ಲೋಕದರ್ಶನವರದಿ
ರಾಣೇಬೆನ್ನೂರು ಕ್ರೀಡೆಗಳು ಪ್ರತಿಯೊಬ್ಬ ವಿದ್ಯಾಥರ್ಿಗಳ ಜೀವನದಲ್ಲಿ ಬದಲಾವಣೆ ತರಲಿದೆ. ಕ್ರೀಡಾಚಟುವಟಿಕೆಯಿಂದ ವಿದ್ಯಾಥರ್ಿಗಳಲ್ಲಿ ಮಾನಸಿಕ, ದೈಹಿಕ ಮತ್ತು ಭೌದ್ಧಿಕ ಬೆಳೆವಣಿಗೆಯ ಜೊತೆಗೆ ವ್ಯಕ್ತಿತ್ವವನ್ನು ನಿರ್ಮಾ ಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ. ಬದುಕಿನ ಭವಿಷ್ಯಕ್ಕೆ ಇಂತಹ ಸ್ಪಧರ್ಾತ್ಮ ಕ್ರೀಡಾಚಟುವಟಿಕೆಗಳ ಪ್ರತಿಯೊಬ್ಬರು ಪಠ್ಯೇತರ ವಟುವಟಿಕೆಯಾಗಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಕಾಕೋಳ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಏಕನಾಥ ಭಾನುವಳ್ಳಿ ಹೇಳಿದರು.
ಶನಿವಾರ ನಗರ ಹೊರವಲಯದ ಹುಣಸಿಕಟ್ಟಿ ರಸ್ತೆಯ ವಿದ್ಯಾಗಿರಿ ದೆಹಲಿ ಸೆಂಟ್ರಲ್ ಸ್ಕೂಲ್ನಲ್ಲಿ ನಡೆದ ಸಿಬಿಎಸ್ಇ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಶಿಕ್ಷಣ ನಮ್ಮ ವಿದ್ಯಾಥರ್ಿಗಳ ಬದುಕಿನಲ್ಲಿ ಅನೇಕ ಗೊಂದಲಗಳನ್ನು ಸೃಷ್ಠಿಮಾಡುತ್ತಿದೆಯಾದರೂ ಬದಲಾದ ವಾತಾವರಣಕ್ಕೆ ಈ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳುವುದು ಮಕ್ಕಳಿಗೂ ಮತ್ತು ಪಾಲಕರಿಗೂ ಅಗತ್ಯ ಅನಿವಾರ್ಯವು ಆಗಿದೆ ಎಂದರು.
ಶಿಕ್ಷಣ ಸಂಸ್ಥೆಗಳು ಆರಂಭಿಸುವುದು ಬಹಳ ಸುಲಭ. ಆದರೆ ಅವುಗಳನ್ನು ವ್ಯವಸ್ಥಿತ ರೀತಿಯಲ್ಲಿ ತಗೆದುಕೊಂಡು ಹೋಗುವುದು ಅಷ್ಟೇ ಕಷ್ಟಕರ ಸಂಗತಿಯಾಗಿದೆ.
ಹೊರಜಗತ್ತಿಗೆ ಶಿಕ್ಷಣ ವ್ಯಾಪಾರೀಕರಣವಾಗಿದೆ ಎನ್ನುವ ಆರೋಪಗಳು ಇದ್ದರೂ ಸಹಿತ ಸಂಸ್ಥೆ ಕಟ್ಟಿ ಅದನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಾದರೆ ಆ ಶಾಲೆಗಳಿಗೆ ಉತ್ತಮವಾದ ಮತ್ತು ಗುಣಮಟ್ಟ ಶಿಕ್ಷಣ ನೀಡುವ ಶಿಕ್ಷಕರು ಬೇಕಾಗುತ್ತದೆ. ಎಂದು ಶಿಕ್ಷಣ ಸಂಸ್ಥೆಗಳು ಅನುಭವಿಸುವ ಪರಿಸ್ಥಿತಿಯನ್ನು ವಿವರಿಸಿ ಮಾತನಾಡಿದ ಭಾನುವಳ್ಳಿ ಅವರು ಇದಕ್ಕಾಗಿ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಗುಣಮಟ್ಟದ ಶಿಕ್ಷಣ ನೀಡಬೇಕಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ತೋಗಟವೀರ ಅವರು, ತಮ್ಮ ಸಂಸ್ಥೆ ಆರಂಭಿಸಿರುವುದು ವ್ಯಾಪಾರ ಮಾಡುವುದಕ್ಕಲ್ಲ. ತಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಸಂಜೀವಪ್ಪ ತೊಗಟವೀರ ಅವರ ಶಿಕ್ಷಣ ಪ್ರೇಮದಿಂದ ಈ ಸಂಸ್ಥೆ ಹುಟ್ಟುಹಾಕಲಾಗಿದೆೆ ಎಂದರು.
ಶಾಲಾ ಪ್ರಾಚಾರ್ಯ ಪ್ರಮೋದ ಮಾಳದಕರ, ಸದಸ್ಯರಾದ ಮಂಜು ತೊಗಟವೀರ, ಗೌರವಾಧ್ಯಕ್ಷ ಅಶೋಕ ತೊಗಟವೀರ, ವಿಜಯಲಕ್ಷ್ಮೀ ಪೂಜಾರ, ಶಾಲಿನಿ ತೊಗಟವೀರ, ಸುಶೀಲ ತೊಗಟವೀರ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಜಿಲ್ಲೆಯ 7 ತಾಲೂಕಿನ 13 ಸಿಬಿಎಸ್ಇ ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾಥರ್ಿಗಳು ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ಸೋಮವಾರ ಸಂಜೆ 4 ಗಂಟೆಗೆ ಕ್ರೀಡಾಪಟುಗಳಿಗೆ ಬಹುಮಾನ ವಿತರಣಾ ಸಮಾರಂಭವು ನಡೆಯಲಿದೆ ಎಂದು ದೈಹಿಕ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.