ಲೋಕದರ್ಶನವರದಿ
ಮುಧೋಳ05: ರಾಮಕೃಷ್ಣ ಶಾರದಾಂಭಾ ವಿವೇಕಾನಂದ ಆಧ್ಯಾತ್ಮಿಕ ಕೇಂದ್ರದಿಂದ 2000 ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅನುಕೂಲಕ್ಕಾಗಿ ಹಾಗೂ ಮಾನಸಿಕ ಸ್ಥೈರ್ಯಕ್ಕಾಗಿ ಪ್ರೇರಣಾತ್ಮಕ ಹಾಗೂ ಆಧ್ಯಾತ್ಮಿಕ ಶಿಬಿರವನ್ನು ದಾನಮ್ಮದೇವಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಧುರೀಣ ಸತೀಶ ಬಂಡಿವಡ್ಡರ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಇಂತಹ ಕಾರ್ಯಕ್ರಮ ಮಕ್ಕಳ ಹಾಗೂ ಯುವಕರ ಗುರಿ ಮುಟ್ಟಲು ಸಹಕಾರಿಯಾಗುತ್ತದೆ. ಮಕ್ಕಳಿಗೆ ಹಾಗೂ ಯುವಕರಿಗೆ ದಾರಿ ದೀಪವಾಗುತ್ತದೆ ಅಂತ ಹೇಳಿ ಪ್ರತಿವರ್ಷ ಈ ಕಾರ್ಯಕ್ರಮ ನಡೆಸಬೇಕು ಅದಕ್ಕೆ ಬೇಕಾದ ಸಹಾಯ ಸಹಕಾರ ಪ್ರತಿವರ್ಷ ಸತೀಶ ಫೌಂಡೇಶನಿಂದ ಮಾಡುವುದಾಗಿ ಮಾತುಕೊಟ್ಟರು. ಅರಳಿಕಟ್ಟಿ ಫೌಂಡೇಶನ ಅಧ್ಯಕ್ಷ ಟಿ. ಎನ್. ಅರಳಿಕಟ್ಟಿ ಮಾತನಾಡಿ ಈ ಶಿಬಿರ ನಡೆಸುತ್ತಿರುವ ಸಂಸ್ಥೆಗೆ ತಮ್ಮದೂ ಸಹಾಯ ಸಹಕಾರ ಇದೆ ಎಂದು ಹೇಳಿದರು ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿ. ವಾಯ್. ದೇವಣಗಾಂವಿ ಮಾತನಾಡಿದರು. ಕೊಣ್ಣೂರಿನ ಹೊಗಿನಮಠ ಪೂಜ್ಯರಾದ ಷ. ಬ್ರ. ಡಾ. ವಿಶ್ವಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಮಹಾಂತೇಶ ನರಸನಗೌಡರ, ಕೆ. ಹೆಚ್. ಬಳ್ಳೂರ, ಮೃತ್ಯುಂಜಯ ಹಿರೇಮಠ ಹಾಗೂ ಸುರೇಶ ನಿಂಗಪ್ಪನವರ ಭಾಗವಹಿಸಿದ್ದರು. ರಾಮಕೃಷ್ಣ ಸಂಸ್ಥೆಯ ಸದಸ್ಯರಾದ ಶ್ರೀಶೈಲ ಹುನ್ನೂರ ಕಾರ್ಯಕ್ರಮವನ್ನು ನಿರೂಪಿಸಿದರು.