ನೆಮ್ಮದಿಯ ಜೀವನಕ್ಕೆ ಅಧ್ಯಾತ್ಮ ಅವಶ್ಯ: ಡಾ.ಪ್ರಭುಗೌಡ

Spirituality is essential for a peaceful life: Dr. Prabhu Gowda

ದೇವರಹಿಪ್ಪರಗಿ 09: ಜೀವನದಲ್ಲಿ ಸುಖ ಶಾಂತಿ ನೆಲೆಸಲು ಅಧ್ಯಾತ್ಮದ ಕಡೆ ಒಲವು ಬೆಳೆಸಿಕೊಂಡಾಗ ಮಾತ್ರ ನೆಮ್ಮದಿಯ ಜೀವನ ಕಳೆಯಲು ಸಾಧ್ಯ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ ಪ್ರಭುಗೌಡ (ಲಿಂಗದಳ್ಳಿ) ಚಬನೂರ ಹೇಳಿದರು. 

ತಾಲೂಕಿನ ಕೋರವಾರ ಗ್ರಾಮದ ಶ್ರೀ ಕಾಶಿ ವಿಶ್ವನಾಥ ಕೈಲಾಸ ಮಂದಿರದಲ್ಲಿ ಶ್ರೀ ಸಿದ್ಧಾರೂಢ ಮಹಾಪುರಾಣ ಮಂಗಲೋತ್ಸವ ಹಾಗೂ ಧರ್ಮ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸತ್ಸಂಗ ಕಾರ್ಯಕ್ರಮದಲ್ಲಿ  ಶ್ರೀಗಳ ಆಶೀರ್ವಾದದಿಂದ ನಮ್ಮ ಬದುಕಿಗೆ ಆಧ್ಯಾತ್ಮಿಕ ಸಂಸ್ಕಾರ ಸಿಗುವುದರ ಜೊತೆಗೆ ಬದುಕಿಗೆ ಮೌಲ್ಯ ದೊರೆಯುತ್ತದೆ. ದಿನದಲ್ಲಿ 2ಗಂಟೆಯಾದರೂ ಶ್ರಮವಹಿಸಿದರೆ ನಮ್ಮ ಆರೋಗ್ಯದ ಜೊತೆ ಚೈತನ್ಯ ಶಕ್ತಿ ಲಭಿಸುತ್ತದೆ. ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮೇಲು ಆದ ಕಾರಣ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಾಮರಸ್ಯ ಮೂಡುತ್ತದೆ ಹಾಗೂ ಶ್ರೀಮಠದ ಕ್ಷೇತ್ರ ಅಭಿವೃದ್ಧಿಗಾಗಿ ವೈಯಕ್ತಿಕವಾಗಿ ಧನಸಹಾಯ ನೀಡುವುದರ ಜೊತೆ ರಾಜ್ಯ ಸರ್ಕಾರದಿಂದ ಸಿಗುವ ಸಹಾಯ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸುವಲ್ಲಿ ಪ್ರಯತ್ನಸುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಚೌಕಿ ಮಠದ ಶ್ರೀ ಶ್ರೋ.ಬ್ರ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಯಾದಗಿರಿ ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಡ್ಯಾಪುರ ಮಾತನಾಡಿ, ಶ್ರೀ ಮಠಕ್ಕೆ ವೈಯಕ್ತಿಕವಾಗಿ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು. 

ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ  ಬೆಳಿಗ್ಗೆ ಅಡ್ಡ ಪಲ್ಲಕ್ಕಿಯೊಂದಿಗೆ ಕಳಸ, ಸುಮಂಗಲಿಯರಿಂದ ಕುಂಭ ಮೆರವಣಿಗೆ, ಪುರವಂತರ ವಾಲಗದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಫೋಟೋ ಮೆರವಣಿಗೆ ನಡೆಯಿತು.ಪುರಾಣಿಕರಾದ ರಮೇಶ ಶಾಸ್ತ್ರಿ ಹಾಗೂ ನಿಂಗಣ್ಣ ಶರಣರಿಗೆ ಮಠದ ಭಕ್ತರಿಂದ ಸನ್ಮಾನಿಸಲಾಯಿತು. 

ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶೇಕರಗೌಡ ಪೊಲೀಸಪಾಟೀಲ,ಪಿಕೆಪಿಎಸ್ ಅಧ್ಯಕ್ಷರಾದ ಸಂಗಮೇಶ ಛಾಯಗೋಳ,ಗ್ರಾ.ಪಂ ಸದಸ್ಯರುಗಳಾದ ಭೀಮನಗೌಡ ಕುಳೆಕುಮಟಗಿ, ಬಸನಗೌಡ ಬಿರಾದಾರ, ಮುಖಂಡರುಗಳಾದ ಶಿವಪ್ಪ ತಾಳಿಕೋಟಿ, ಬಾಪುಗೌಡ ಬಿರಾದಾರ, ಗುರಣ್ಣ ಚಾಂದಕವಟೆ, ನಿಂಗಣ್ಣ ಸಜ್ಜನ್, ಚನ್ನಪ್ಪ ಬದ್ರಗೊಂಡ, ಚಿದಾನಂದ ನಾಸಿ, ಭೀಮನಗೌಡ ಹಳವಣ್ಣಿ, ಬಸವರಾಜ ಸುಂಬಡ, ಚನ್ನಪ್ಪಗೌಡ ಬಿರಾದಾರ, ಅಶೋಕ ಹುಣಸಗಿ, ಸಂತೋಷ ಯತ್ನಾಳ, ಮಾಂತೇಶ ಜಂಬುಗೋಳ, ರಾಮು ಯತ್ನಾಳ, ಮಾಂತಪ್ಪ ಸುಂಬಡ, ಎಂ, ಡಿ,ಮನಹಳ್ಳಿ, ಅವರು ನಿರೂಪಿಸಿದರು, ಕೈಲಾಸ ಮಠದ ಸರ್ವ ಕಾರ್ಯಕರ್ತರು, ಭಕ್ತಾದಿಗಳು, ಗ್ರಾಮದ ಮುಖಂಡರು, ಉಪಸ್ಥಿತರಿದ್ದರು.