ಜಮಖಂಡಿ 02: ಒತ್ತಡ ಮುಕ್ತ ಜೀವನಕ್ಕೆ ಆಧ್ಯಾತ್ಮಿಕತೆಯೇ ದಿವ್ಯ ಓಷಧಿ ಕಾರ್ಯಾಗಾರ ಡಿ. 10 ರಿಂದ 18 ವರಗೆ 9ದಿನಗಳ ಕಾಲ ವಿಶೇಷ ಕಾರ್ಯಕ್ರಮ ಜರುಗಲಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಪವಿತ್ರನ ಮೀರಾ ಅಕ್ಕನವರು ಹೇಳಿದರು.
ನಗರದ ಪೋಟೆ ಪ್ಲಾಟ್ನಲ್ಲಿ ಓಂ ಶಾಂತಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಪವಿತ್ರನ ಆಶ್ರಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾನಸಿಕ ಒತ್ತಡದಿಂದ ಬರುವ ಖಿನ್ನತೆ ಮತ್ತು ಅನೇಕ ಕಾಯಿಲೆಗಳನ್ನು ಹೋಗಲಾಡಿಸಿ ಜೀವನದಲ್ಲಿ ಶಾಂತಿ,ನೆಮ್ಮದಿ, ಆನಂದ,ಏಕಾಗ್ರತೆ ಪಡೆಯಲು ವಯಸಿನ ಮೀತಿ ಇರುವುದಿಲ್ಲ. 9ದಿನಗಳ ಕಾರ್ಯಾಗಾರವನ್ನು ಹೆಸರಾಂತ ಒತ್ತಡ ಪರಿಹಾರ ತಜ್ಞರಾದ ರಾಜಯೋಗಿನಿ ಬಿ,ಕೆ,ಪೊನಂ ಅಕ್ಕನವರು ನಡೆಸಲಿದ್ದಾರೆ. ಸುಖಮಯ ಜೀವನದ ಪರಿವರ್ತನಾ ಉತ್ತಮ, ಬನ್ನಿ ಸಂತೋಷದಿಂದ ಆನಂದಿಸೋಣ, ನನ್ನ ಯತಾರ್ಥ ಪರಿಚಯ ಆತ್ನಜ್ಞಾನ, ಆಳವಾದ ಈಶ್ವರಿಯ ಅನುಭೂತಿ ಆನಂದ ಉತ್ಸವ, ಸುಖಮಯ ಜೀವನದ ರಹಸ್ಯ, ಯೋಗದ ಮೂಲಕ ಸರ್ವ ಸಮಸ್ಯೆಗಳಿಗೆ ಪರಿಹಾರ, ಅಲೌಕಿಕ ಜನ್ಮ ಉತ್ಸವ, ಸೃಷ್ಠಿ ನಾಟಕದ ರಹಸ್ಯ ಸಮಯದ ಪರಿಚಯ, ಶಿವ ಪರಮಾತ್ಮನ ಮಹಾವಾಕ್ಯ ಹೀಗೆ 9 ದಿನಗಳ ಕಾಲ ಕಾರ್ಯಾಗಾರ ನಡೆಯಲಿದೆ ಎಂದರು.
ಅರುಣಕುಮಾರ ಶಾಹ ಮಾತನಾಡಿ. ಪ್ರತಿಯೊಬ್ಬರಲ್ಲಿ ಒತ್ತಡದ ಜೀವನ ನಡೆಯುತ್ತಿದೆ.ಒತ್ತಡ ಮುಕ್ತ ಕುರಿತು ಅಧ್ಯಯನ ಮಾಡಿದ ವಿದ್ವಾಂಸರು ಬರಲಿದ್ದಾರೆ. ಇಂದಿನ ದಿನಮಾನದಲ್ಲಿ ಸಾಮಾನ್ಯ ಮನುಷ್ಯಗೆ ಒತ್ತಡ ಇರುತ್ತದೆ. ಮನಸಿಗೆ ನೋವು ಮಾಡಿಕೊಂಡು ಜೀವನ ಸಾಗಿಸುವ ಜನರಿಗೆ ತೊಂದರೆ ಇದೆ. ಆದರೆ ಯಾರು ಅದನ್ನು ಮನಸಿನಲ್ಲಿ ಮಡಗಿಕೊಂಡು ಇರದೆ ಇರುತ್ತಾರೆ ಅವರಿಗೆ ಸಂತೋಷ ಇರುತ್ತದೆ. ಬರುವ ದಿನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಎಂ.ಎಸ್.ದೇವರವರ, ಪಿಡಿಒ ಸಂಘಟನೆಯ ರಾಜ್ಯಾಧ್ಯಕ್ಷ ರಾಜು ವಾರದ, ತುಪದ, ಪ್ರದೀಪ ಮೆಟಗುಡ್ಡ, ಉಮೇಶ ಸಿದ್ದರಡ್ಡಿ, ಜೋತಿ ಅಕ್ಕನ್ನವರು,ಜಿ,ಕೆ,ಮಠದ ಮಾತನಾಡಿದರು, ವೇದಿಕೆಯಲ್ಲಿ ಅನೇಕರು ಇದ್ದರು.