ಮಹಾಲಿಂಗಪುರ 20: ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದ ಕುಮಾರಿ ಸ್ಪೂರ್ತಿ ನಾರಾಯಣ ಲಾಲಿಬುಡ್ಡಿ ಬಾಗಲಕೋಟ ಜಿಲ್ಲೆಯ ನೆಟ್ ಬಾಲ್ ತಂಡವನ್ನು ಪ್ರತಿನಿಧಿಸಿ, ತನ್ನ ವೈಯಕ್ತಿಕ ಉತ್ತಮ ಆಟದಿಂದ ರಾಜ್ಯ ಆಯ್ಕೆದಾರರ ಗಮನ ಸೆಳೆದು ರಾಷ್ಟ್ರ ಮಟ್ಟದ ನೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿ ಶಾಲೆಯ ಮತ್ತು ಪಟ್ಟಣದ ಕೀರ್ತಿ ಹೆಚ್ಚಿಸಿದ್ದಾಳೆ.
ಇತ್ತಿಚೆಗೆ ಕೋಲ್ಲೂರದ ಮೂಕಾಂಬಿಕಾ ದೇವಳ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಗಳು ನಡೆದು, ಮುಂದಿನ ರಾಷ್ಟ್ರ ಮಟ್ಟದ ಕ್ರೀಡಾಕೂಟ ಇದೇ ತಿಂಗಳು ಡಿಸೆಂಬರ್ 25 ರಿಂದ 28 ರವರೆಗೆ ಛತ್ತಿಸಘಡ ರಾಜ್ಯದ ಕೊರ್ಬಾದಲ್ಲಿ ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆಗೈದ ವಿಧ್ಯಾರ್ಥಿನಿ ಸ್ಪೂರ್ತಿ ಶ್ರೀ ಗುರು ಮಹಾಲಿಂಗೇಶ್ವರ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಈ ಸಂದರ್ಭದಲ್ಲಿ ಬೆಳಗಲಿ ವಿದ್ಯಾವರ್ಧಕ ಸಂಘ ಶ್ರೀ ಗುರು ಮಹಾಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಅಧ್ಯಕ್ಷ ದುಂಡಪ್ಪ ಬರಮನಿ, ಉಪಾಧ್ಯಕ್ಷ ಚಿಕ್ಕಯ್ಯ ನಾಯಕ, ಕಾರ್ಯಧ್ಯಕ್ಷ ಪಿ ಬಿ ಪೂಜಾರ, ಕಾರ್ಯದರ್ಶಿ ಎಸ್ ಐ. ಒಂಟಗೋಡಿ, ಪ್ರಾಚಾರ್ಯ ಪಿ ಎಚ್ ನಾಯಕ, ದೈಹಿಕ ಶಿಕ್ಷಕ ರಾಘವೇಂದ್ರ ನಾಯಕ್, ವ್ಯವಸ್ಥಾಪಕರಾದ ಕುಮಾರಿ ಉಮಾಶ್ರೀ ನ್ಯಾಮಗೌಡ ಮತ್ತು ಸರ್ವ ಸದಸ್ಯರು ಉಪನ್ಯಾಸಕರು, ಶಾಲೆಯ ವಿದ್ಯಾರ್ಥಿಗಳು ಹಾಗೂ ಊರಿನ ಗುರುಹಿರಿಯರು ಈ ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ.