ಲೋಕದರ್ಶನ ವರದಿ
ರಾಯಬಾಗ 01: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ವಿಜಯಪುರ ಸ.ಪ್ರ.ದ.ಕಾಲೇಜಿನ ದೈಹಿಕ ನಿರ್ದೇಶಕ ಡಾ.ಅಶೋಕ ಜಾಧವ ಹೇಳಿದರು.
ಶುಕ್ರವಾರ ತಾಲೂಕಿನ ಕುಡಚಿ ಪಟ್ಟಣದ ಬಿ.ಶಂಕರಾನಂದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಏಕ ವಲಯ ಪುರುಷ ಮತ್ತು ಮಹಿಳೆಯರ ಟೈಕ್ವಾಂಡೊ ಕರಾಟೆ ಪಂದ್ಯಾವಳಿ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಟೈಕ್ವಾಂಡೊದಂತಹ ಸಮರ ಕಲೆಯ ಕ್ರೀಡೆಗಳನ್ನು ಕಲಿಯುವುದರಿಂದ ತಮ್ಮ ಸ್ವರಕ್ಷಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಕುಡಚಿ ಬಿ.ಎಸ್.ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಎಮ್.ಎನ್.ದಾನ್ನಣ್ಣವರ, ಬಿಎಮ್.ತುಳಸಿಗೇರಿ, ಶಾಹಿಸ್ಸಾ ಹವಾಲ್ದಾರ, ಪ್ರಕಾಶ ವಟಗೋಡೆ, ಸಾಧಿಕ ರೋಹಿಲೆ, ವಾಯ್.ಬಿ.ಭಜಂತ್ರಿ, ಎನ್.ಆರ್.ಖವಟಕೊಪ್ಪ, ಡಾ.ವಿ.ಟಿ.ರೋಡನ್ನವರ, ಕಾಂಚನ ಬಾಬರ, ಎಮ್.ಎಲ್.ಖಜ್ಜಿಡೋಣಿ, ಎಸ್.ಎಸ್.ಕೊಕಟನೂರ, ಆರ್.ಎಮ್.ಮಹೇಶ ವಾಡಗಿ, ಎ.ಎಸ್.ಕಾಂಬಳೆ ಸೇರಿದಂತೆ ಅಂತರ ಮಹಾವಿದ್ಯಾಲಯದ ಕ್ರೀಡಾಪಟುಗಳು ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಅಂತರರಾಷ್ಟ್ರೀಯ ತರಬೇತುದಾರ ಎಸ್.ಕೆ.ಪರಪ್ಪಾ ಹಾಗೂ ಅಂಜಲಿ ಪರಪ್ಪಾ ಕಾರ್ಯ ನಿರ್ವಹಿಸಿದರು. ಎಸ್.ಬಿ.ಗಣಿ ಸ್ವಾಗತಿಸಿದರು, ವಿ.ಎಸ್.ವಾವರೆ ನಿರೂಪಿಸಿದರು, ಎನ್.ಆರ್.ಖವಟಕೊಪ್ಪ ವಂದಿಸಿದರು.
ಸಮಗ್ರ ವಿರಾಗ್ರಣಿ ಪ್ರಶಸ್ತಿ: ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮುಧೋಳ ಬಿವಿವಿಎಸ್ ಎಸ್.ಆರ್.ಕಂಠಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪಡೆದುಕೊಂಡಿತು. ದ್ವಿತೀಯ ಸ್ಥಾನ ಇಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ತೃತೀಯ ಸ್ಥಾನವನ್ನು ರಾಯಬಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಡೆದುಕೊಂಡವು.
ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮುಧೋಳ ಬಿವಿವಿಎಸ್ ಎಸ್.ಆರ್.ಕಂಠಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪಡೆದುಕೊಂಡಿತು. ದ್ವೀತಿಯ ಸ್ಥಾನ ವಿಜಯಪುರದ ಎಸ್.ಬಿ.ಕಲಾ ಹಾಗೂ ಕೆ.ಸಿ.ಪಿ.ವಿಜ್ಞಾನ ಮಹಾವಿದ್ಯಾಲಯ ಹಾಗೂ ತೃತೀಯ ಸ್ಥಾನವನ್ನು ಕುಡಚಿಯ ಬಿ.ಶಂಕರಾನಂದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪಡೆದುಕೊಂಡವು.