ಕ್ರೀಡೆಗಳಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಲು ಸಾಧ್ಯ: ಶಾಸಕ ಪಾಟೀಲ

ಗದಗ 10: ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ  ಸರ್ಕಾರಿ  ನೌಕರರು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಕಚೇರಿ ಕೆಲಸದಲ್ಲಿನ  ಕಾರ್ಯಕ್ಷಮತೆಯನ್ನು   ಹೆಚ್ಚಿಸಿಕೊಳ್ಳಬಹುದು ಎಂದು ಗದಗ ಶಾಸಕ ಎಚ್.ಕೆ.ಪಾಟೀಲ ನುಡಿದರು.

ಗದಗ ಬೆಟಗೇರಿ  ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ  ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ  ಇವರ ಸಂಯುಕ್ತ ಆಶ್ರಯದಲ್ಲಿ  ಏರ್ಪಡಿಸಲಾಗಿದ್ದ  ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು  ಧ್ವಜಾರೋಹಣ ನೆರವೇರಿಸುವುದರೊಂದಿಗೆ ಉದ್ಘಾಟಿಸಿ  ಅವರು  ಮಾತನಾಡಿದರು.  

ಪ್ರತಿಯೊಬ್ಬರಿಗೂ  ಆಟದ ಅಭಿರುಚಿ ಮನಸ್ಸಿಗೆ  ನೆಮ್ಮದಿ ಹಾಗೂ   ಸಮಾಧಾನ ತಂದುಕೊಡುತ್ತದೆ.  ಹೆಚ್ಚಿನ ಸಂಖ್ಯೆಯಲ್ಲಿ  ನೌಕರರು   ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು  ಎಚ್.ಕೆ.ಪಾಟೀಲ  ತಿಳಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಮಾತನಾಡಿ ಆರೋಗ್ಯ ಸಂಪತ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದರು.  ಇತ್ತೀಚೆಗೆ  ಸರ್ಕಾರಿ ನೌಕರರು  ಕೆಲಸದೊತ್ತಡದಿಂದ ದೈಹಿಕ ಹಾಗೂ ಮಾನಸಿಕ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ.  ಕಾರ್ಯಾಂಗದ ಒಂದು ಭಾಗವಾಗಿ ಸರ್ಕಾರಿ ನೌಕರರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.  ನೌಕರರು ಮಾನಸಿಕ ಹಾಗೂ ದೈಹಿಕ ಸದೃಢತೆ ಕಾಯ್ದುಕೊಳ್ಳಲು    ಪ್ರತಿದಿನ ಕನಿಷ್ಟ ಒಂದು ಗಂಟೆಯನ್ನು  ಕ್ರೀಡೆಗಾಗಿ ಮೀಸಲಿಡಬೇಕು  ಎಂದು ಎಸ್.ವಿ. ಸಂಕನೂರ  ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ದ ಅಧ್ಯಕ್ಷ  ರವಿ ಗುಂಜೀಕರ್ ಅವರು  ಗದಗ ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ   ರಾಜ್ಯ ಮಟ್ಟದಲ್ಲಿಯೂ ಪ್ರತಿನಿಧಿಸಿ  ವಿಜೇತರಾಗಬೇಕು. ಕೆಲಸದೊತ್ತಡದಿಂದ ಹೊರಬರಲು ಕೆಲಸದಲ್ಲಿ ದಕ್ಷತೆ ಹೆಚ್ಚಿಸಲು  ಕ್ರೀಡೆ ಹಾಗೂ ಸಾಂಸ್ಕೃತಿಕ ಕಾಯಕ್ರಮಗಳಲ್ಲಿ ಉತ್ಸಾಹದಿಂದ   ಪಾಲ್ಗೊಳ್ಳಬೇಕು ಎಂದರು.       

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ    ಹನುಮಂತಪ್ಪ ಪೂಜಾರ,  ಜಿಲ್ಲಾಧಿಕಾರಿ  ಎಂ.ಜಿ. ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ. ಆನಂದ್ ಕೆ,  ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ , ತಾಲೂಕಾ ಘಟಕದ ಅಧ್ಯಕ್ಷರುಗಳಾದ ಬಸವರಾಜ ಬಳ್ಳಾರಿ, ಆನಂದ ಬನಪ್ಪನವರ, ಜಗದೀಶ ಮಡಿವಾಳರ, ಶರಣಗೌಡ ಪಾಟೀಲ, ಎಂ.ಎ. ಹಾದಿಮನಿ,  ಗೌರವಾಧ್ಯಕ್ಷ  ಆರ್.ಎಮ್. ನಿಂಬನಾಯ್ಕರ್, ಕೋಶಾಧ್ಯಕ ಡಾ. ಸತೀಶ ಕಟ್ಟಿಮನಿ,   ಪ್ರಧಾನ ಕಾರ್ಯದರ್ಶಿ  ಕೆ.ಎಫ್. ಹಳ್ಯಾಳ,   ಬಿ.ಎಸ್. ಅಣ್ಣಿಗೇರಿ,   ಜಿಲ್ಲಾ ಮತ್ತು ತಾಲೂಕಾ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಹಾಗೂ   ಸರ್ಕಾರಿ ನೌಕರರು   ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು. 

ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು.  ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು.  ಎಸ್.ಆರ್. ಬಂಡಿ ವಂದಿಸಿದರು.    ವೈ.ಕೆ.ಚೌಡಾಪುರ ಕಾರ್ಯಕ್ರಮ ನಿರೂಪಿಸಿದರು.