ಕೊಡುತ್ತೇವೆ ಹಾಗು ಠೇವುಗಳ ಬಗ್ಗೆ ಸದಸ್ಯರಿಗೆ ತಿಳಿಸುತ್ತಾ 31/3/2024ಕ್ಕೆ ಸದಸ್ಯರಿಗೆ 20.ಕೊಟಿ 33.ಲಕ್ಷ ಸಾಲವಿತರಿಸಿದೆ 56.09.300.ಶೇರು ಬಂಡವಾಳ ಹೊಂದಿದೆ. 25 ಕೋಟಿ.60.ಲಕ್ಷ ಠೇವು ಸಂಗ್ರಹಣೆ ಮಾಡಿದೆ. ಬರುವ  ಆರ್ಥಿಕ ವರ್ಷದಲ್ಲಿ ಸಂಘದಿಂದ ಶೇರುದಾರರಿಗೆ ನೀಡುವ ಅನಕೊಲತೆಗಳನ್ನು ನೀಡುವದರ ಜೊತೆಗೆ ಸಂಘಕ್ಕೆ ನಿವೇಶನ ತಗೆದುಕೊಳ್ಳಲಾಗುವದು ಸಂಘವು ಶೇರುದಾರರಿಗೆ ಮತು ಹೂಡಿಕೆದಾರರಿಗೆ ಸದಾ ಅಭಿನಂದನೆಯನ್ನ ಸಲ್ಲಿಸಲಾಗುವದು ಪ್ರಧಾನ ಕಛೇರಿ ಆಡಳಿತ ಮಂಡಳಿಯವರು ಗ್ರಾಮದ ಬಸವೇಶ್ವರ ದೇವಸ್ಥಾನದ ಅಬಿವ್ರದ್ದಿಗೆ ಹಣದ ಸಹಾಯಮಾಡಿದ ಬಗ್ಗೆ ಮಾತನಾಡಿದರು. 

ಈ ಸಮಾರಂಭದಲ್ಲಿ ಸಲಹಾ ಸಮಿತಿ ನಿರ್ದೇಶಕರಾದ ರಾಮಪ್ಪ ನೇಮಗೌಡರ. ಅಚ್ಚುತ ಕುಲಕರ್ಣಿ ಜಗದೀಶ ಮುಗಳೋಡ ಸಿದ್ಲಂಗಪ್ಪಾ ನೇಮಗೌಡರ ಸಿದ್ದಪ್ಪಾ ಕೌಜಲಗಿ.  ಹಾಗು ರವಿ ಮುನ್ನೋಳ್ಳಿ ಶಿವಾನಂದ ಅಡಗಿಮನಿ ಶಂಕರ ಪಾಟೀಲ ಕೃಷ್ಣಾ ಕಂಬಾರ ಶಿವಬಸು ಮರಾಠೆ.  ಮತ್ತು  ಸದಸ್ಯರು  ಹಾಗು ಸಿಬ್ಬಂದಿಯವರು ಉಪಸ್ಥತಿರಿದ್ದರು.  ವಿಜಯ ಗಾಣಿಗೇರ ಸ್ವಾಗತಿಸಿದರು, ಶಿವಯೋಗಿ ಮೋಜನಿದಾರ ವಂದಿಸಿದರು.