ಲೋಕದರ್ಶನ ವರದಿ
ವಿಜಯಪುರ: ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿಯಾಗಿದ್ದು, ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಅನುಕೂಲವಾಗುತ್ತದೆ ಎಂದು ಕಲಬುರಗಿಯ ಬ್ಯಾಡಮಿಂಟನ್ ತರಬೇತುದಾರ ಮೊಹಮ್ಮದ ಜಕ್ರಿಯಾ ಶೇಖ ತಿಳಿಸಿದರು.
ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಮಲಿಕ್ ಸಂದಲ ಪಾಲಿಟೆಕ್ನಿಕ ವತಿಯಿಂದ ಹಮ್ಮಿಕೊಳ್ಳಲಾದ ಸೆಟಲ್ ಬ್ಯಾಡಮಿಂಟನ್ ಪಂದ್ಯಾವಳಿಯಲ್ಲಿ ಮುಖ್ಯತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕ್ರೀಡೆಗಳಿಂದ ವಿದ್ಯಾಥರ್ಿಗಳಲ್ಲಿ ಸ್ಪಧರ್ಾ ಮಣೋಭಾವನೆ ಮೂಡಿಸುವುದರ ಜೊತೆಗೆ ನಾಯಕತ್ವ ಗುಣವೂ ವೃದ್ಧಿಸುತ್ತದೆ. ಯುವಕರು ವಿದ್ಯಾಥರ್ಿದೆಸೆಯಿಂದಲೇ ಕ್ರೀಡೆಯತ್ತ ಗಮನ ಹರಿಸಬೇಕು. ಉತ್ತಮ ಕ್ರೀಡಾಪಟುಗಳಾಗುವುದರಿಂದಲೂ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು. ವಿದ್ಯಾಥರ್ಿಗಳಲ್ಲಿ ಸದಾ ಸಾಧಿಸುವ ಛಲ ಹೊಂದಿರಬೇಕು. ಕ್ರೀಡೆಗಳಲ್ಲಿ ಸೋಲು ಗೆಲವು ಮುಖ್ಯವಲ್ಲ ಪಾಲ್ಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎರಡು ದಿನಗಳ ಕಾಲ ನಡೆಯುವ ಸೆಟಲ್ ಬ್ಯಾಡಮಿಂಟನ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲ ಸ್ಪಧರ್ಾಥರ್ಿಗಳು ಉತ್ತಮ ಪ್ರದರ್ಶನ ನೀಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ಎ ಎಸ್ ಪಾಟೀಲ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಬ್ಯಾಡಮಿಂಟನ್ ಪಂದ್ಯಾವಳಿ ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ ಸ್ಪಧರ್ಾಳುಗಳು ಉತ್ತಮ ಪ್ರದರ್ಶನ ನೀಡಿ ಹೆಸರು ತರಬೇಕು ಎಂದು ಕರೆ ನೀಡಿದರು.
ಪಂದ್ಯಾಳಿಯಲ್ಲಿ ಸಿಕ್ಯಾಬ ಕಾಲೇಜಿನ ಅಂತರ ಕಾಲೇಜುಗಳು ಪಾಲ್ಗೊಂಡಿದ್ದ ಸುಮಾರು 200 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಮಲಿಕ್ ಸಂದಲ ಪಾಲಿಟೆಕ್ನಿಕ ನ ಪ್ರಾಚಾಯರ್ೆ ನೇತ್ರಾವತಿ ಪುರೋಹಿತ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘಟಕರಾದ ಅಲ್ತಾಪ ಹುಸೇನ್ ಬಾಗವಾನ, ಎ.ಡಿ.ಮನಿಯಾರ, ಎಂ ಕೆ.ಇನಾಮದಾರ, ಬಸವರಾಜ ತೊರಟ, ಎಸ್ ಬಿ ಗೋಗಿ, ಆರ್.ಎ.ಮುಳವಾಡ, ಸೇರಿದಂತೆ ಮತ್ತೀತರರು ಪಾಲ್ಗೊಂಡಿದ್ದರು.