ದೈಹಿಕ ಅನಾರೋಗ್ಯ ದೂರ ಮಾಡಲು ಕ್ರೀಡೆಗಳು ಪೂರಕ

ಹಾವೇರಿ17:  ದೈಹಿಕ ಸಮಸ್ಯೆಗಳು ಹಾಗೂ ರೋಗಗಳನ್ನು ತಡೆಗಟ್ಟಲು ಕ್ರೀಡೆಗಳು ಸಹಕಾರಿಯಾಗಿವೆ ಎಂದು ಶಾಸಕರಾದ ನೆಹರು ಓಲೇಕಾರ ಅವರು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 2019-20 ನೇ ಸಾಲಿನ ಹಾವೇರಿ ಜಿಲ್ಲಾ ಮಟ್ಟದ ರಾಜ್ಯ ಸಕರ್ಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು  ಅವರು ಮಾತನಾಡಿದರು. 

  ಪ್ರತಿದಿನ ನಮ್ಮ ದೇಹ ದಂಡನೆಯಾದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಕ್ರೀಡೆಗಳು, ವ್ಯಾಯಾಮ ಮಾಡುವುದರಿಂದ ದೇಹ ಚಟುವಟಿಕೆಯಿಂದಲೇ ಕೂಡಿರುತ್ತದೆ. ಇದರಿಂದಾಗಿ ದೇಹ ಮತ್ತು ಮನಸ್ಸಿನಲ್ಲಿ ಚೈತನ್ಯ ಬರುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಸ್ಪಧರ್ಿಗಳು ಒತ್ತಡವನ್ನು ಮರೆತು ಕ್ರೀಡಾಮನೋರಂಜನೆ ಪಡೆದುಕೊಳ್ಳಬೇಕು. ಸ್ಪಧರ್ಿಗಳು ಜಿಲ್ಲಾ ಮಟ್ಟ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ವಿಜೇತರಾಗಿ ನಮ್ಮ ಜಿಲ್ಲೆಗೆ ಕೀತರ್ಿತರಬೇಕು ಎಂದು ಹೇಳಿದರು.

  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಮಾತನಾಡಿ, ದೈನಂದಿನ  ಕಚೇರಿ ಕೆಲಸ ಹಾಗೂ ಜೀವನದ ಒತ್ತಡವನ್ನು ಮರೆತು ಎಲ್ಲರೂ ಸಂತಸದಿಂದ ಸ್ಪಧರ್ೆಗಳಲ್ಲಿ ಭಾಗವಹಿಸಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪಧರ್ೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳಾಗುತ್ತವೆ.

 ನಿಮ್ಮಲ್ಲಿರುವ ಉತ್ತಮ ಪ್ರತಿಭೆ ಪ್ರದಶರ್ಿಸಲು ಒಳ್ಳೆಯ ವೇದಿಕೆ ಇದಾಗಿದ್ದು ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು. ಎಲ್ಲ ಕ್ರೀಡೆಗಳಲ್ಲಿಯೂ ಎಲ್ಲರೂ ಭಾಗವಹಿಸಿ ಎಲ್ಲ ಆಟದ ಅನುಭವ ಪಡೆದುಕೊಳ್ಳಬೇಕು. 

  ನಮ್ಮ ಜಿಲ್ಲೆಯಲ್ಲಿ ಆಟಗಾರರು ಸ್ವಿಮಿಂಗ್, ಅಥ್ಲೇಟಿಕ್ಸ್ ಮುಂತಾದ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ  ಅವರು ಮಾತನಾಡಿದರು. 

   ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು. ಶಾಸಕರಾದ ನೆಹರು ಓಲೇಕಾರ ಅವರು ಪಾರಿವಾಳಗಳನ್ನು ಹಾರಿಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೆರಗು ತಂದರು. 

ಕ್ರೀಡಾಕೂಟದಲ್ಲಿ ಅಧ್ಯಕ್ಷರು ಹಾಗೂ ಅತಿಥಿಗಳು ವಾಲಿಬಾಲ್, ಗುಂಡು ಹಾಗೂ ಶಾಟ್ಪುಟ್  ಎಸೆದು ಆಟಆಡಿದರು.

  ಎರಡು ದಿನ ಜರುಗುವ ಆಟಗಳು: ವಾಲಿಬಾಲ್, ಕಬಡ್ಡಿ, ಶೆಟ್ಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್,  ಕೇರಂ, ಚೇಸ್, ಟೆನ್ನಿಕಾಯ್ಟ್, ಥ್ರೋಬಾಳ್, ಅಥ್ಲೇಟಿಕ್ಸ್, ಕ್ರಿಕೆಟ್, ಬಾಸ್ಕೇಟ್ಬಾಲ್, ಟೇಬಲ್ ಟೆನ್ನಿಸ್, ಟೆನ್ನಿಸ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರ, ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ನಿದರ್ೇಶಕರಾದ ಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಚ್.ಎ ಜಮಖಾನೆ, ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಅಧ್ಯಕ್ಷರಾದ ಅಮೃತಗೌಡ ಪಾಟೀಲ, ಎಂ.ಎಸ್ ಜಂಗರಡ್ಡೇರ, ಸಕರ್ಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷರಾದ ರಾಣೇಬೆನ್ನೂರಿನ ಎಂ.ಡಿ.ದ್ಯಾಮಣ್ಣನವರ, ಬ್ಯಾಡಗಿಯ ಎಮ್.ಎನ್.ಕಂಬಳಿ, ಹಾನಗಲ್ಲಿನ ಎನ್.ಎಂ.ಪಾಟೀಲ್, ಶಿಗ್ಗಾಂವಿಯ ಅರುಣ ಹುಡೇದಗೌಡ್ರು, ಸವಣೂರಿನ ಸಿ.ಎಸ್.ಲಕ್ಕನಗೌಡ್ರ, ಸಿ.ಬಿ.ಹಿರೇಮಠ, ಶಿವಲೀಲಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

  ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ಶಾಕೀರ ಅಹ್ಮದ್ ತೊಂಡಿಖಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಡಿ.ಮುದಗಲ್ ಪ್ರಾಥರ್ಿಸಿದರು. ಎಂ.ಎ.ಎಣ್ಣಿ ಸ್ವಾಗತಿಸಿದರು. ನಾಗರಾಜ ನಿರೂಪಿಸಿದರು. ಚಂದ್ರಪ್ಪ ಬ್ಯಾಡಗಿ ವಂದಿಸಿದರು.