ಕ್ರೀಡೆಗಳು ಮನುಷ್ಯನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತವೆ: ಶಿವಾನಂದ ಪಾಟೀಲ

ಕ್ರೀಡೆಗಳು ಮನುಷ್ಯನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತವೆ: ಶಿವಾನಂದ ಪಾಟೀಲ Sports make a person physically and mentally strong: Shivanand Patil

ಮಹಾಲಿಂಗಪುರ  09: ಕ್ರೀಡೆಗಳು ಮನುಷ್ಯನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತವೆ. ಅದರಲ್ಲೂ ಕುಸ್ತಿ ಸದೃಢ ವ್ಯಕ್ತಿಗಳ ಸೆನಸಾಟ. ಜನರಿಗೆ ರೋಮಾಂಚನ ನೀಡುವ ಆಟ. ಹಾಗಾಗಿ ದೇಶಿಯ ಕ್ರೀಡೆಗಳಿಗೆ ಮಹತ್ವ ನೀಡಿ ಜೊತೆಗೆ ಕ್ರೀಡಾ ಪ್ರತಿಭೆಗಳನ್ನು ಹೊರ ತನ್ನಿ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. 

ನಗರದ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೆಯ ನಿಮಿತ್ಯವಾಗಿ ಸೆ.8 ರಂದು ಸೋಮವಾರ ಸ್ಥಳೀಯ ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಮೈದಾನದಲ್ಲಿ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು. 

ಹರಿಯಾಣದ ಕೇಸರಿ ವೀರೇಂದ್ರ ಪೈ ಅವರೊಂದಿಗೆ ಮಹಾರಾಷ್ಟ್ರದ ಸಿಕಂದರ ಪೈ ಶೇಖ ಗೆಲುವು ಸಾಧಿಸಿ ಆಕರ್ಷಕ ಬಹುಮಾನ ಮತ್ತು ಟ್ರೋಫಿ ಗೆದ್ದರು. ದಾವಣಗೇರಿಯ ಕಾರ್ತಿಕ ಪೈ ಕಾಟೆ ಹರಿಯಾಣದ ಹರೀಶ ಕುಮಾರ ಅವರನ್ನು ಸೋಲಿಸಿದರು. ಕರ್ನಾಟಕ ಕಂಠೀರವ ಶಿವಯ್ಯ ಪೈ ಪೂಜಾರಿ ಮತ್ತು ಕುರುಡೆವಾಡಿಯ ಅಬುಬಕರ ಪೈ ಚೌಸ ಸಮಬಲ ಹೊಂದಿದರು.ಕೊಲ್ಲಾಪುರದ ನಾಗರಾಜ ಪೈ ಬಸಿಡೊನಿ ಪಂಚಾಬದ ಪ್ರದೀಪಸಿಂಗ ಪೈ ಅವರನ್ನು ಸೋಲಿಸಿ ಗೆಲುವು ಕೊನೆಗೆ ಗೊಡಗೇರಿ ತಾಲೂಕಿನ ಪ್ರಕಾಶ ಇಂಗಳೆ ಗೆಲವು ಕಂಡರು.  

50 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಕುಸ್ತಿ ಪ್ರದರ್ಶಿಸಿದರು.ಖ್ಯಾತ ಕುಸ್ತಿ ಪಟುಗಳು ಅಕಾಡದಲ್ಲಿ ತೋಡೆ ತಟ್ಟಿ ಶೇಡ್ಡು ಹೊಡೆದು ಒಬ್ಬರಿಗೋಬ್ಬರು ಸೇನಸಾಡುತ್ತಿದ್ದರೆ, ಇತ್ತ ಪ್ರೇಕ್ಷಕರು ಸಿಳ್ಳೆ, ಕುಗಾಟ, ಜೈಕಾರ, ಚಪ್ಪಳೆಯ ಸದ್ದು ಕೇಳಿ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿತ್ತು. ಪ್ರತಿ ವರ್ಷ ಜಾತ್ರೆಯ ಮರು ರಥೋತ್ಸವದಂದು ನಡೆಯುವ ಕುಸ್ತಿ ಪಂದ್ಯಾವಳಿಗಳನ್ನು ಈ ಬಾರಿ ಮರುರಥೋತ್ಸವದ ಮರುದಿನ ಆಯೋಜಿಸಿದ್ದರಿಂದ ಸಾವಿರಾರು ಜನ ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿ ಪ್ರೇಮಿಗಳು ಬಂದು ಕುಸ್ತಿಪಂದ್ಯಾವಳಿ ವಿಕ್ಷಿಸಿದರು.ಜವಳಿ ಸಚಿವ ಶಿವಾನಂದ ಪಾಟೀಲ, ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ, ಪುರಸಭೆ ಸದಸ್ಯ ಪ್ರಲ್ಲಾದ ಸಣ್ಣಕ್ಕಿ, ಕಾಂಗ್ರೆಸ್ ಕಿಸಾನ ಸಮಿತಿ ಜಿಲ್ಲಾಧ್ಯಕ್ಷ ಆನಂದ ಹಟ್ಟಿ, ಉದ್ಯಮಿ ಶ್ರೀಶೈಲ ಭಜಂತ್ರಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜ ರಾಯರ ನಂಬರ ಒ ನ್ ಕುಸ್ತಿಗೆ ಚಾಲನೆ ನೀಡಿದರು.ಶಾಸಕಽ ಸಿದ್ದು ಸವದಿ, ಜಾತ್ರಾ ಕಮೀಟಿ ಅಧ್ಯಕ್ಷ ರವಿಗೌಡ ಪಾಟೀಲ,ಮುಖಂಡರಾದ ಸಿದ್ದು ಕೊಣ್ಣೂರ, ಡಾಽಎ.ಆರ್‌.ಬೆಳಗಲಿ, ಎಪಿಎಂಸಿ ಅಧ್ಯಕ್ಷ ದೇವಲ ದೇಸಾಯಿ, ಡಾ. ಪದ್ಮಜೀತ ನಾಡಗೌಡ ಪಾಟೀಲ,ಅಶೋಕಗೌಡ ಪಾಟೀಲ, ಸುಭಾಷ್ ಪಾಟೀಲ,ಲಕ್ಷ್ಮಣಗೌಡ ಪಾಟೀಲ,ಶೇಖರ ಅಂಗಡಿ, ದರೇಪ್ಪ ಸಾಂಗ್ಲೀಕರ,ಈರ​‍್ಪ ದಿನ್ನಿಮನಿ,ಮಹಾಲಿಂಗಪ್ಪ ಸನದಿ, ನಿಂಗಪ್ಪ ಬಾಳಿಕಾಯಿ,ಶಿವಲಿಂಗ ಘಂಟಿ, ಶಂಕರಗೌಡ ಪಾಟೀಲ,ಚನ್ನಯ್ಯಾ ಛಟ್ಟಿಮಠ, ಮಹಾದೇವ ಮಾರಾಪೂರ,ಬಸವರಾಜ ಚಮಕೇರಿ, ರವಿ ಜವಳಗಿ, ಚನ್ನಬಸು ಯರಗಟ್ಟಿ,ಪ್ರಕಾಶ ಅರಳಿಕಟ್ಟಿ, ಶಿವಾನಂದ ಕಾರಜೋಳ,ಚಿದಾನಂದ ಧರ್ಮಟ್ಟಿ, ಮಹೇಶ ಜಾಧವ, ಮಹಾಲಿಂಗಪ್ಪ ಜಕ್ಕನ್ನವರ, ಅಶೋಕ ಅಂಗಡಿ,ರಮೇಶ ಕೆಸರಗೊಪ್ಪ,ಮುದಕಪ್ಪ ಮಾಳಿ,ಬಂದು ಪಕಾಲೀ, ಅಪ್ಪಾಸಾಬ ನಾಲಬಂದ, ಮಹಾಲಿಂಗಪ್ಪ ಮಾಳಿ, ವಿನೋದ ಸಿಂಪಿ,ಶಿವಾನಂದ ಹುಣಶ್ಯಾಳ,ಪುರಸಭೆ ಮುಖ್ಯಾಧಿಕಾರಿ ಎನ್‌.ಎ.ಲಮಾಣಿ, ಪುರಸ ಭೆಯ ಸರ್ವ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ನಗರದ ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ಅತಿಥಿಗಳಾಗಿ ಭಾಗವಹಿಸಿದ್ದರು.ಶಿಕ್ಷಕ ಪರಶುರಾಮ ಆಲಗೂರ ನಿರೂಪಿಸಿ,ವಂದಿಸಿದರು.