ಕ್ರೀಡೆ, ದೈಹಿಕ ಹಾಗೂ ಮಾನಸಿಕ ಸ್ಥಿರತೆಗೆ ಪೂರಕ: ಆಶಾ ಐಹೊಳೆ

ಬೆಳಗಾವಿ: 19 :  ಕ್ರೀಡೆ ದೈಹಿಕ ಬಲಿಷ್ಟತೆಗೆ ಅಷ್ಟೇ ಅಲ್ಲದೇ ಮಾನಸಿಕ ಸ್ಥಿರತೆಗೂ ಕೂಡಾ ತುಂಬಾ ಮುಖ್ಯವಾಗಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕೆ ಕ್ರೀಡೆ ಸಹಕಾರಿ ಆಗಲಿ ಎಂದು ಜಿಲ್ಲಾ ಪಂಚಾಯತ  ಅಧ್ಯಕ್ಷೆ ಆಶಾ ಐಹೊಳೆ ಹೇಳಿದರು. 

ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕರ ಕಾಯರ್ಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ (ನಗರ ವಲಯ) ಅವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 19 ರಿಂದ 20 ರವರಿಗೆ  ನಗರದ ಕೋಲ್ಹಾಪೂರ ವೃತ್ತದ  ಕ್ರೀಡಾ ವಸತಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಕರಾಟೆ ಸ್ಪಧರ್ೆಗಳ ಕ್ರೀಡಾಕೂಟವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತನ ಉಪಾಧ್ಯಕ್ಷರಾದ ಅರುಣ ಕಾಂಬಳೆ ಅವರು ಮಾತನಾಡಿ,  ಬೆಳಗಾವಿಯಲ್ಲಿ ಎರಡನೇ ಬಾರಿ ರಾಜ್ಯ ಮಟ್ಟದ  ಕರಾಟೆ ಸ್ಪಧರ್ೆಯನ್ನು ಆಯೋಜಿಸಿಲಾಗಿರುವುದು ಸಂತಸದ ಸಂಗತಿಯಾಗಿದ್ದು, ಮಕ್ಕಳು ಸ್ಪಧರ್ೆಯಲ್ಲಿ ವಿಜೇತರಾಗಿ  ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಷ್ಟ್ರದ ಕೀತರ್ಿ ಪತಾಕೆಯನ್ನು ಹಾರಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಉತ್ತರ ವಲಯದ ಶಾಸಕರಾದ ಅನಿಲ ಬೆನಕೆ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ದಕ್ಷಿಣ ವಲಯದ ಶಾಸಕರಾದ ಅಭಯ ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕನರ್ಾಟಕ ರಾಜ್ಯ ಕರಾಟೆ ಅಸೋಸಿಯೇಷನ್ನ ಚೇರ್ಮನರಾದ ಅಲ್ತಾಫ್ ಪಾಶಾ, ಅಧ್ಯಕ್ಷರಾದ ನಿತ್ಯಾನಂದ ಕುಂಬಣ್ಣಾ ಮತ್ತು ಬೆಳಗಾವಿ ಕರಾಟೆ ಅಸೋಸಿಯೇಷನ್ನ ಅಧ್ಯಕ್ಷಕರಾದ ಗಜೇಂದ್ರ ಕಾಪ್ಸಿಕ, ಜಿಲ್ಲಾ ಕರಾಟೆ ಸಂಘದ ಅಧ್ಯಕ್ಷಕರಾದ ಮಹಾವೀರ ಹಾಗೂ ಬೆಳಗಾವಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದರ್ೇಶಕರಾದ ಡಾ.ಎ.ಬಿ ಪುಂಡಲೀಕ ಅವರಿಗೆ ಸನ್ಮಾನ ಮಾಡಲಾಯಿತು.

ಶೈಲಜಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಡಾ. ಎ.ಬಿ ಪುಂಡಲೀಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ 32 ಜಿಲ್ಲೆಗಳ ಸ್ಪಧರ್ಾಳುಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.