ಕ್ರೀಡಾ ಪರಿಕರಗಳ ವಿತರಣಾ ಸಮಾರಂಭ

ಲೋಕದರ್ಶನ ವರದಿ

ಬೆಳಗಾವಿ 27:  ಬೆಳಗಾವಿ ತಾಲೂಕಿನ ಹೊಸವಂಟಮುರಿ ಗ್ರಾಮ ಪಂಚಾಯತ ಅಡಿಯಲ್ಲಿ ಬರುವ ಗ್ರಾಮೀಣ ವಸತಿ ಮಾಧ್ಯಮಿಕ ಶಾಲೆ ಹೊಸವಂಟಮುರಿ ಶಾಲೆಗೆ ನವ್ಯದಿಶಾ ಸಂಸ್ಥೆಯಿಂದ "ವಿಜ್ಞಾನ ಮತ್ತು ಕ್ರೀಡಾ ಪರಿಕರಗಳ ವಿತರಣಾ ಸಮಾರಂಭವನ್ನು ದಿ.20ರಂದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೊದಲಿಗೆ 1 ಛಚಿಡಿ/ 2ಟಿಜ ಛಚಿಡಿ ಹಾಗೂ ವಿಜ್ಞಾನ ಪ್ರಯೋಗಲಾಯವನ್ನು ಕಾರ್ಯಕ್ರಮದ ಅತಿಥಿಗಳು ಉದ್ಘಾಟಿಸಿದರು ಕಾರ್ಯಕ್ರಮದ ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಶಾಲೆಯ ಮುಖ್ಯ ಗುರುಗಳಾದ ಎಸ್.ಎಸ್. ಮಠದ ಇವರು ನಡೆಸಿಕೊಟ್ಟರು. ಪ್ರಾಸ್ತಾವಿಕ ನುಡಿಗಳಲ್ಲಿ ನವ್ಯದಿಶಾ ಸಂಸ್ಥೆಯ ಸಿಬ್ಬಂದಿ ವರ್ಗಕ್ಕೂ ನವ್ಯದಿಶಾ ಸಂಸ್ಥೆಯ ಆಡಳಿತ ಮಂಡಳಿಗೂ ಶಾಲೆಯ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು. 

ನಂತರ ವೇದಿಕೆ ಮೇಲೆ ಆಸಿನರಾದ ಗಣ್ಯರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಥಾಟಿಸಿದರು. ಆ ನಂತರ ಮಹಾದೇವ ಪಾಟೀಲ ಸುಗ್ರಾಮ ಯೋಜನೆ ವ್ಯವಸ್ಥಾಪಕರು ಸಂಸ್ಥೆಯ ಕಿರುಪರಿಚಯ ಹಾಗೂ ವಿಜ್ಞಾನ ಹಾಗೂ ಕ್ರೀಡಾ ಸಾಮಗ್ರಿಗಳ ಮಹತ್ವ ಮತ್ತು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾಥರ್ಿಗಳಿಗೆ ತಿಳಿಸಿದರು. ತದನಂತರ ರಾಜಶೇಖರ ಪಾಟೀಲ ಸಹಾಯಕ ಯೋಜನಾ ಸಂಯೋಜಕರು ವಿಜ್ಞಾನ ಕೇಂದ್ರ ಬೆಳಗಾವಿ ಮಾತನಾಡುತ್ತಾ  ಮೂಡನಂಬಿಕೆ ಹಾಗೂ ವಿಜ್ಞಾನದ ಬಗ್ಗೆ ಮಕ್ಕಳಿಗೆ ತಿಳಿಸಿದರು. ನೈಜ ಘಟನೆಯ ಮೂಲಕ ಮೂಡನಂಬಿಕೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಲ್.ಎನ್. ಪಾಟೀಲ ಮಾತನಾಡುತ್ತಾ ನವ್ಯದಿಶಾ ಸಂಸ್ಥೆಗೆ ಅಭಿನಂದಿಸಿದರು. ವೇದಿಕೆಯ ಕಾರ್ಯಕ್ರಮ ಸಮಾರೋಪ ಆದ ನಂತರ ರಾಜಶೇಖರ ಪಾಟೀಲ ವಿಜ್ಞಾನ ಕೇಂದ್ರ ಬೆಳಗಾವಿ ಇವರು ವಿಜ್ಞಾನದ ಪ್ರಯೋಗಗಳನ್ನು ವಿದ್ಯಾಥರ್ಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿದರು. ರಾಸಾಯನಿಕ ವಸ್ತುಗಳು ಕ್ರಿಯೇ ಬೆಳಕಿನ ಚಲನವಲನ ಆಯಸ್ಕಾಂತಗಳ ಧ್ರುವಗಳು ಹಾಗೂ ಆಯಸ್ಕಾಂತ ಅನ್ವೇಷಣೆಯಾದ ರೀತಿಯನ್ನು ಮಕ್ಕಳಿಗೆ ತಿಳಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು, ಶಾಲೆಯ ಆಡಳಿತ ಮಂಡಳಿ, ನವ್ಯೆದಿಶಾ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳನ್ನು ಹೊರತುಪಡಿಸಿ 14 ಜನ ಪಾಲ್ಗೊಂಡಿದ್ದರು.