ಶ್ರೀರಾಮುಲು ಯೂಟನರ್್

 

ಪ್ರತ್ಯೇಕ ಕನರ್ಾಟಕ ವಿಚಾರ ತಾರಕಕ್ಕೇರಿದ ಬೆನ್ನಲ್ಲೇ ಅಖಂಡ ಕನರ್ಾಟಕವು ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು ಎಂಬುದಾಗಿ ಹೇಳುವ ಮೂಲಕ ಬಿಜೆಪಿ ಶಾಸಕ, ಮಾಜಿ ಸಚಿವ ಬಿ.ಶ್ರೀರಾಮುಲು ಉಲ್ಟಾ ಹೊಡೆದಿದ್ದಾರೆ. 

  ಅಖಂಡ ಕನರ್ಾಟಕವು ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು ಎನ್ನುವುದು ನನ್ನ ಸ್ಪಷ್ಟ ನಿಲುವು. ರಾಜ್ಯ ಒಡೆಯಲು ಕೆಲವು ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ.

ಸಿಎಂ ಕುಮಾರಸ್ವಾಮಿಯವರು ಉತ್ತರ ಕನರ್ಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯವೇ ಇಂದಿನ ಈ ಪರಿಸ್ಥಿತಿಗೆ ನೇರ ಕಾರಣ. ಮತ ನೀಡಲಿಲ್ಲವೆಂಬ ಕಾರಣಕ್ಕೆ ಉತ್ತರ ಕನರ್ಾಟಕವನ್ನು ಅವಹೇಳನ ಮಾಡುತ್ತಿರುವ ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. 

ಸಮ್ಮಿಶ್ರ ಸರಕಾರ ಬಗೆಯುತ್ತಿರುವ ಈ ದ್ರೋಹವನ್ನು ಮುಚ್ಚಿಡಲು ಕೆಲವು ದುಷ್ಟಶಕ್ತಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ಟ್ವೀಟ್ ಮಾಡುವ ಮೂಲಕ ಸಮಜಾಯಿಷಿ ನೀಡಿದ್ದಾರೆ.