ನೌಕರರ ಕಾರ್ಯಕ್ಷಮತೆ ಹೆಚ್ಚಳಕ್ಕೆ ಕ್ರೀಡೆ ಸಹಕಾರಿ

ಲೋಕದರ್ಶನ ವರದಿ

ರಾಮದುರ್ಗ 14: ತಾಲೂಕಿನ ಅಭಿವೃದ್ಧಿ ಸ್ಥಳೀಯ ಗ್ರಾಮ ಪಂಚಾಯತಿಗಳ ಮೇಲೆ ಅವಲಂಭಿತವಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಗಳು ಪ್ರಗತಿ ಸಾಧಿಸಲು ಪಂಚಾಯತ್ ನೌಕರರ ಕಾರ್ಯಕ್ಷಮತೆ ಅಗತ್ಯವಿದೆ. ಗ್ರಾಮ ಪಂಚಾಯತ ನೌಕರರು ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಗತಿಗೆ ಶ್ರಮಿಸಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಕರೆ ನೀಡಿದರು.

ತಾಲೂಕಿನ ಕೆ.ಚಂದರಗಿ ಕ್ರೀಡಾ ಶಾಲಾ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರಿಗಾಗಿ ಶನಿವಾರ ಏರ್ಪಡಿಸಿದ ತಾಲೂಕಾ ಮಟ್ಟಡ ಕ್ರೀಡೆ ಹಾಗೂ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೈಹಿಕ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಉತ್ತಮವಾಗಿ ಕೆಲಸ ನಿರ್ವಹಸಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಒತ್ತಡದ ಮಧ್ಯ ಸೇವೆ ಸಲ್ಲಿಸುತ್ತಿರುವ ಪಂಚಾಯತ್ ರಾಜ್ ಇಲಾಖೆಯ ನೌಕರರು ದೈಹಿಕ ಹಾಗೂ ಮಾನಸಿಕ ಸದೃಢತೆಗಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಹಬ್ಬ ಏರ್ಪಡಿಸಿದ್ದು ಶ್ಲಾಘನೀಯ ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಯೋಗ, ಕ್ರೀಡೆಗಳನ್ನು ಪ್ರೋತ್ಸಾಹಿತ್ತಾ ಆರೋಗ್ಯಯುತ ದೇಶ ನಿಮರ್ಾಣಕ್ಕೆ ಶ್ರಮಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಪಿಟ್ ಇಂಡಿಯಾದಡಿ ಕಾರ್ಯಕ್ರಮ ಆಯೋಜಿಸಿ ಆರೋಗ್ಯಕ್ಕೆ ಒತ್ತು ನೀಡುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಸರಕಾರ ಜಾರಿಗೆ ತಂದ ಯೋಜನೆಗಳು ಸಕಾರಗೊಳ್ಳಲು ನಾಗರಿಕರ ಸಹಕಾರ ಅಗತ್ಯವಿದೆ ಎಂದರು.

ಗ್ರಾ.ಪಂ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕಾಮರ್ಿಕ ಮುಖಂಡ ವ್ಹಿ.ಪಿ. ಕುಲಕಣರ್ಿ ಮಾತನಾಡಿ, ನಾಗರಿಕತೆಗಳ ಪ್ರಾರಂಭಗೊಂಡಾಗಿನಿಂದ ಕ್ರೀಡೆಯನ್ನು ಕಾಣುತ್ತಿದ್ದೇವೆ. ಯಾವ ದೇಶ ಕ್ರೀಡೆಯಲ್ಲಿ ಪ್ರಗತಿ ಹೊಂದಿರುತ್ತದೆಯೋ ಆ ದೇಶ ಸರ್ವ ರಂಗಗಳಲ್ಲೂ ಪ್ರಗತಿ ಸಾಧಿಸುತ್ತದೆ ಎಂದರು.

ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಮುರುಳಿಧರ ದೇಶಪಾಂಡೆ ಮಾತನಾಡಿ, ಒತ್ತಡದ ಬದುಕಿನಲ್ಲಿ ಜೀವನ ಸಾಗಿಸುತ್ತಿರುವ ಗ್ರಾ.ಪಂ ನೌಕರರು ಸಂತೋಷದಿಂದ ಒಂದೇ ಕುಟುಂಬದ ಸದಸ್ಯರಂತೆ 2 ದಿನಗಳಾದರೂ ಕಾಲ ಕಳೆಯಲೆಂಬ ಉದ್ದೇಶದಿಂದ ಕ್ರೀಡಾ ಚಟುವಟಿಕೆ ಏರ್ಪಡಿಸಲಾಗಿದೆ ಎಂದರು.

ಕ್ರೀಡಾ ಶಾಲೆಯ ಪ್ರಾಚಾರ್ಯ ಎ.ಎನ್. ಮೋದಗಿ ಮಾತನಾಡಿದರು. ತಾಲೂಕಾ ದೈಹಿಕ ಶಿಕ್ಷಣ ನಿದರ್ೇಶಕ ಪಿ.ಡಿ ಕಾಲವಾಡ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.

ಗ್ರಾ.ಪಂ ಅಧ್ಯಕ್ಷ ಹಣಮಂತ ಕೌಜಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಅಧ್ಯಕ್ಷೆ ಶಕುಂತಲಾ ವಡ್ಡರ ಕ್ರೀಡಾ ಜ್ಯೋತಿ ಸ್ವೀಕರಿಸಿದರು.

ಜಿ.ಪಂ ಸದಸ್ಯರಾದ ಜಹೂರ ಹಾಜಿ, ಶಿವಕ್ಕ ಬೆಳವಡಿ, ಮಾರುತಿ ತುಪ್ಪದ, ಕೃಷ್ಣಪ್ಪ ಲಮಾಣಿ, ತಾ.ಪಂ ಉಪಾಧ್ಯಕ್ಷೆ ಲಕ್ಷ್ಮವ್ವ ವಾರಿಮನಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಸಂಘದ ತಾಲೂಕಾಧ್ಯಕ್ಷ ವಿಜಯಕುಮಾರ ವನಕ್ಯಾಳ, ಪಿಡಿಓ ಬಲರಾಮ ಲಮಾಣಿ, ಮುಖಂಡರಾದ ವೆಂಕಪ್ಪ ಬಂಡಿವಡ್ಡರ, ಸಂಗಪ್ಪ ಪಾಕನಟ್ಟಿ, ಹಣಮಂತ ಬಂಡಿವಡ್ಡರ, ಎಪಿಎಂಸಿ ಸದಸ್ಯ ದ್ಯಾವಪ್ಪ ಬೆಳವಡಿ ಸೇರಿದಂತೆ ಇತರರಿದ್ದರು. ಪಿಡಿಓ ಆರ್.ಬಿ. ರಕ್ಕಸಗಿ ಸ್ವಾಗತಿಸಿದರು. ಎಸ್.ವ್ಹಿ. ಹೊಂಗಲ ವಂದಿಸಿದರು.