ಬೆಂಗಳೂರು, ಫೆ 07, ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ’ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ ‘ಉದ್ಭವ’ ಚಿತ್ರದಲ್ಲಿ ಗಣೇಶ ಮೂರ್ತಿ ಉದ್ಭವದವರೆಗೆ ಹೆಣೆಯಲಾಗಿದ್ದ ಕಥೆಯ ಮುಂದುವರಿದ ಭಾಗವನ್ನು ‘ಮತ್ತೆ ಉದ್ಭವ’ ದಲ್ಲಿ ಹೆಣೆಯಲಾಗಿದ್ದು, ಗಣೇಶನ ಪವಾಡದ ಹೆಸರಲ್ಲಿ ದೇವಾಲಯದ ಧರ್ಮದರ್ಶಿ ಅಪ್ಪ (ರಂಗಾಯಣ ರಘು) ಹಾಗೂ ಆತನ ಮಗ (ಪ್ರಮೋದ್) ಜನರು ಹಾಗೂ ಪ್ರಭಾವಿ ವ್ಯಕ್ತಿಗಳನ್ನು ಮೂರ್ಖರನ್ನಾಗಿಸುವ ಚಿತ್ರಣಗಳು ಸಖತ್ ಮಜ ಕೊಡುತ್ತವೆಮೂವರ್ತು ವರ್ಷಗಳ ಹಿಂದೆ ರಾತ್ರೋರಾತ್ರಿ ಉದ್ಭವವಾಗಿದ್ದ ಗಣೇಶ ಉದ್ಭವ ಮೂರ್ತಿನಾ ಅಥವಾ ಮಾನವ ಹುಟ್ಟುಹಾಕಿದ್ದ ಎಂಬ ಚರ್ಚೆಯಲ್ಲಿ ಅನೇಕ ಟ್ವಿಸ್ಟ್ ಗಳು, ಚರ್ಚೆ ಹುಟ್ಟು ಹಾಕಿದ್ದು ಯಾರು, ಏಕೆ ಎಂಬ ಸಂಗತಿಗಳನ್ನು ಚಿತ್ರಮಂದಿರದಲ್ಲೇ ನೋಡಿ ಸವಿಯಬೇಕು ನಿರ್ದೇಶ ಕೋಡ್ಲು ರಾಮಕೃಷ್ಣ ಅವರ 1990ರ ಸೂಪರ್ ಹಿಟ್ ಚಿತ್ರ 'ಉದ್ಭವ' ಚಿತ್ರದ ಮುಂದುವರೆದ ಭಾಗ ಎಂಬ ಕಾರಣಕ್ಕೆ 'ಮತ್ತೆ ಉದ್ಭವ' ಹೆಚ್ಚು ಕುತೂಹಲ ಮೂಡಿಸಿತ್ತು. ಆ ಚಿತ್ರಕ್ಕಿಂತ ಹೆಚ್ಚು ಮನರಂಜನೆ ಸಿಗಬಹುದು ಎಂಬ ನಿರೀಕ್ಷೆಯನ್ನು ಹುಸಿಗೊಳಿಸದೆ ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಖುಷಿಪಡಿಸುವಲ್ಲಿ ಯಶಸ್ವಿಯಾಗಿದೆ ರಾಜಕಾರಣಿಯೊಬ್ಬರು ಕಪ್ಪುಹಣವನ್ನು ಮಠವೊಂದರಲ್ಲಿ ಬಚ್ಚಿಡುವುದು, ಸ್ವಾಮೀಜಿಯೊಬ್ಬರ ರಾಸಲೀಲೆ, ಚಿತ್ರನಟಿಯ ರಾಜಕೀಯ ಪ್ರವೇಶ ಸೇರಿದಂತೆ ಬಹುತೇಕ ಘಟನೆಗಳ ಬಗ್ಗೆ ಜನತೆಗೆ ಅರಿವಿರುವ ಕಾರಣ, ತೆರೆಯ ಮೇಲೆ ಆ ದೃಶ್ಯಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಲಾಗಿದೆ, ಇನ್ನು ಇತ್ತೀಚೆಗಷ್ಟೆ ಲವ್ ಮಾಕ್ ಟೇಲ್ ನಂತಹ ಉತ್ತಮ ಚಿತ್ರ ನೀಡಿರುವ ಮಿಲನ ನಾಗರಾಜ್ ಕೂಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.