ಹುಬ್ಬಳ್ಳಿ 02: ನಗರದ ಕುಸುಗಲ್‌ನ ವೇದ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 2024-25ನೇ ಸಾಲಿನ ಶಾಲಾ ಓಲಂಪಿಕ್ ಅಥ್ಲೇಟಿಕ್ ಮೀಟ್‌ನಲ್ಲಿ ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳು 17 ವರ್ಷದೊಳಗಿನ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾಗಿ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ.
ಲಾಂಗ್‌ಜಂಪ್ ವಿಭಾಗದಲ್ಲಿ ಗ್ಲೋರಿಯಾ ಮುರ್ತೋಟಿ ಮತ್ತು ಸಾಕೀಬ್ ಕಾದೀಮ್ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕವನ್ನು ಪಡೆದಿರುತ್ತಾರೆ. ಹೈಜಂಪ್ ವಿಭಾಗದಲ್ಲಿ ಮೇಘರಾಜ ಕುಸುಗಲ್ ಮತ್ತು ನಿಶಿತಾ ಕವಲೂರು ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾರೆ. ಶಾಟ್‌ಪುಟ್ ನಲ್ಲಿ ಸಿಂಚನಾ ಹಿರೇಮಠ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾಳೆ.
14 ವರ್ಷದ ವಯೋಮಾನದೊಳಿಗಿನ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಗಗನ್ ಮತ್ತು ಸುದರ್ಶನ ಹಾಗೂ ಬಾಲಕಿಯರಾದ ಶ್ರೀಜಾ ಮತ್ತು ಸೂನಲ್ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿರುತ್ತಾರೆ.
17ವರ್ಷದೊಳಗಿನ ವಾಲ್ಹಿಬಾಲ್ ಪಂದ್ಯಾವಳಿಯಲ್ಲಿ ರನ್ನರ್‌ಆಪ್ ಆಗಿ ಬೆಳ್ಳಿ ಪದಕವನ್ನು ಪಡೆಯುವದರೊಂದಿಗೆ ಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಜೆ.ಎಸ್.ಎಸ್‌ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು, ಶಾಲೆಯ ಪ್ರಾಚಾರ್ಯೆ ಸಾಧನಾ. ಎಸ್, ಮಹಾವೀರ ಉಪಾದ್ಯೆ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.