ಸೇವಾ ನಿವೃತ್ತಿ: ಶ್ರೀಶೈಲ್ ಕರಿಶಂಕರಿಗೆ ಬೀಳ್ಕೊಡುಗೆ

ಬೆಳಗಾವಿ, ಮೇ 30: ಮೇ 31 ರಂದು ಸೇವಾ ನಿವೃತ್ತಿ ಹೊಂದುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಶ್ರೀಶೈಲ್ ಕರಿಶಂಕರಿ ಅವರನ್ನು ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಮತ್ತು ಜಿಲ್ಲೆಯ ಕಲಾವಿದರ ಪರವಾಗಿ ಗುರುವಾರ (ಮೇ 30) ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಡಲಾಯಿತು.

ಟ್ರಸ್ಟಿನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀಶೈಲ್ ಕರಿಶಂಕರಿ ದಂಪತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಹಾಗೂ ಬೆಳಗಾವಿ ಜಿಲ್ಲಾ ಜಾನಪದ ಕಲಾ ಸಂಘ ಸೇರಿದಂತೆ ವಿವಿಧ ಸಂಘಟನೆಯವರು ಸೇರಿ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷರಾದ ಪ್ರೊ. ರಾಘವೇಂದ್ರ ಪಾಟೀಲ ಅವರು, ಕರಿಶಂಕರಿ ಅವರದು ನಿಷ್ಕಲ್ಮಶ ವ್ಯಕ್ತಿತ್ವ ಎಂದು ಬಣ್ಣಿಸಿದರು.

ಟ್ರಸ್ಟಿನ ಕಾರ್ಯಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವ ಜತೆಗೆ ನವದೆಹಲಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಕೈಜೋಡಿಸಿರುವುದನ್ನು ಸ್ಮರಿಸಿಕೊಂಡರು.

ವಿಶ್ರಾಂತ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಆರೋಗ್ಯಯುತ ಜೀವನ ನಡೆಸುವಂತೆ ಸಲಹೆ ನೀಡಿದರು.

ಇದೇ ವೇಳೆ ಮಾತನಾಡಿದ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಅವರು, ಗ್ರಾಮೀಣ ಹಿನ್ನೆಲೆಯಿಂದ ಬಂದರೂ ತಮ್ಮ ವೃತ್ತಿಯನ್ನು ಯಶಸ್ವಿಯಾಗಿ ನಿಭಾಯಿಸಿದರು.

ಕಸಾಪ ಮೂಲಕ ಕನ್ನಡದ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದು, ತಮ್ಮ ಸ್ನೇಹಪರತೆಯಿಂದ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಾರೆ ಎಂದು ಹೇಳಿದರು.

ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟಿನ ಸದಸ್ಯರಾದ ಸತೀಶ್ ಕುಲಕಣರ್ಿ ಮಾತನಾಡಿ, ಶ್ರೀಶೈಲ್ ಕರಿಶಂಕರಿ ಅವರ ಒಡನಾಟವನ್ನು ಮೆಲುಕುಹಾಕಿದರು.

ಟ್ರಸ್ಟಿನ ಸದಸ್ಯರಾದ ಆಶಾ ಕಡಪಟ್ಟಿ, ಪ್ರೊ.ಚಂದ್ರಶೇಖರ ವಸ್ತ್ರದ, ಉಪಸ್ಥಿತರಿದ್ದರು.

ಜಿಲ್ಲೆಯ ಕಲಾವಿದರ ಪರವಾಗಿ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಶೈಲ್ ಕರಿಶಂಕರಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿದರ್ೇಶಕರಾದ ಸಿ ಬಿ ರಂಗಯ್ಯ ಅವರು ಮಾತನಾಡಿ, ಅವರು ಕಲಾವಿದರಿಗೆ ಮಾಡಿದಂತ ಸೇವೆ ಸದಾಕಾಲವೂ ಹಸಿರಾಗಿರಲಿ ಎಂದು ಹಾರೈಸಿದರು.

ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪ ನಿದರ್ೇಶಕ ಗುರುನಾಥ ಕಡಬೂರ ಅವರು ಕರಿಶಂಕರಿ ಅವರ ಕನ್ನಡ ಪ್ರೀತಿಯನ್ನು ಕೊಂಡಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಶೈಲ್ ಕರಿಶಂಕರಿ ಅವರು, ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ತಾವು ದುರದೃಷ್ಟವಶಾತ್ ಊಟಕ್ಕೂ ಗತಿಯಿಲ್ಲದಂತಹ ಬಡತನ ಸ್ಥಿತಿ ತಲುಪಿ, ಮತ್ತೇ ಹಂತ ಹಂತವಾಗಿ ಬೆಳೆದುಬಂದ ಅನುಭವವನ್ನು ಹಂಚಿಕೊಂಡರು.

ಮೂವತ್ತೈದು ವರ್ಷ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಸಕರ್ಾರ, ಕಲಾವಿದರು, ಸಾಹಿತಿಗಳು ಹಾಗೂ ಅಧಿಕಾರಿಗಳ ವಲಯದಿಂದ ತಾವು ಪಡೆದುಕೊಂಡ ಪ್ರೀತಿ-ವಿಶ್ವಾಸವನ್ನು ಮೆಲುಕು ಹಾಕಿದ ಅವರು, ಎಲ್ಲರಿಗೂ ಚಿರ ಋಣಿಯಾಗಿದ್ದೇನೆ ಎಂದರು.

ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿಗಳಾದ ಎಸ್.ಯು. ಜಮಾದಾರ ಅವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಯ.ರು. ಪಾಟೀಲ, ವಾತರ್ಾ ಮತ್ತು ಸಂಪರ್ಕ ಇಲಾಖೆ ಉಪನಿದರ್ೇಶಕರಾದ ಗುರುನಾಥ ಕಡಬೂರ, ಮಲ್ಲೇಶ ಚೌಗಲೆ, ಮಲ್ಲಪ್ಪ ಹುದಲಿ, ಕಲಾವಿದರ ಸಂಘದ ರಾಮಚಂದ್ರ ಕಾಂಬಳೆ ಹಾಗೂ ವಿವಿಧ ಕಲಾ ತಂಡದ ಸದಸ್ಯರು ಉಪಸ್ಥಿತರಿದ್ದರು