ಲೋಕದರ್ಶನವರದಿ
ರಾಣೇಬೆನ್ನೂರು29:ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆಗಳು ಅವಶ್ಯಕ. ದೇಹವನ್ನು ದಂಡಿಸಿದರೆ ಮನಸ್ಸನ್ನು ನಿಗ್ರಹಿಸುವ ಸಾಮಾಥ್ರ್ಯ ವೃದ್ಧಿಸಲಿದೆ ಎಂದು ಗ್ರಾಪಂ ಅಧ್ಯಕ್ಷ ಅಷ್ಟಮೂತರ್ಿ ಓಲೇಕಾರ ಹೇಳಿದರು.
ಕವಲೆತ್ತು ಗ್ರಾಮದ ಬಿಎಜೆಎಸ್ಎಸ್ ಶ್ರೀ ದುಗರ್ಾಮಾತಾ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕ್ರೀಡೆಗಳು ಆರೋಗ್ಯದ ಜೊತೆಗೆ ಹೆಚ್ಚಿನ ಜನಪ್ರೀಯತೆ ತಂದು ಕೊಡುತ್ತದೆ. ಮಮೊಬೈಲ್ ಹಿಡಿದು ಮೂಲೆ ಸೇರುವುದಕ್ಕಿಂತ ಮೈದಾನಕ್ಕಿಳಿದು ದೇಹವನ್ನು ದಣಿಸಬೇಕು ಎಂದರು.
ಮುಖ್ಯಶಿಕ್ಷಕ ಶ್ರೀನಿವಾಸ ರಾಯಚೂರ, ನಾಗರಾಜ ಹೊನ್ನಪ್ಪನವರ ಸಿಆರ್ಪಿ ಅಶೋಕ ಬಿ.ಕೆ, ಗಜೇಂದ್ರಗೌಡ ಕೆ.ಕೆ, ಟಿ. ವೆಂಕಟೇಶರಡ್ಡಿ, ಜಿ.ಎಸ್. ಓಲೇಕಾರ, ಫಕ್ಕೀರಪ್ಪ ಜಾಢರ, ಮಲ್ಲಿಕಾಜರ್ುನ ಬಾವಿಕಟ್ಟಿ, ರೇಣುಕಾ ಮಾಳದಕರ, ಮೋಹನ್ ನಾಯ್ಕ, ಕೆ.ವಿ. ಸುಂಕಾಪುರ, ಸಿದ್ದೇಶ ಎಸ್.ಜಿ, ಎಫ್.ಆರ್. ಹೊಸಳ್ಳಿ, ಮಾಲತೇಶ ಹಿರೇಮಠ, ಸುಧಾ ಹಡಗಲಿ, ಶರಣಪ್ಪ ಇದ್ದರು