ಕ್ರೀಡೆಗಳು ಆರೋಗ್ಯಕ್ಕೆ ವರದಾನವಾಗಿವೆ: ಕಿರಣ ಸತ್ತಿಗೇರಿ

Sports are boon for health: Kirana Sattigeri

ಕ್ರೀಡೆಗಳು ಆರೋಗ್ಯಕ್ಕೆ ವರದಾನವಾಗಿವೆ:  ಕಿರಣ ಸತ್ತಿಗೇರಿ

ರನ್ನ ಬೆಳಗಲಿ 14:  ರನ್ನ ಬೆಳಗಲಿಯ ಢಪಳಾಪುರ ವಿದ್ಯಾ ವಿಹಾರ ಶಾಲೆಯಲ್ಲಿ ದಿನಾಂಕ:-13-12-2024 ಶುಕ್ರವಾರದಂದು ಮಕ್ಕಳಿಗಾಗಿ ಶಾಲಾ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ ಸ್ಕೌಟ್ಸ್‌ ನ ವಿದ್ಯಾರ್ಥಿಗಳು ಅತಿಥಿ ಮಹೋದಯರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ತಾಯಿ ಶಾರದಾ ದೇವಿಯನ್ನು ಆರಾಧಿಸುವ ಮೂಲಕ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷರಾಗಿರುವಂತಹ ಶ್ರೀಯುತ ಯಲ್ಲನಗೌಡ ಪಾಟೀಲ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಕಖಋ ಆಗಿರುವಂತಹ ಕಿರಣ್‌. ಎಂ. ಸತ್ತಿಗೇರಿಯವರು ಆಗಮಿಸಿದ್ದರು.  

ಜೊತೆಗೆ ಶಾಲೆಯ ವ್ಯವಸ್ಥಾಪಕರಾದ ಶ್ರೀ ವಿವೇಕ ಢಪಳಾಪುರ ಅವರು ಹಾಗೂ ಪ್ರಾಂಶುಪಾಲರಾದ ಲೂಯಿಸ್ ಬರಟೋ ರವರು ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಕುರಿತು ನಿರೂಪಣೆಯನ್ನು ಆರನೇ ತರಗತಿಯಿಂದ ಕುಮಾರಿ ಉನ್ನತಿ ಹಾಗೂ ಕುಮಾರ ಧ್ರುವ ನಡೆಸಿಕೊಟ್ಟರು. ನಂತರ ಕ್ರೀಡಾ ಮಂತ್ರಿಯಾದ ಕುಮಾರಿ ಸಾರಾ ಹಾಗೂ ಅನನ್ಯಾ ನೇತೃತ್ವದಲ್ಲಿ ಕ್ರೀಡಾ ಜ್ಯೋತಿಯ ಸಂಚಲನ ನಡೆಸಿದರು ಮತ್ತು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ನಂತರ ಪ್ರತಿಜ್ಞಾವಿಧಿಯನ್ನು ಘೋಷಿಸಲಾಯಿತು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಹಾಲಿಂಗಪುರದ ಆಗಿರುವಂತಹ ಕಿರಣ ಸತ್ತಿಗೇರಿ ಅವರು ಕ್ರೀಡೆಗಳು ಆರೋಗ್ಯಕ್ಕೆ ವರದಾನವಾಗಿವೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು.  

ನಂತರ ಅತಿಥಿ ಮಹೋದಯರ ನೇತೃತ್ವದಲ್ಲಿ ಕ್ರೀಡೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಕ್ರೀಡೋತ್ಸವದ ಪ್ರಯುಕ್ತ ಹಲವಾರು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. 1 ರಿಂದ 10 ನೆ ತರಗತಿಯವರೆಗೆ ಮಕ್ಕಳು ತಮ್ಮ ತಂಡಗಳಿಗೆ ಅನುಗುಣವಾಗಿ ಅತ್ಯಂತ ಉತ್ಸಾಹದಿಂದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕವಿತಾ ಢಪಳಾಪುರ ಅವರು ಬಹುಮಾನಗಳನ್ನು ನೀಡಿದರು. ಈ ಒಂದು ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದವು  ಮತ್ತು ಬೋಧಕೇತರ ವೃಂದವು ಕೂಡ ಉಪಸ್ಥಿತರಿದ್ದರು.